ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಪ್ರಜಾಕೀಯ – ಚುನಾವಣಾ ಪ್ರಕ್ರಿಯೆಯಲ್ಲಿ ಸುಧಾರಣೆ

ಚುನಾವಣಾ ಪ್ರಕ್ರಿಯೆಯಲ್ಲಿ ಸುಧಾರಣೆ – ಒಂದು ಅನಿಸಿಕೆ.

ಚುನಾವಣೆಯು, ಪ್ರಜಾಪ್ರಭುತ್ವದ ಅತೀ ಪ್ರಾಮುಖ್ಯವಾದ ಹಾಗು ಕೇಂದ್ರ ಬಿಂದು. ನಿಜವಾದ ಪ್ರಜಾಪ್ರಭುತ್ವವು, ಈ ಪ್ರಕ್ರಿಯೆಯಿಂದಲೆ ಪ್ರಾರಂಭವಾಗುವುದು.

ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ನಡೆಯುವ ಆಡಳಿತ ವ್ಯವಸ್ಥೆಯೇ ಪ್ರಜಾಪ್ರಭುತ್ವ. ಇಲ್ಲಿ ಮೂರು ಅಂಗಗಳು ಅಥವಾ ಸ್ತಂಭಗಳು.
1. ಶಾಸಕಾಂಗ
2. ಕಾರ್ಯಾಂಗ
3. ನ್ಯಾಯಾಂಗ

ಹಾಗೆ ಮಾಧ್ಯಮವು 4 ನೇ ಅಂಗ- ಸ್ತಂಭವಾಗುವುದು. ಇದು ಖಾಸಾಗಿ ಕ್ಷೇತ್ರ ಆಗಿರುವುದು

ಶಾಸಕಾಂಗದಲ್ಲಿ, ಪ್ರಜೆಗಳ ಪ್ರತಿನಿಧಿಗಳಿದ್ದು, ಇವರನ್ನು ಪ್ರಜೆಗಳು ಚುನಾಯಿಸುವರು. ಆದರೆ, ಕಾರ್ಯಾಂಗ ಹಾಗು ನ್ಯಾಯಾಂಗದಲ್ಲಿರುವ ಪ್ರಜೆಗಳನ್ನು, ಅವರ ವಿಧ್ಯಾಭ್ಯಾಸ ಮಟ್ಟ, ತಿಳುವಳಿಕೆ, ಅನುಭವದ ಮೇರೆಗೆ, ಬರವಣಿಗೆ ಪರೀಕ್ಷೆ, ಸಂಧರ್ಶಣ ಹಾಗು ಇತರ ಮೂಲ್ಯಾಂಕದ ಮೇಲೆ ಪರಿಸ್ಕರಿಸಿ, ಆಯ್ಕೆ ಮಾಡಲಾಗುವುದು. ಖಂಡಿತಾ ಚುನಾವಣೆ ಅಲ್ಲ. ಇವರು, ಶಾಶ್ವತ ಸರಕಾರಿ ನೌಕರರಾಗಿರುವರು.

ಶಾಸಕಾಂಗವು ಕೇವಲ 5 ವರ್ಷಕ್ಕೆ ಒಮ್ಮೆ ಚುನಾಯಿಸಲ್ಪಡುವುದು. ಇಲ್ಲಿ ಯಾವುದೇ ವಿಧ್ಯಾಭ್ಯಾಸ ಮಟ್ಟ ಅಥವಾ ಪರಿಣಿತಿ ಮಟ್ಟ, ಸಂವಿಧಾನದಲ್ಲಿ ಕೇಳಿಲ್ಲ.ಇದು ಶಾಶ್ವತ ಜವಾಬ್ದಾರಿ ಅಲ್ಲ. ಇದರ ಅವದಿ, ಕೇವಲ 5 ವರ್ಷ. ಇವರು ಪ್ರಜೆಗಳ ಹಾಗು ಕಾರ್ಯಾಂಗದ ಮಧ್ಯೆ ಒಂದು ಸೇತುವೆ ಆಗಿ, ಪ್ರಜೆಗಳ ಹಾಗು ರಾಜ್ಯದ ಅವಶ್ಯಕತೆಯನ್ನು, ಕಾರ್ಯಾಂಗದಿಂದ ಮಾಡಿಸಿ ಕೊಳ್ಳಬೇಕು. ಖಂಡಿತಾ, ಸ್ವತಹ ಮಾಡುವುದಲ್ಲ. ಇಲ್ಲಿ, ಅತೀ ಅವಶ್ಯವಾದ ವಿಷಯ, ಕಾರ್ಯಾಂಗದಲ್ಲಿ ಚುನಾಯಿಸಿ ಬರುವವರು ಪ್ರಾಮಾಣಿಕವಾಗಿದ್ದರೆ, ರಾಜ್ಯದಲ್ಲಿ ಎಲ್ಲಿಯೂ ಭ್ರಷ್ಟಾಚಾರ ನಡೆಯಲು ಸಾಧ್ಯವಿಲ್ಲ.

ಆದ್ದರಿಂದ, ಚುನಾಯಿಸಿ ಬರುವವರು, ಯಾವುದೇ ಹಣ ಉಪಯೋಗಿಸದೆ, ಅವರಿಗೆ ನ್ಯಾಯವಾಗಿ ಸಿಗುವ ಸಂಭಾವನೆಗಾಗಿ ಬರಬೇಕು.

ಆದರೆ, ಇಲ್ಲಿ, ಕೋಟಿ-ಕೋಟಿ ಹಣ ಖರ್ಚು ಮಾಡಿ, ಜನರಿಗೆ ಸುಳ್ಳು ಆಶ್ವಾಸನೆ ಕೊಟ್ಟು, ನಿಲ್ಲುವವನು ಒಬ್ಬ ನಾಯಕನೆಂದು ಬಿಂಬಿಸಲಾಗುವುದು. ರಾಜಕೀಯ ಪಕ್ಷಗಳು ಹೂಡಿಕೆ ಕಂಪೆನಿಗಳಾಗಿವೆ. ಚುನಾವಣೆಯಲ್ಲಿ ಸಾವಿರ-ಸಾವಿರ ಕೋಟಿ ಖರ್ಚು(ಹೂಡಿಕೆ) ಮಾಡಿ, ಅದರ ಹತ್ತು ಪಟ್ಟು, ಭೃಷ್ಟಾಚಾರದಿಂದ ಹಿಂಪಡೆಯುವ ಒಂದು ವ್ಯವಹಾರವಾಗಿ, ಚುನಾವಣೆಯು ಪರಿವರ್ತನೆ ಆಗಿರುವುದು. ಇದನ್ನು, ಯಾರೂ ಅಲ್ಲಗಳೆಯುವಂತಿಲ್ಲ.

ಇಲ್ಲಿ ಶುಧ್ಧ ಹಾಗು ಸಂವಿಧಾನದ ಆಶ್ರಯದಂತೆ, ಪ್ರಜೆಗಳ ಪ್ರತಿನಿಧಿಗಳು ಚುನಾಯಿಸಿ ಬರಬೇಕಾದರೆ, ಚುನಾವಣಾ ಸಮಿತಿ(EC) , ಚುನಾವಣೆಯ ಸಂಪೂರ್ಣ ಜವಾಬ್ದಾರಿ ವಹಿಸಬೇಕು.

ಯಾವುದೇ ರಾಜಕೀಯ ಪಕ್ಷಗಳು ಹಣ ಉಪಯೋಗಿಸುವುದಾಗಲಿ ಅಥವಾ ಜನರ ಸಮೂಹ ಕಟ್ಟಿಕೊಂಡು ಸಾರ್ವಜನಿಕ ಪ್ರದೇಶಗಳಲ್ಲಿ ಗಲಾಟೆ ಗದ್ದಲಮಾಡುವುದು. ಪೋಲಿಸರ ಅಮೂಲ್ಯ ಸಮಯವನ್ನು, ಅದಕ್ಕಾಗಿ ಉಪಯೋಗಿಸುವುದು, ಸಂಪನ್ಮೂಲ ಪ್ರಜೆಗಳನ್ನು, ಅವರ ಕೆಲಸ ಬಿಡಿಸಿ, ಇವರ ಟೊಲ್ಲು ಭಾಷಣ ಕೇಳಲು ಉಪಯೋಗಿಸುವುದು, ಇತ್ಯಾದಿಗಳು ಖಂಡಿತಾ ನಿಲ್ಲ ಬೇಕು.

ಹಾಗಾದರೆ, ಚುನಾವಣಾ ಅಭ್ಯರ್ಥಿಗಳನ್ನು ಪ್ರಜೆಗಳಿಗೆ ಪರಿಚಯಿಸುವುದು ಹೇಗೆ, ಎಂಬ ಪ್ರಶ್ನೆಯು ಬರುವುದು.

ಇಲ್ಲಿ, ಚುನಾವಣಾ ಸಮಿತಿ ಪ್ರಮುಖ ಪಾತ್ರ ವಹಿಸ ಬೇಕು. ಒಮ್ಮೆ ಚುನಾವಣಾ ಅಭ್ಯರ್ಥಿಗಳ ನಾಮ ನಿರ್ಧೆಶನ (Nomination) ಅಂಗೀಕಾರ ಆದ ಮೇಲೆ, ಅವರನ್ನು ಆ ಕ್ಷೇತ್ರದ ಪ್ರಜೆಗಳಿಗೆ ಪರಿಚಯಿಸುವ ಕೆಲಸ, ಚುನಾವಣಾ ಸಮಿತಿ ಮಾಡಬೇಕು.
1. ಮುದ್ರಣ ಮಾಧ್ಯಮದಿಂದ ( ವಾರ್ತಾ ಪತ್ರಿಕೆ)
2. ಟೆಲಿವಿಝನ್ ಮಾಧ್ಯಮದಿಂದ
3. ಇಲೋಕ್ಟ್ರಾನಿಕ್ ಮಾಧ್ಯಮ( ವೆಬ್ ಸೈಟ್, ಯಾಪ್, ಸಾಮಾಜಿಕ ಜಾಲತಾಣ, ಇತ್ಯಾದಿ).

ಇಲ್ಲಿ, ಈ ಮಾಧ್ಯಮಗಳ ಮೂಲಕ ಖರ್ಚು ಮಾಡಲು ಖಂಡಿತಾ ಹಣದ ಅವಶ್ಯಕತೆ ಇದೆ.ಇವೆಲ್ಲಾ ಖಾಸಾಗಿ ಕ್ಷೇತ್ರಗಳು.

ಇಲ್ಲಿ, ಎರಡು ವಿಧದ ಸಾಧ್ಯತೆ ಇರುವುದು.

1. ಕಾನೂನು ತಂದು, ಈ ಮಾಧ್ಯಮಗಳು, ಚುನಾವಣೆಯ ಮೊದಲ 15 ದಿನಗಳಲ್ಲಿ, ಅವರ 25% ಸಮಯ ಹಾಗು ಸ್ಥಳವನ್ನು ಸರಕಾರಕ್ಕಾಗಿ ಮೀಸಲಿಡುವಂತೆ ಮಾಡಬೇಕು. ಅವಶ್ಯಕತೆ ಇದ್ದರೆ, ಒಂದು ಸಣ್ಣ ಮಟ್ಟದಲ್ಲಿ, ಸರಕಾರವು, ಹಣ ಪಾವತಿ ಮಾಡ ಬಹುದು. ಇದನ್ನು ಸರಕಾರವೇ ನಿರ್ಧರಿಸುವಂತಿರಬೇಕು. ಮಾಧ್ಯಮಗಳ ಆತೀಯಾದ ಜವಾಬ್ದಾರಿಯು, ರಾಜ್ಯ-ದೇಶಕ್ಕಾಗಿ ಖಂಡಿತಾ ಅವಶ್ಯಕತೆ ಇದೆ. ಅವರು, ರಾಜ್ಯ-ದೇಶಕ್ಕಾಗಿ, 5 ವರ್ಷಕ್ಕೆ ಒಮ್ಮೆ ಇಂತಹ ಜವಾಬ್ದಾರಿಯನ್ನು ವಹಿಸಲೇ ಬೇಕು.

2. ಎರಡನೇ ಸಾಧ್ಯತೆ, ಚುನಾವಣಾ ಸಮಿತಿಯು, ಇದಕ್ಕಾಗಿ, ಪ್ರಜೆಗಳಿಂದ ದೇಣಿಗೆ ಪಡೆಯ ಬಹುದು. ಹಾಗೆ ರಾಜಕೀಯ ಪಕ್ಷಗಳಿಂದ ಸಂಗ್ರಹಿಸಿದ ನಿಧಿಯನ್ನು, ಸುಮಾರು 50% ಆದರೂ, ಚುನಾವಣಾ ಸಮಿತಿಗೆ ದೇಣಿಗೆ ಕೊಡಬಹುದು.

3. ಮೂರನೇ ಸಾಧ್ಯತೆ, ಅದಕ್ಕಾಗಿ ಒಂದು ಸಣ್ಣ ತೆರಿಗೆ ಪ್ರಜೆಗಳಿಂದ ಪಡೆಯ ಬಹುದು. ಅಥವಾ, ರಾಜಕೀಯ ಪಕ್ಷಗಳು ಸಂಗ್ರಹಿಸಿದ ಹಣದ ಮೇಲೆ ಸುಮಾರು 20% ಚುನಾವಣಾ ತೆರಿಗೆ ಹಾಕ ಬಹುದು.

ಇಲ್ಲಿ, ಅತೀ ಮುಖ್ಯವಾಗಿರುವುದು, ಚುನಾವಣಾ ಅಭ್ಯರ್ಥಿಗಳಾಗಲಿ ಅಥವಾ ರಾಜಕೀಯ ಪಕ್ಷಗಳಾಗಲಿ, ಯಾವುದೇ ರೀತಿಯ ಹಣ ಉಪಯೋಗಿಸಿ, ಮಿಥ್ಯಾ ಪ್ರಪಂಚವನ್ನೆ ನಿರ್ಮಿಸಿ, ಪ್ರಜೆಗಳನ್ನು ಓಲೈಸುವ ಕೆಲಸ ಆಗಬಾರದು. ಪ್ರತೀಯೊಬ್ಬ ಪ್ರಜೆಯು, ಅವನ ಸ್ವಂತ ಬುಧ್ಧಿಯಿಂದ ಮತ ಚಲಾಯಿಸಬೇಕು. ಹಾಗು ಯಾವುದೇ ಆಮೀಷಕ್ಕೆ ಬಲಿಯಾಗದೆ, ಮತ ಚಲಾಯಿಸಬೇಕು. ಆವಾಗ, ನಿಜವಾದ ಪ್ರಜಾಪ್ರಭುತ್ವವು ಸ್ಥಾಪನೆ ಆಗುವುದು.

ಅಭ್ಯರ್ಥಿಗಳನ್ನು ಪ್ರಜೆಗಳಿಗೆ ಪರಿಚಯಿಸುವುದು, ಖಂಡಿತಾ ಚುನಾವಣಾ ಸಮಿತಿ ಮಾಡಬೇಕು. ರಾಜಕೀಯ ಪಕ್ಷಗಳಲ್ಲ. ಚುನಾವಣೆ ತಾರೀಕು ಸೂಚನೆ ಆದ ಕೂಡಲೇ, ಎಲ್ಲಾ ರಾಜಕೀಯ ಪಕ್ಷಗಳು ತಟಸ್ತ ಆಗಬೇಕು. ಆ ನಂತರ, ಚುನಾವಣಾ ಸಮಿತಿಯು ಕಾರ್ಯ ನಿರ್ವಹಿಸಬೇಕು. ಯಾವುದೇ ಪಕ್ಷ ಅಥವಾ ಅಭ್ಯರ್ಥಿ ಪ್ರಚಾರ ಮಾಡುವುದನ್ನು ನಿಷೇದಿಸಬೇಕು.

*ಇದಕ್ಕಿಂತ ಒಳ್ಳೆಯದಾದ ಚುನಾವಣಾ ಸುದಾರಣೆ ಇನ್ನೊಂದಿಲ್ಲ. ಸಂವಿಧಾನದ ಆಶ್ರಯದಂತೆ, ಸಾಮಾನ್ಯ ಪ್ರಜೆಗಳು ಚುನಾವಣೆ ನಿಲ್ಲಲು ಅವಕಾಶ ಒದಗುವುದು. ಕಾನೂನಿಗೆ ಹೆದರುವ ಪ್ರಜೆಯು, ಪ್ರಜೆಗಳ ಪ್ರತಿನಿಧಿ ಆಗುವನು. ಭೃಷ್ಟಾಚಾರದ ಮೇಲೆ ಕಡಿವಾಣ ಬೀಳುವುದು. ನಾಯಕ ಅಥವಾ ಹೀರೋ ಸಂಸ್ಕ್ರತಿ ಮುಕ್ತಾಯ ಆಗುವುದು. ಶುಧ್ಧ ಪ್ರಜಾ ಪ್ರತಿನಿಧಿಗಳ ಜನನ ಆಗುವುದು.

Leave a Reply

Your email address will not be published. Required fields are marked *

Translate »