ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಪ್ರಜಾಕೀಯ – ದೇಶ ಭಕ್ತ ?

ದೇಶ ಭಕ್ತ ?

1. ದೇಶದ ಕಾನೂನನ್ನು ಚಾಚು ತಪ್ಪದೆ ಪಾಲಿಸುವವ.

2. ಯಾವುದೇ ಭ್ರಷ್ಟ ವ್ಯವಸ್ಥೆಗೆ ಆಸ್ಪದ ಕೊಡದವ.

3. ಕಷ್ಟಪಟ್ಟು ದುಡಿದು ತನ್ನ ಕುಟುಂಬವನ್ನು ಪಾಲನೆ ಮಾಡುವವ.

4. ಬೇರೆ ಪ್ರಜೆಗಳಿಗೆ ಮೋಸ ಮಾಡದವ.

5. ಸ್ವಾರ್ಥಕ್ಕಾಗಿ ಸುಳ್ಳು ಹೇಳದವ.

6. ಯಾವುದೆ ಬೇರೆ ಪ್ರಜೆಗಳಿಗೆ ತೊಂದರೆ ಕೊಡದವ.

7. ಬೇರೆ ಪ್ರಜೆಗಳ ವಿಷಯ ಸೂಕ್ಷ್ಮತೆ ಉಳ್ಳವ.

8. ಯಾವುದೇ ಧರ್ಮ, ಜಾತಿ, ಪಂಗಡ ಹಾಗು ಪ್ರಾಂತ್ಯವೆಂಬ ಭೇದ- ಭಾವ ಮಾಡದವ.

9.ತಾನೂ ಶಾಂತಿಯಿಂದ ಬದುಕಿ, ಬೇರೆಯವರ ಶಾಂತಿಯನ್ನು ಭಂಗ ಮಾಡದವ.

  ಪ್ರಜಾಕೀಯಾ ನಂಬಿಕೆ - ಅಬಿವ್ರಧ್ಧಿ

10. ಎಲ್ಲಕ್ಕಿಂತಲೂ ಮಿಗಿಲಾಗಿ, ಮನುಷ್ಯತ್ವ ಉಳ್ಳವ.

ಇವುಗಳನ್ನು ಬಿಟ್ಟು, ಉಳಿದವುಗಳೆಲ್ಲಾ ತೋರಿಕೆಗೆ ಮಾಡುವ ದೇಶ ಭಕ್ತಿ.

ಯಾರಾದರೂ ತನ್ನ ತಾಯಿಯನ್ನು ಪ್ರೀತಿಸುತ್ತೇನೆ ಅಥವಾ ಗೌರವಿಸುತ್ತೇನೆ ಎಂಬ ಡಂಗುರ ಹೊಡೆಯುತ್ತಾನೆಯೆ ?

ನಮ್ಮ ಕರ್ತವ್ಯವನ್ನು ಕಾನೂನು ಬದ್ದವಾಗಿ ಮಾಡಿದಾಗ, ನಾವು ಆ ದೇಶಕ್ಕೆ ಸಲ್ಲಿಸುವ ದೇಶ ಭಕ್ತಿ.

ದೇಶದ ಸಾವಿರ- ಸಾವಿರ ಕೋಟಿ ಕೊಳ್ಳೆ ಹೊಡೆದು ದೇಶ ಭಕ್ತಿಯ ಡಂಗುರ ಹೊಡೆಯುವ ಈ ರಾಜಕಾರಣಿ, ಸರ್ಕಾರಿ ನೌಕರರು, ಭ್ರಷ್ಟ ವ್ಯಾಪಾರಿ ಹಾಗು ಮಾಫಿಯಾಗಳು ಹೇಗೆ ದೇಶ ಭಕ್ತರಾಗುತ್ತಾರೆ. ಇವರು ದೇಶ- ಧ್ರೋಹಿಗಳು.

  ಯಾರಿಗೂ ತಿಳಿದಿರದ ಮುಂಬೈನ ತಾಜ್ ಹೋಟೆಲ್ ಕಟ್ಟಿದ ಕಥೆ !

ಸ್ವಾತಂತ್ರ ದಿವಸ, ಗುಣ ತಂತ್ರ ದಿವಸ, ಗಾಂಧಿ ಜಯಂತಿ ದಿವಸ, ಸಂವಿಧಾನ ಶಿಲ್ಪಿಗಳ ಜಯಂತಿ, ಯೋಧರು ದಿವಸ, ಕಾರ್ಗಿಲ್ ದಿವಸ ಎಂದು ಡಂಗುರ ಹೊಡೆಸಿದರೆ ದೇಶ ಭಕ್ತನಾಗುವನೇ ? ಆ ಯೋಧರಿಗೆ ನ್ಯಾಯಬದ್ದವಾಗಿ ಹೋಗ ಬೇಕಾದ್ದನ್ನು ನೀನೆ ತಿಂದು ಮುಳುಗಿಸಿ, ದೇಶ- ಭಕ್ತಿಯ ಮಾತು ಆಡುವ ಹಕ್ಕು ಕೂಡಾ ನಿನಗಿಲ್ಲ.

ಪ್ರಜೆಗಳೆ ಎದ್ದೇಳಿ, ಧರ್ಮ, ಜಾತಿ, ಪಂಗಡ, ಪ್ರಾಂತ್ಯ ಹಾಗು ಈ ಪೊಳ್ಳು ದೇಶ ಭಕ್ತಿಯಿಂದ ನಮ್ಮೆಲ್ಲರನ್ನೂ ” ಇಮೋಷನಲ್ ಬ್ಲಾಕ್ಮೈಲ್” ಮಾಡುತ್ತಿರುವ ಈ “ಗೋಮುಖ ವ್ಯಾಘ್ರ” ಗಳಿಗೆ ಇನ್ನು ಅವಕಾಶ ಮಾಡಿ ಕೊಡಬೇಡಿ.

  ಉತ್ತಮ ಪ್ರಜಾಕೀಯ ಪಕ್ಷ ಅಧಿಕೃತ ವಾಟ್ಸ್ಯಾಪ್ ಗುಂಪು

ಭ್ರಷ್ಟಾಚಾರವು ನಮ್ಮನ್ನು ಮೂಗಿನವರೆಗೆ ಮುಳುಗಿಸಿದೆ. ಸಂಪೂರ್ಣ ಮುಳುಗುವ ಮೊದಲು ಎಚ್ಚೆತ್ತು ಕೊಳ್ಳಿ.

ಜೈ ಪ್ರಜಾಕೀಯಾ
ಜೈ ಉತ್ತಮ ಪ್ರಜಾಕೀಯಾ ಪಕ್ಷ.

Leave a Reply

Your email address will not be published. Required fields are marked *

Translate »