ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಧರ್ಮ ಹಾಗು ಆಡಳಿತ – ಪ್ರಜಾಕೀಯಾ

ಧರ್ಮ ಹಾಗು ಆಡಳಿತ.

ಧರ್ಮ ಒಂದು ನಂಬಿಕೆ ಹಾಗು ಇದು ಪ್ರತೀಯೊಬ್ಬನ ಖಾಸಾಗಿ ವಿಷಯ.

ಆಡಳಿತ ಪ್ರಜೆಗಳ ಹಾಗು ರಾಜ್ಯ- ದೇಶದ ಅಬಿವ್ರಧ್ಧಿಗಾಗಿ ಚುಣಾವಣೆ ಮೂಲಕ ಆರಿಸಿ ಕಳುಹಿಸಿದ ಪ್ರತಿನಿಧಿ ಸಮೂಹ.

ಭಾರತದ ಸಂವಿಧಾನದಲ್ಲಿ ಧರ್ಮವನ್ನು ಈಗಾಗಲೆ ಅವರವರ ಖಾಸಾಗಿ ವಿಷಯವೆಂದು ರುಜುವಾತು ಮಾಡಲಾಗಿದೆ.

ಆಡಳಿತ ಪ್ರಜೆಗಳ ತೆರಿಗೆ ಹಣದಿಂದ ಪ್ರಜೆಗಳ ಹಾಗು ದೇಶದ ಉದ್ಧಾರಕ್ಕಾಗಿ ನಡೆಯ ಬೇಕಾದ ಪಾರದರ್ಶಕ ಪ್ರಕ್ರೀಯೆ ಆಗ ಬೇಕು.

ಧರ್ಮ ಗುರುಗಳು ಆಡಳಿತದಲ್ಲಿ ಹಸ್ತಕ್ಷೇಪ ಮಾಡಬಾರದು. ಆಡಳಿತಗಾರರು ಧರ್ಮದಲ್ಲಿ ಹಸ್ತಕ್ಷೇಪ ಮಾಡಬಾರದು.

ಯಾವುದೇ ಧರ್ಮದ ಪ್ರಜೆಗಳು ಹಾಗು ಗುರುಗಳು ಸಂವಿಧಾನ ವಿರೋಧಿ ಹಾಗು ಕಾನೂನು ಬಾಹಿರ ವಿಷಯವನ್ನು ಅನುಸರಿಸಿದಾಗ, ಅವರನ್ನು ಹಿಡಿದು ಸಾಕ್ಷಿ ಸಮೇತ ನ್ಯಾಯಾಲಯಕ್ಕೆ ಒಪ್ಪಿಸುವುದು ಆಡಳಿತದ ಮುಖ್ಯ ಕರ್ತವ್ಯವಾಗುವುದು.

ಹಾಗೆ ಪ್ರತೀಯೊಬ್ಬ ಧರ್ಮ ಗುರುಗಳ ಕರ್ತವ್ಯ, ಜನರನ್ನು, ಕಾನೂನು ಹಾಗು ಸಂವಿಧಾನ ವಿರೋದ ಕಾರ್ಯಕ್ಕೆ ಪ್ರಚೋದಿಸಬಾರದು.

ಆಡಳಿತವು ಸಂವಿಧಾನ ಹಾಗು ಕಾನೂನು ಬಾಹಿರ ಕೆಲಸಕ್ಕೆ ಕೈ ಹಾಕಿದರೆ, ಅದನ್ನು ಪ್ರಜೆಗಳು ವಿರೋಧಿಸುವುದು ಅವಶ್ಯಕತೆ ಇದೆ. ಇಲ್ಲಿ ಧರ್ಮದ ವಿಂಗಡನೆ ಇಲ್ಲದೆ ಪ್ರತಿಭಟನೆ ನಡೆಯಬೇಕು.

  ಧರ್ಮ ಹಾಗು ಆಡಳಿತ - ಪ್ರಜಾಕೀಯ

ಇಲ್ಲಿ ಪೋಲೀಸ್ ಹಾಗು ಇತರೆ ಕಾರ್ಯಾಂಗದ ವಿಭಾಗಗಳು ಸ್ವತಂತ್ರವಾಗಿ ಕೆಲಸ ಮಾಡಬೇಕು.

ಸಂವಿಧಾನ ವಿರೋಧಿ ಕಾನೂನು ತಂದ ಶಾಸಕಾಂಗವನ್ನು ಪ್ರಜೆಗಳು ಅದನ್ನು ಹಿಂದೆ ಪಡೆಯಲು ಒತ್ತಾಯಿಸುತ್ತಿರಲು, ಕಾರ್ಯಾಂಗ ಯಾವುದೆ ಶಾಸಕಾಂಗದ ಒತ್ತಡ ಕ್ಕೊಳಪಡದೆ ಕಾರ್ಯ ನಿರ್ವಹಿಸುವುದೇ ಪ್ರಜಾಪ್ರಭುತ್ವ.

ಒಂದು ವೇಳೆ ಕಾರ್ಯಾಂಗ (ಪೋಲೀಸ್ ಹಾಗು ಜವಾನರು), ಇಂತಹ ಸಮಯದಲ್ಲಿ ಶಾಸಕಾಂಗದ ಒತ್ತಡಕ್ಕೊಳಪಟ್ಟರೆ, ಅಲ್ಲಿ ಪ್ರಜಾಪ್ರಭುತ್ವದ ಅಸ್ತಿತ್ವವೇ ನಾಶವಾಗುವುದು.

ಎಲ್ಲಾ ಭಾರತದ ಪ್ರಜೆ, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗು ಮಾಧ್ಯಮಗಳು ಅನುಸರಿಸಬೇಕಾದ ಒಂದೆ- ಒಂದು ಗ್ರಂಥ “ಭಾರತದ ಸಂವಿಧಾನ”.

ಇಲ್ಲಿ ಧರ್ಮ ಹಾಗು ಧರ್ಮ ಗ್ರಂಥಗಳು ಖಂಡಿತಾ ಹಸ್ತಕ್ಷೇಪ ಮಾಡಬಾರದು.

ಈಗ ಸಂವಿಧಾನದ ನಾಲ್ಕೂ ಅಂಗಗಳನ್ನು ಶಾಸಕಾಂಗ ನಿಯಂತ್ರಿಸುವುದರಿಂದ, ಎಲ್ಲವೂ “ಕಿಚಡಿ” ಪ್ರಜಾಪ್ರಭುತ್ವವಾಗಿ ಪರಿವರ್ತನೆ ಆಗಿದೆ.

ಇವೆಕ್ಕೆಲ್ಲದಕ್ಕೂ ಹೊಣೆ ನಮ್ಮ ಆರಿಸಿ ಕಳುಹಿಸಿದ ಪ್ರತಿನಿಧಿಗಳು, ಶಾಸಕಾಂಗ. ಇವರೆಲ್ಲಾ ರಾಜರಂತೆ ವರ್ತಿಸುತ್ತಿದ್ದಾರೆ.

  ಹಿಂದೂ ಧರ್ಮ ಜಾತಿ ವ್ಯವಸ್ಥೆಯ ಕುರಿತಾಗಿ ತಪ್ಪು ಕಲ್ಪನೆ

“ರಾಜ”ಕಾರಣಿ ಎಂಬ ಹೆಸರನ್ನು ನಮೂದಿಸಿ ಕೊಂಡಿದ್ದಾರೆ.

ಮಹಾತ್ಮ ಗಾಂಧೀಜಿಯ ಕನಸಿನ ಪ್ರಜಾಪ್ರಭುತ್ವ ಎಂದೋ ಮಾಯವಾಗಿದೆ.

ಕಾರ್ಯಾಂಗ, ಎದ್ದೇಳಿ, ನಿಮ್ಮ ಭಾರತದ ಸಂವಿಧಾನಕ್ಕಾಗಿ ಇರುವ ಗೌರವವನ್ನು ಉಳಿಸಿ ಕೊಳ್ಳಿ. ಶಾಸಕರ ದಾಸರಾಗಬೇಡಿ.

ನಿಮ್ಮ ಒಳಗಿರುವ ಮನುಷ್ಯತ್ವವನ್ನು ಪ್ರದರ್ಶಿಸಿ.

ನಿಮಗೆಲ್ಲರಿಗೂ ಸಂಬಳ ಕೊಟ್ಟು ಸಾಕುವ ಪ್ರಜೆಗಳನ್ನು ಹಿಂಸಿಸಬೇಡಿ.

ಇದು ಘೋರ ಪಾಪ. ತಿಂದವನ ಮನೆಗೆ ಎರಡು ಬಗೆಯಬೇಡಿ.

ಶಾಸಕ ಅವನ ಮನೆಯಿಂದ ತಂದು ನಿಮಗೆ ಸಂಬಳ ಕೊಡುತ್ತಾ ಇಲ್ಲ.

ಇದು ಪ್ರಜೆಗಳು ಕಷ್ಟಪಟ್ಟು ದುಡಿದು ಸಂಪಾದಿಸಿದ ಹಣದಿಂದ ಕೊಟ್ಟ ತೆರಿಗೆ ಹಣ.

ಈ ದೇಶದ ಪ್ರತೀಯೊಂದು ಮೆಶೀನರಿ, ಕೇವಲ ಪ್ರಜೆಗಳ ಹಣದಿಂದ ಹಾಗು ಪ್ರಜೆಗಳಿಂದ ನಿರ್ಮಿತ.

ಆದ್ದರಿಂದ, ಯಾವ ಧರ್ಮ ಹಾಗು ಆಡಳಿತ, ಪ್ರಜೆಗಳಿಗಿಂತ ಶ್ರೇಷ್ಟವಲ್ಲ.

ಯಾರಾದರೂ ಧರ್ಮ- ಆಡಳಿತ ಪ್ರಜೆಗಳಿಗಿಂತ ಶ್ರೇಷ್ಠವೆಂದು ತಿಳಿಯುವನೋ, ಅವನಿಗೂ ಅಡಾಲ್ಫ್ ಹಿಟ್ಲರ್ಗೂ ಯಾವ ವ್ಯತ್ಯಾಸವಿಲ್ಲ.

ಅದು ಸರ್ವಾಧಿಕಾರದ ಪರಮಾವಧಿ.

ಪ್ರಜೆ ಇಲ್ಲದೇ ರಾಜ್ಯವಿಲ್ಲ- ರಾಷ್ಟ್ರವಿಲ್ಲ.

  ಉತ್ತಮ ಪ್ರಜಾಕೀಯ ಪಕ್ಷ - ಪ್ರಜೆಗಳ ಪಕ್ಷ.

ಪ್ರಜೆಯನ್ನು ಕೇವಲ ನಿಯಂತ್ರಿಸಲೆಂದೆ ಧರ್ಮ ಹಾಗು ಆಡಳಿತ, ಮುಗಿಸಲು ಖಂಡಿತಾ ಅಲ್ಲ.

ಪ್ರಜೆಯನ್ನು ಮುಗಿಸುವ ಹಕ್ಕು ಕೇವಲ ಪ್ರಕೃತಿಗೆ ಇದೆ. ಅದು ಬೇಕಾದರೆ ಲಕ್ಷ ಜನರನ್ನು ಒಮ್ಮೆಲೆ ಮುಗಿಸಬಹುದು ಅಥವಾ ಒಬ್ಬನನ್ನು ರೋಗ- ರುಜಿನದಿಂದ ಮುಗಿಸ ಬಹುದು.

ಯಾವ ಡಾಕ್ಟರ್ ಕೂಡಾ ಬದುಕಿಸುವಂತಿಲ್ಲ.

ಆದ್ದರಿಂದ ನಾವೆಲ್ಲರೂ ಪ್ರತೀಯೊಬ್ಬ ಪ್ರಜೆಯನ್ನು ಗೌರವಿಸೋಣ.

ಧರ್ಮ- ಜಾತಿ- ಪಂಗಡ ಎಂಬುದನ್ನು ಮನೆ- ಮಟ, ದೇವಾಸ್ಥಾನ, ಮಸ್ಜಿದ್ ಹಾಗು ಚರ್ಚ್ಗಗಳಲ್ಲಿ ಬಿಟ್ಟು ಭಾರತದ ಪ್ರಜೆಗಳಾಗಿ ಮೆರೆಯುವಾ.

ಸ್ವಾರ್ಥಕ್ಕಾಗಿ ನಮ್ಮನ್ನು ಉಪಯೋಗಿಸುವ ಆಡಳಿತ ವ್ಯವಸ್ಥೆ ಹಾಗು ಆಡಳಿತಗಾರರಿಗೆ ಬಲಿಯಾಗುವುದು ಬೇಡ.

ಇಲ್ಲಿ ಪ್ರಜೆಯೆ(Citizen) ಅಗ್ರಗಣ್ಯ.

ಜೈ ಪ್ರಜಾಕೀಯಾ.
ಜೈ ಭಾರತ.

Leave a Reply

Your email address will not be published. Required fields are marked *

Translate »