ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಪ್ರತೀಷ್ಟೆ ಹಾಗು ಪ್ರಚಾರಕ್ಕಾಗಿ ಪರದಾಡುವ ರಾಜಕಾರಣಿಗಳು – ಪ್ರಜಾಕೀಯಾ

ನನ್ನ ಮನೆ – ನನ್ನ ರಾಜ್ಯ- ನನ್ನ ದೇಶ
(ಪ್ರತೀಷ್ಟೆ ಹಾಗು ಪ್ರಚಾರಕ್ಕಾಗಿ ಪರದಾಡುವ ರಾಜಕಾರಣಿಗಳು)

ಹಣ ಪ್ರಜೆಗಳ ತೆರಿಗೆ ಹಣ, ಅದರಿಂದ ಯೋಜನೆ ಡಿಸೈನ್ ಮಾಡಿದವನು ಕಾರ್ಯಾಂಗದಲ್ಲಿ ಕೆಲಸ ಮಾಡುವ ಇಂಜಿನಿಯರುಗಳು, ಅದರ ಎಸ್ಟಿಮೇಟ್ ಮಾಡಿದವರು ಕಾರ್ಯಾಂಗದ ಇಂಜಿನಿಯರುಗಳು, ಕಂಟ್ರ್ಯಾಕ್ಟರುಗಳನ್ನು ಆರಿಸುವುದು (Qualify) ಕಾರ್ಯಾಂಗದ ಇಂಜಿನಿಯರುಗಳು, ಟೆಂಡರ್ ಕರೆಯುವುದು ಕಾರ್ಯಾಂಗದ ಅಧಿಕಾರಿಗಳು, ಕಂಟ್ರ್ಯಾಕ್ಕಟರುಗಳನ್ನು ನಿಯೋಜಿಸುವುದು ಕಾರ್ಯಾಂಗದ ಅಧಿಕಾರಿಗಳು, ಹಣ ಪಾವತಿ ಮಾಡುವುದು ಕಾರ್ಯಾಂಗದ ಅಧಿಕಾರಿಗಳು, ಇತ್ಯಾದಿ.

ಹೀಗಿರುವಾಗ, ನಾನೇ ಮಾಡಿದ್ದು, ನನ್ನಿಂದ ಆದದ್ದು, ಇದಕ್ಕೆ ನಾನೇ ಕಾರಣ ಎಂದು ಎಲ್ಲಾ ಕಡೆ, ತನ್ನ ಭಾವ ಚಿತ್ರವನ್ನು ಹಾಕಿ, ಪ್ರತೀಷ್ಟೆ- ಪ್ರಚಾರಕ್ಕಾಗಿ ಹಾತೊರೆಯುವ ರಾಜಕಾರಣಿಗಳ ಸಣ್ಣ ತನವನ್ನು ಏನೆಂದು ಬಣ್ಣಿಸಲಿ.

ಸರಕಾರವು ಸಾಲ ಮಾಡಿಸಿ ಕಟ್ಟಿಸಿದರೂ, ನಾಳೆ ಆ ಸಾಲದ ಬಡ್ಡಿ, ಕಂತು ಹಾಗು ಸಾಲವನ್ನು ಹಿಂದಿರುಗಿಸ ಬೇಕಾದವರು ಪ್ರಜೆಗಳೇ, ತಮ್ಮ ತೆರಿಗೆ ಹಣದಿಂದ. ರಾಜಕಾರಣಿ, ಕೇವಲ 5 ಅಥವಾ 10 ವರ್ಷ ಇರಬಹುದು. ಇವರು, ಆಡಳಿತದಲ್ಲಿ ಕೇವಲ ಪ್ರಯಾಣಿಕರು. ಪ್ರಜೆಗಳು, 5 ವರ್ಷಕ್ಕೆ ಒಮ್ಮೆ, ಕಿತ್ತು ಬಿಸಾಡುವರು.

ನಾನೊಂದು ಸಾಲ- ಮೂಲ ಮಾಡಿ ಮನೆ ಕಟ್ಟಿಸಿದೆ. ಅದಕ್ಕೆ ಬೇಕಾದ ಎಲ್ಲಾ ಹಣವನ್ನು, ನಾನೇ ಒದಗಿಸ ಬೇಕಲ್ಲವೇ? ಅದರಲ್ಲಿ ಹಣಕ್ಕಾಗಿ ಕೆಲಸ ಮಾಡಿದ ಇಂಜಿನಿಯರ್ ಹಾಗು ಎಲ್ಲಾ ರೀತಿಯ ಕಟ್ಟಡ ಕೆಲಸಗಾರರಿಗೆ ನಾನೇ ಸಂಬಳ ಕೊಡುವೆನು. ಕೆಲಸ ಮುಗಿದ ಮೇಲೆ, ಅವರವರ ಮನೆಗೆ ಹಿಂದುರುಗಿ, ಬೇರೆ ಕೆಲಸದಲ್ಲಿ ಮಗ್ನರಾಗುವರು. ನಾನು ಹಣ ಹಾಕಿ ಕಟ್ಟಿದ ಕಟ್ಟಡ, ನನಗೆ ಬೇಕಾದವರ ಹೆಸರು ಹಾಕುವುದಲ್ಲವೇ ? ಅಂದರೆ, ಅದಕ್ಕೆ ಯಾರು ಹಣ ಒದಗಿಸುವರೋ, ಅದು ಅವರ ಹಕ್ಕು ಹಾಗು ಅದು ಅವರದ್ದೆ ಸೊತ್ತು. ಆದ್ದರಿಂದ ಎಲ್ಲವೂ ಪ್ರಜೆಗಳ ಸೊತ್ತು- ಸಂಪತ್ತು.

ಮೈಸೂರು ಮಹಾರಾಜರು ಕೆ.ಆರ್. ಎಸ್ ಆನೆಕಟ್ಟು ಕಟ್ಟಿಸಿದರು. ತಮ್ಮ ಹೆಂಡತಿಯ ಆಭರಣ ಮಾರಿ, ಹಣ ಒದಗಿಸಿದರು. ಆದರೆ, ಅವರು, ಅದನ್ನು ನಿರ್ಮಿಸಿದ ಇಂಜಿನಿಯರ್ ಸರ್. ಎಮ್. ವಿಶ್ವೇಷರಯ್ಯನವರ ಹೆಸರನ್ನು ವಿಶ್ವ ಪ್ರಖ್ಯಾತಿ ಮಾಡಿದರು. ಈಗಲೂ, ನಾವು, ಅವರನ್ನು ಹೆಚ್ಚಿಗೆ ನೆನಪಿಸಿ ಕೊಳ್ಳುತ್ತೇವೆ.

ರಾಜಕಾರಣಿ, ನಾನು ಮಾಡಿದ್ದು, ನನ್ನಿಂದ ಆದದ್ದು ಎಂದು, ಅದರಲ್ಲಿ ಶಿಲೆಯಲ್ಲಿ ತನ್ನ ಹೆಸರು ಬರೆಸುತ್ತಾನೆ. ಆದರೆ, ಅದು ಪ್ರಜೆಗಳ ಹಾಗು ದೇಶದ ಸೊತ್ತು. ಪ್ರಜೆಗಳ ತೆರಿಗೆ ಹಣದಿಂದ ಕಟ್ಟಿಸಲ್ಪಡುತ್ತದೆ. ಕಟ್ಟಿಸುವವರು, ಕಾರ್ಯಾಂಗದವರು. ಕಾರ್ಯಾಂಗದವರು, ಅದರಲ್ಲಿ ಭೃಷ್ಟಾಚಾರ ಮಾಡದಂತೆ ನೋಡಿ ಕೊಳ್ಳುವುದು, ಪ್ರಜೆಗಳ ಪ್ರತಿನಿಧಿಯ ಪ್ರಾಮುಖ್ಯ ಕೆಲಸ. ಆದರೆ, ಪ್ರತಿನಿಧಿಯೇ ಭೃಷ್ಟಾಚಾರದಲ್ಲಿ ತೊಡಗಿರುವನಲ್ಲವೇ. “ಬೇಲಿಯೆ ಹೊಲವ ಮೇಯುತ್ತಿರುವುದು”. ಕಾರಣ, ಅವನು, ಚುನಾವಣೆಗೆ 15 ಕೋಟಿ ಖರ್ಚು ಮಾಡಿರುವನು.

ಖಂಡಿತಾ, ಆ ಕ್ಷೇತ್ರದ ಜನರ ಅಭಿಪ್ರಾಯದಂತೆ ಯೋಜನೆಗಳು ನಡೆಯಬೇಕು. ಅದರ ಹೆಸರು ಕೂಡಾ ಮೆಜೋರಿಟಿ ಪ್ರಜೆಗಳ ಅಭಿಪ್ರಾಯದಂತೆ ಆಗಬೇಕು. ಯೋಜನೆ ಚಾಲನೆ ಕೊಟ್ಟ ಅಥವಾ ಸಂಪನ್ನವಾದ ತಾರೀಕು ಕೂಡಾ ಅದರಲ್ಲಿ ನಮೂದಿಸ ಬೇಕು. ಪ್ರಜಾಪ್ರಭುತ್ವದಲ್ಲಿ ಯಾರೋ ಒಬ್ಬನ ಹೆಸರು ಹೇಳುವುದು ಅಥವಾ ನಮೂದಿಸುವುದು, ಖಂಡಿತಾ ತಪ್ಪು.

ಒಬ್ಬ ಪ್ರಧಾನ ಮಂತ್ರಿ ಅಥವಾ ಮುಖ್ಯ ಮಂತ್ರಿ, ಅದಕ್ಕಾಗಿ, ಕೋಟಿ ಗಟ್ಟಲೆ ಖರ್ಚು ಮಾಡಿ ಕೊಂಡು ಬಂದು ಶಿಲಾನ್ಯಾಸ ಅಥವಾ ಉದ್ಘಾಟನೆ ಮಾಡುವುದು, ಪ್ರಜೆಗಳ ತೆರಿಗೆ ಹಣದ ದುರುಪಯೋಗ ಖಂಡಿತಾ.

ಆದ್ದರಿಂದ, ಪ್ರಜಾಕೀಯದ ಸರಕಾರವನ್ನು ಪ್ರಜೆಗಳು ಸ್ಥಾಪನೆ ಮಾಡಿದರೆ, ಇಂತಹ ಪ್ರಜೆಗಳ ತೆರಿಗೆ ಹಣದ ದುರುಪಯೋಗ ನಡೆಯಬಾರದು. ಸ್ಥಳಿಯ ಅಧಿಕಾರಿ ಗಳಿಂದಲೇ ಶಿಲಾನ್ಯಾಸ ನಡೆಯಬೇಕು. ಆದರೆ, ಯಾರ ಹೆಸರನ್ನೂ ಹಾಕಬಾರದು. ಪ್ರಜಾಕೀಯ ಪ್ರಜೆಗಳ ಆಡಳಿತ. ಇಲ್ಲಿ ಪ್ರತೀ ಪ್ರಜೆಯು ಸಮಾನ. ಹಾಕಲೇ ಬೇಕೆಂದರೆ, “ಭಾರತ ಸರಕಾರ ಅಥವಾ ರಾಜ್ಯ ಸರಕಾರ” ಎಂದು ಹಾಕಬಹುದು. ವ್ಯಕ್ತಿ ವಿಶೇಷ ಖಂಡಿತಾ ಇರಬಾರದು.

ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ಪ್ರಭು. ಎಲ್ಲಾ ಶ್ರೇಯವು ಪ್ರಜೆಗಳಿಗೆ ಸಲ್ಲಬೇಕು.

ಒಬ್ಬ ವ್ಯಕ್ತಿಯನ್ನು ವೈಭವಿಕರಿಸುವುದು ಖಂಡಿತಾ ನಿಲ್ಲಬೇಕು. ಇಲ್ಲಿ ಪ್ರಜೆಗಳ, ರಾಜ್ಯದ ಹಾಗು ದೇಶದ ವೈಭವಿಕರಣ ಆಗಬೇಕು.

ಜೈ ಪ್ರಜಾಕೀಯ

Leave a Reply

Your email address will not be published. Required fields are marked *

Translate »