ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

Disaster Management Team. ತುರ್ತು ಪರಿಸ್ಥಿತಿ ಶಮನ ದಳ.

Disaster Management Team. ತುರ್ತು ಪರಿಸ್ಥಿತಿ ಶಮನ ದಳ.

ಇದೊಂದು ನಮ್ಮ ದೇಶದ – ರಾಜ್ಯದ ದುರಾಧ್ರಷ್ಟ. 130 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಡಿಸಾಸ್ಟರ್ ಮೇನೇಜ್ಮೆಂಟ್ ಟೀಮ್ ಇಲ್ಲ.

ನ್ಯಾಚುರಲ್ ಕ್ಯಾಲೇಮಿಟಿ – ಪ್ರಕೃತಿ ವಿಕೋಪ ಅಥವಾ ಯಾವುದೆ ದೊಡ್ಡ ಮಟ್ಟಿಗೆ ಅನಾಹುತವಾದಾಗ ಕೆಲವೆ ಗಂಟೆಯಲ್ಲಿ ಅಲ್ಲಿಗೆ ತಲುಪುವಂತಹ, ಜನರನ್ನು ಸುರಕ್ಷಿತ ಸ್ಥಳಗಳಿಗೆ ಕೊಂಡೊಯ್ಯುವಂತಹ ಹಾಗು ತುರ್ತು ಸಾರಿಗೆ ವ್ಯವಸ್ಥೆಯನ್ನು ಸರಿ ಮಾಡುವಂತಹ ಒಂದು ಟೀಮ್- ಸಂಸ್ಥೆ ಖಂಡಿತಾ ಬೇಕು. ಇದನ್ನೆ ಡಿಸಾಸ್ಟರ್ ಮೆನೇಜ್ಯಮೆಂಟ್ ಟೀಮ್( DMT) ಎಂದು ಕರೆಯ ಬೇಕು.

ಇವುಗಳು ರಾಜ್ಯದ 5- 8 ಕಡೆ ಸ್ಟ್ರೆಟಿಜಿಕ್ ಜಾಗಗಳಲ್ಲಿ( ಪಟ್ಟಣದ ಹೊರಗೆ) ಇರ ಬೇಕು. ರಾಜ್ಯದ ಯಾವಾ ಜಾಗದಲ್ಲೂ ತುರ್ತು ಪರಿಸ್ಥಿತಿ ಬಂದಾಗ 1-2 ಗಂಟೆಯಲ್ಲಿ ತಲುಪುವಂತಿರ ಬೇಕು.

ನಮ್ಮ ಅಗ್ನಿ ಶಾಮಕ ದಳದಂತೆ ಸುಮಾರು 1000 ದಿಂದ 2000 ಪಡೆ ಇರಬೇಕು.

1. ಇವರ ಫಿಸಿಕಲ್ ಫಿಟ್ನೆಸ್, ಮಿಲಿಟರಿ ಹಾಗು ಕಮಾಂಡೊ ಲೆವೆಲ್ಗೆ ಇರಬೇಕು.

2. ಸ್ವಿಮ್ಮಿಂಗ್ ಹಾಗು ಕ್ಲೈಂಬಿಂಗ್ ತರಬೇತಿ ಇರಲೆ ಬೇಕು. ಕಮಾಂಡೊ ತರಹದ ತರಬೇತಿ ಕೊಡಬೇಕು.

3. ಇವರಲ್ಲಿ ಸಿವಿಲ್ ಇಂಜಿನಿಯರ್,ಡಾಕ್ಟರ್, ರೋಡ್- ಬ್ರಿಜ್ ಡಿಸೈನರ್, ಹೆಲಿಕಾಪ್ಟರ್ ಪೈಲಟ್, ಅರ್ಥ್ ಮೂವಿಂಗ್ ಇಕ್ಯೂಪ್ಮೆಂಟ್ ಟೆಕ್ನೀಷನ್, ಅಟೊ ಮೋಬೈಲ್ ಟೆಕ್ನೀಷನ್, ಮೆರಿನ್ ಇಂಜಿನ್ ಟೆಕ್ನೀಷನ್, ಇಲೆಕ್ಟ್ರೀಷನ್, ಮೆಕೆನಿಕ್, ಪ್ಲಂಬಿಂಗ್ ಟೆಕ್ನೀಷನ್ ಹೀಗೆ ಇವರು ಉಪಯೋಗಿಸುವ ಹಾಗು ಸಾಮಾನ್ಯ ಜನರು ಉಪಯೋಗಿಸುವ ವಸ್ತುಗಳ ಟೆಕ್ನೀಷನ್ಗಳು ಇರಬೇಕು.

  ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳ ಗಮನಕ್ಕೆ

4. ಮೋಬೈಲ್ ಸ್ಟೇಷನ್ ನಲ್ಲಿ ಎಲ್ಲಾ ಅವಶ್ಯ ಸ್ಪೇರ್ ಪಾರ್ಟ್ ಹಾಗು ಟೂಲ್ಸ್ ನೊಂದಿಗೆ ತಯಾರಿರ ಬೇಕು.

5. ಅವಶ್ಯವಾದ ಅರ್ಥ್ ಮೂವಿಂಗ್ ಇಕ್ಯೂಪ್ಮೆಂಟ್ Shovel, Lifts, Generator, ಎಲ್ಲವೂ ಗುಡ್ ಕಂಡೀಷನ್ ನಲ್ಲಿದ್ದು ಟ್ರಕ್ಗಳ ಮೇಲೆ ಮೌಂಟ್ ಆಗಿರ ಬೇಕು. ಅವುಗಳನ್ನು ಇಳಿಸಲು ಹಾಗು ಲೋಡ್ ಮಾಡಲು ಬೇಕಾದ ಉಪಕರಣಗಳು ಪಿಟ್ಮೆಂಟ್ ಇರ ಬೇಕು. 10 ನಿಮಿಷದಲ್ಲಿ ಇಳಿಸುವ ಹಾಗು ಲೋಡ್ ಮಾಡುವ ವ್ಯವಸ್ಥೆ ಇರಬೇಕು.

6. ಕೆಲವೊಂದು ಟಿಪ್ಪರ್ಗಳೂ ಇರಬೇಕು. ( Self Unloading Trucks).

7. ಪ್ರತಿಯೊಂದು ಬ್ರಾಂಚ್ಗಳಲ್ಲಿ ಮಿನಿಮಮ್ ಎರಡು ಹೆಲಿಕಾಪ್ಟರ್ ಹಾಗು ಸಾಧ್ಯವಾದರೆ ಒಂದು ಸಣ್ಣ 10-20 seater Aircraft ಕೂಡಾ ಇರಬಹುದು. ತುಂಬಹ ಅವಶ್ಯವಿರುವುದು ಹೆಲಿಕಾಪ್ಟರ್. Aircraft ಕೇವಲ Airstrip ಇರುವ ಕಡೆ ಮಾತ್ರ ಲ್ಯಾಂಡ್ ಆಗಲು ಸಾಧ್ಯವಿರುವುದರಿಂದ, ಇದು ತುರ್ತು ಪರಿಸ್ಥಿತಿಗೆ ಉಪಯೋಗ ಬರಲಿಕ್ಕಿಲ್ಲ. ಆದರೆ ಪಡೆಗಳನ್ನು ಸಾಗಿಸಲು ಇದು ಉಪಯೋಗವಾಗುವುದು.

8. DMT ಪಡೆಗಳಿಗೆ ಎಲ್ಲಾ ರೀತಿಯ ಅಂತರಾಷ್ಟೀಯಾ ಮಟ್ಟದ ಸೇಫ್ಟಿ ಉಪಕರಣಗಳನ್ನು ಟ್ರೈನಿಂಗ್ ಕೊಟ್ಟು, ಕೊಡಬೇಕು.

9. ಇನ್ಫ್ಲೇಟೆಡ್ ಬೋಟ್ಸ್, ಮೆರಿನ್ ಇಂಜಿನ್ಸ್, ಸಣ್ಣ ಬೋಟ್ಸ್(truck mounted), ಹಾಗು ನೆರೆ ಸಂಧರ್ಭದಲ್ಲಿ ಬೇಕಾದ ಉಪಕರಣಗಳು, ready to use condition ನಲ್ಲಿ ಟ್ರಕ್ ಮೌಂಟೆಡ್ ಇರಬೇಕು.

10. ಬೇಕಾದ ಇಕ್ಯೂಪ್ ಮೆಂಟ್ಗೆ ಡೆವಲಪ್ಡ್ ದೇಶಗಳಲ್ಲಿ ಹುಡುಕಿದರೆ, ಬೇಕಾದಷ್ಟು ಸಿಗುವುದು. ಇವುಗಳನ್ನು ಖರೀದಿಸಲು ಯಾವುದೇ ಪೊಲಿಟಿಷನ್ ಹೋಗದೆ, ಕೇವಲ ಪಡೆಯಲ್ಲಿ ಕೆಲಸ ಮಾಡುವವರು ಹೋಗ ಬೇಕು.

  ಪ್ರಜಾಕೀಯ ಒಂದು ಮೌನ ಕ್ರಾಂತಿ Silent Revolution

11. ಕರ್ನಾಟಕದ 8 ಮುಖ್ಯ ಸ್ಥಳಗಳಲ್ಲಿ ಇವುಗಳ ಬ್ರಾಂಚ್ ಇದ್ದು, ಕೇವಲ ಒಂದು ಗಂಟೆಯ ಒಳಗೆ ತುರ್ತು ಪರಿಸ್ಥಿತಿ ಸ್ಥಳಕ್ಕೆ ತಲುಪುವಂತಿರ ಬೇಕು. ಇದು ಡೈರೆಕ್ಟಲೀ ಮುಖ್ಯ ಮಂತ್ರಿ ಅಥವಾ ಗ್ರಾಮೀಣ ಮಂತ್ರಿಯ ಆರ್ಡರ್ನ ಮೇಲೆ ಕೆಲಸ ಮಾಡ ಬೇಕು. ರೇಡಿಯೋ ಟೆಲಿಫೋನ್ ಸಂಪರ್ಕ ಇರಬೇಕು.

12. ಫಾಸ್ಟ್ ಟ್ರಾನ್ಸ್ಫೋರ್ಟ್ ಹಾಗು ಸ್ಪೆಸಿಫಿಕ್ ಕಲರ್ ವಾಹನಗಳಿರ ಬೇಕು. ರಸ್ತೆಗಳಲ್ಲಿ ಇವರಿಗೆ ಪ್ರೈಯಾರಿಟಿ ಬೇಸ್ನಲ್ಲಿ ಇವರಿಗೆ( ಅಂಬುಲೆನ್ಸ್ ನ ಹಾಗೆ) ದಾರಿ ಮಾಡಿ ಕೊಡಬೇಕು. ಇದು ಕೇವಲ ತುರ್ತು ಪರಿಸ್ಥಿತಿ ಸಮಯದಲ್ಲಿ ಮಾತ್ರ.

ಈ ತುರ್ತು ಪರಿಸ್ಥಿತಿ ಶಮನ ದಳದಿಂದ ಎಷ್ಟೊ ಜೀವ ಉಳಿಸ ಬಹುದು ಹಾಗು ಪ್ರಜೆಗಳಿಗೆ ಆಗುವ ತೊಂದರೆಗಳನ್ನು ಕಡಿಮೆ ಮಾಡ ಬಹುದು. ಸ್ಪೇಶಲೀ, ಸಾರಿಗೆ ವ್ಯವಸ್ಥೆ ಯನ್ನು ಕೂಡಲೆ ಸರಿಮಾಡ ಬಹುದು. ಇದರಿಂದ ಎಲ್ಲಾ ಅವಶ್ಯಕತೆಗಳು ಕೂಡಲೆ ಸಿಗುವಂತಾಗ ಬೇಕು.

ಇವರ ಮುಖ್ಯ ಕೆಲಸ ಪ್ರಜೆಗಳನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸುವುದು ಹಾಗು ಮುಖ್ಯ ಸಾರಿಗೆ ವ್ಯವಸ್ಥೆಯನ್ನು ಕೂಡಲೆ ಸರಿಮಾಡಿ, ಎಲ್ಲಾ ರೀತಿಯ ಅವಶ್ಯಕತೆಗಳು ತಲುಪುವಂತೆ ಮಾಡುವುದು. ಅದು ರಸ್ತೆ, ಸೇತುವೆ, ಇತ್ಯಾದಿ ಆಗಿರ ಬಹುದು. ಇದಕ್ಕೆ ಬೇಕಾದ ಉಪಕರಣಗಳ ವ್ಯವಸ್ಥೆ ಮಾಡ ಬೇಕು.

ಇದರ ಮುಖ್ಯ ಆಫೀಸರ್ ಅವಶ್ಯವಾಗಿ ಒಬ್ಬ ಸೀನಿಯರ್ ಮಿಲಿಟರಿ Ex- Serviceman ಆಗಿರ ಬೇಕು. ಸಾಧ್ಯವಾದರೆ, ಗ್ರೂಫ್ ಲೀಡರ್ಗಳೂ Ex- Servicemen ಆದರೆ ಉತ್ತಮ.

  ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ - ಪ್ರಜಾಕೀಯ

ಇವರು ಪ್ರಮಾಣಿಕ ಹಾಗು ಶಿಸ್ತುಬದ್ದವಾಗಿರುತ್ತಾರೆ ಹಾಗು ದೇಶ ಹಾಗು ಜನರಿಗಾಗಿ ಮಿಡಿಯುವ ಮನಸ್ಸಿರುವುದು.

ಈ ತುರ್ತು ಪರಿಸ್ಥಿತಿ ಶಮನ ದಳದ ಒಂದು ಉದಾಹರಣೆ ಹೀಗಿರ ಬಹುದು.

10ದಿನದ ಮೊದಲು ಉತ್ತರ ಕನ್ನಡ ಜಿಲ್ಲೆಯಲ್ಲಿ ನೆರೆಬಂತು. ಅಂದರೆ ಮೊದಲು 2- 3ದಿನದ ಮೊದಲೆ ಹವಾಮಾನ ವೈಪರಿತ್ಯ ತಿಳಿದಿತ್ತು. ಆಗಲೆ DMT ಯನ್ನು ಆಕ್ಟಿವೇಟ್ ಮಾಡ ಬೇಕು. ನೆರೆಯ ಪ್ರಾರಂಭವಾಗುವಾಗಲೆ ತುರ್ತು ಪರಿಸ್ಥಿತಿ ಶಮನ ದಳ (DMT) ಅಲ್ಲಿ ತಯಾರಿದ್ದರೆ ಯಾವುದೇ ಜೀವ ಹಾನಿಯಾಗುವುದಿಲ್ಲ. ಜನರಿಗೂ ಸರಿಯಾದ ಗೈಡನ್ಸ್ ಕೊಡಬಹುದು.

ಆದರೆ, ನಮ್ಮ ರಾಜಕಾರಣಿಗಳಿಗೆ ಅದರ ಕುರುಹು ಕೂಡಾ ಇಲ್ಲ. ಇದ್ದರೂ ಅದು ಅವರಿಗೆ ಪ್ರಾಮುಖ್ಯವಲ್ಲ. ಯಾಕೆಂದರೆ ಮುಂದೆ Flood Relief ಎಂದು 2000 ಕೋಟಿ ರಿಲೀಸ್ ಮಾಡಿ, ಅದರಲ್ಲಿ 500 ಕೋಟಿ ಹೊಡೆಯ ಬಹುದಲ್ಲವೇ ?

ಎದ್ದೇಳಿ ಪ್ರಜೆಗಳೇ,‌

ಎಲ್ಲವೂ ಭ್ರಷ್ಟಾಚಾರದಿಂದ ಮುಳುಗುವ ಮೊದಲೇ ಚೆತರಿಸಿ ಹಾಗು ಬದಲಾವಣೆಗೆ ದಾರಿ ಮಾಡಿ.

ಜೈ ಪ್ರಜಾಕೀಯಾ
ಜೈ ಉತ್ತಮ ಪ್ರಜಾಕೀಯಾ ಪಕ್ಷ.

Leave a Reply

Your email address will not be published. Required fields are marked *

Translate »