ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅಧಿಕಾರವಧಿ ಅವರ ಚುನಾವಣೆಯ ದಿನಾಂಕದಿಂದ 30 ತಿಂಗಳು ಆಗಿರುತ್ತದೆ. ಅಥವಾ ಸದಸ್ಯತ್ವ ಅವಧಿ ನಿಂತು ಹೋಗುವವರೆಗೆ ಯಾವುದೋ ಮೊದಲು ಆ ಅವಧಿಯಾಗಿರುತ್ತದೆ.
- ಗ್ರಾಮ ಪಂಚಾಯಿತಿ ಸಭೆಗಳನ್ನು ಕರೆಯುದು ಮತ್ತು ಆ ಸಭೆಗಳ ಅಧ್ಯಕ್ಷತೆಯನ್ನು ವಹಿಸುವುದು ಅಧ್ಯಕ್ಷರ ಅಧಿಕಾರ .
- ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರ, ಕಾರ್ಯದರ್ಶಿ ಮತ್ತು ಇತರ ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ಕಾರ್ಯ ನಿರ್ವಹಣೆಯ ಮೇಲ್ವಿಚಾರಣೆ ಮತ್ತು ನಿಯಂತ್ರಣ ಮಾಡುವುದು ಅಧ್ಯಕ್ಷರ ಅಧಿಕಾರಿ
- ಗ್ರಾಮ ಪಂಚಾಯಿತಿ ಅಧಿಕಾರಿ ಅಥವಾ ನೌಕರನ ವಿರುದ್ಧ ಶಿಸ್ತು ಕ್ರಮ ಹೂಡಲು ಉದ್ದೇಶಿಸಿದ್ದರೆ ಅಥವಾ ಕ್ರಿಮಿಲನ್ ಅಪರಾಧದ ಕುರಿತು ತನಿಖೆ ನಡೆಯುತ್ತಿದ್ದರೆ ಅವರನ್ನು ಅಮಾನತ್ತಿನಲ್ಲಿಡುವ ಅಧಿಕಾರ ಅಧ್ಯಕ್ಷರಿಗಿದೆ.
- ಅಧ್ಯಕ್ಷರು ಗ್ರಾಮ ಪಂಚಾಯಿತಿಯ ಮಂಜೂರಾತಿ ಅಗತ್ಯವಿರುವಂತಹ ಯಾವುದೇ ಕಾಮಗಾರಿಯನ್ನು ತಕ್ಷಣವೇ ಕೈಗೊಳ್ಳುವುದು ಅಗತ್ಯವೆಂದು ಅಭಿಪ್ರಾಯಪಟ್ಟರೆ 24 ಗಂಟೆಗಳ ನೋಟೀಸನ್ನು ಕೊಟ್ಟು ಸಭೆಯನ್ನು ಕರೆಯಬಹುದು.
- ಅಧ್ಯಕ್ಷರು ರಜೆ ಹೋದಾಗ ಅಥವಾ ಕೆಲಸ ನಿರ್ವಹಿಸಲು ಅಸಮರ್ಥರಾದಾಗ ಅಥವಾ ಅಧ್ಯಕ್ಷರ ಹುದ್ದೆಯು ಖಾಲಿ ಇದ್ದಾಗ ಉಪಾಧ್ಯಕ್ಷರು ಮೇಲಿನ ಎಲ್ಲಾ ಕರ್ತವ್ಯಗಳನ್ನು ನಿರ್ವಹಿಸಬೇಕು.
- ಗ್ರಾಮ ಪಂಚಾಯಿತಿಯ ಸದಸ್ಯರು ಗ್ರಾಮ ಪಂಚಾಯಿತಿಯ ಸದಸ್ಯರು ಗ್ರಾಮ ಪಂಚಾಯಿತಿಯ ದಾಖಲೆಗಳನ್ನು ಪರಿಶೀಲಿಸುವ ಅಧಿಕಾರ ಹೊಂದಿರುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ವಿವರಣೆಗಳನ್ನು ಪಡೆಯುವ ಹಕ್ಕು ಸದಸ್ಯರಿಗಿದೆ. . ಗ್ರಾಮ ಪಂಚಾಯಿತಿ ಅಧ್ಯಕ್ಷರು / ಉಪಾಧ್ಯಕ್ಷರು ಇದಕ್ಕೆ ಅವಕಾಶ ಮಾಡಿಕೊಡಬೇಕು.
- ಪಂಚಾಯತ್ ರಾಜ್ ಕಾಯಿದೆಯ ಪ್ರಕಾರ ಅಧ್ಯಕ್ಷರ ಜವಾಬ್ದಾರಿ
· ಗ್ರಾಮ ಪಂಚಾಯಿತಿಯ ಎಲ್ಲಾ ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು.
· ವಾರ್ಡ್ ಸಮತ್ತು ಗ್ರಾಮ ಸಭೆಗಳ ಸಂಘಟನೆಯ ಜವಾಬ್ದಾರಿ ನಿರ್ವಹಿಸುವುದು.
· ತಮ್ಮ ವಾರ್ಡ್ ನ ಜನರ ಸಮಸ್ಯೆಗಳನ್ನು ಅರ್ಥೈಸಿಕೊಂಡು ಲಭ್ಯ ಅನುದಾನದ ಇತಿಮಿತಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳವುದು.
· ಸವಲತ್ತುಗಳನ್ನು, ವೈಯಕ್ತಿಕ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ಒದಗಿಸುವುದು.
· ಸಂಪನ್ಮೂಲ ಕ್ರೋಢೀಕರಣಕ್ಕೆ ಮಹತ್ವ ನೀಡುವುದು.
· ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಸಾರ್ವಜನಿಕರಿಗೆ ಉತ್ತಮವಾದ ಸೇವೆಗಳನ್ನು ನೀಡುವಂತೆ ನೋಡಿಕೊಳ್ಳುವುದು.
· ನಿಯಾಮವಳಿಗಳು ಮತ್ತು ಕಾಯಿದೆಯ ಅಂಶಗಳನ್ನು ಅರ್ಥೈಸಿಕೊಂಡು ಕರ್ತವ್ಯ ನಿರ್ವಹಿಸುವುದು.
- ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರ ಗೌರವಧನ ಅಧ್ಯಕ್ಷರು – 500 , ಉಪಾಧ್ಯಕ್ಷರು – 300 , ಸದಸ್ಯರು – 300
- ಗ್ರಾಮ ಪಂಚಾಯಿತಿ ಅಧ್ಯಕ್ಷರು ತಮ್ಮ ಸಹಿ ಇರುವ ರಾಜೀನಾಮೆ ಪತ್ರವನ್ನು ಉಪ ವಿಭಾಗಾಧಿಕಾರಿಗಳಿಗೆ ನೀಡಬೇಕು .
- ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ತಮ್ಮ ಸಹಿ ಇರುವ ರಾಜೀನಾಮೆಯನ್ನು ಅಧ್ಯಕ್ಷರಿಗೆ ನೀಡಬೇಕು.
- ಗ್ರಾಮ ಪಂಚಾಯಿತಿ ಅಧ್ಯಕ್ಷರು / ಉಪಾಧ್ಯಕ್ಷರು 10 ದಿನಗಳೊಳಗೆ ರಾಜೀನಾಮೆ ಪತ್ರವನ್ನು ಹಿಂದೆ ಪಡೆಯದಿದ್ದರೆ , ಅದು ಸ್ವೀಕೃತವಾಗಿದೆಯೆಂದು ಪರಿಗಣಿಸಬೇಕು.
- ಗ್ರಾಮ ಪಂಚಾಯಿತಿ ಅದ್ಯಕ್ಷರ ಹಾಗೂ ಉಪಾಧ್ಯಕ್ಷರ ಆಯ್ಕೆಯ ಒಂದು ವರ್ಷದವರೆಗೆ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಬಾರದು.
- ಗ್ರಾಮ ಪಂಚಾಯಿತಿಯ ಒಟ್ಟು ಸದಸ್ಯರಲ್ಲಿ 1/3 ನೇ ಸದಸ್ಯರು ಅವಿಶ್ವಾಸ ನಿರ್ಣಯಕ್ಕೆ ಸಹಿ ಹಾಕಿ ಉಪ ವಿಭಾಗಾಧಿಕಾರಿಗಳಿಗೆ ಸಲ್ಲಿಸಬೇಕು.
- ಅವಿಶ್ವಾಸ ಗೊತ್ತುವಳಿ ಇದನ್ನು ಸ್ವೀಕರಿಸಿದ 30 ದಿನದೊಳಗೆ ಉಪ ವಿಭಾಗಾಧಿಕಾರಿಗಳು ಸಭೆಯನ್ನು ಕರೆದು ಗೊತ್ತುವಳಿಯನ್ನು ಮಂಡಿಸಬೇಕು.
- ಉಪ ವಿಭಾಗಾಧಿಕಾರಿಗಳು ಸಭೆಯನ್ನು ಕರೆದು ಗೊತ್ತುವಳಿಯನ್ನು ಸಭೆಯ ನೋಟೀಸನ್ನು ಕನಿಷ್ಠ 10 ದಿನಗಳಿಗೆ ಮುಂಚಿತವಾಗಿ ಸದಸ್ಯರಿಗೆ ನೀಡಬೇಕು.
- ಗ್ರಾಮ ಪಂಚಾಯಿತಿಯ ಒಟ್ಟು ಸದಸ್ಯರ 2/3 ರಷ್ಟು ಸದಸ್ಯರು ಪರವಾಗಿ ತೀರ್ಮಾನಿಸಿದ್ದಲ್ಲಿ ಅವಿಶ್ವಾಸ ಗೊತ್ತುವಳಿ ಸ್ವೀಕಾರವಾಗುತ್ತದೆ.
- ಒಂದು ಬಾರಿ ಅವಿಶ್ವಾಸ ಗೊತ್ತುವಳಿ ವಿಫಲವಾದಲ್ಲಿ ಆ ದಿನಾಂಕದಿಂದ ಒಂದು ವರ್ಶದ ಅವಧಿಯವರೆಗೆ ಮರು ಅವಿಶ್ವಾಸ ಗೊತ್ತುವಳಿಯ ಮಂಡಿಸುವ ಹಾಗಿಲ್ಲ.
- ಗ್ರಾಮ ಪಂಚಾಯಿತಿ ಅಧ್ಯಕ್ಷ / ಉಪಾಧ್ಯಕ್ಷ / ಸದಸ್ಯರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ಸಾಬೀತಾದಲ್ಲಿ ಅವರನ್ನು ಹುದ್ಧೆಯಿಂದ ತೆಗೆದು ಹೊಕಬಹುದು.
- ಗ್ರಾಮ ಪಂಚಾಯಿತಿ ಅಧ್ಯಕ್ಷ / ಉಪಾಧ್ಯಕ್ಷ / ಸದಸ್ಯರ ದುರ್ವರ್ತನೆ , ಅದಿಕಾರ ದುರುಪಯೋಗ ಮತ್ತು ಭ್ರಷ್ಟಚಾರ ಪ್ರಕರಣಗಳು ಸಾಬೀತಾದಲ್ಲಿ ಹುದ್ದೆಯಿಂದ ತೆಗೆದು ಹಾಕಬಹುದು.
- ಗ್ರಾಮ ಪಂಚಾಯಿತಿ ಅನುಮತಿ ಇಲ್ಲದೆ ಅಧ್ಯಕ್ಷ / ಉಪಾಧ್ಯಕ್ಷ / ಸದಸ್ಯರ ಪಂಚಾಯಿತಿ ಅನುಮತಿಯಿಲ್ಲದೆ ಮೂರಕ್ಕಿಂತ ಹೆಚ್ಚು ಸಾಮಾನ್ಯ ಸಭೆಗಳಿಗೆ ಗೈರುಹಾಜರಾದರೆ ಸದಸ್ಯತ್ವ ರದ್ದಾಗುತ್ತದೆ .
- ಗ್ರಾಮ ಪಂಚಾಯಿತಿಯ ಸದಸ್ಯರು ಗ್ರಾಮ ಪಂಚಾಯಿತಿಯ ದಾಖಲೆಗಳನ್ನು ಪರಿಶೀಲಿಸುವ ಅಧಿಕಾರ ಹೊಂದಿರುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ವಿವರಣೆಗಳನ್ನು ಪಡೆಯುವ ಹಕ್ಕು ಸದಸ್ಯರಿಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು / ಉಪಾಧ್ಯಕ್ಷರು ಇದಕ್ಕೆ ಅವಕಾಶ ಮಾಡಿಕೊಡಬೇಕು.
- ಗ್ರಾಮ ಪಂಚಾಯಿತಿ ಅಧ್ಯಕ್ಷ / ಉಪಾಧ್ಯಕ್ಷ / ಸದಸ್ಯರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪಂಚಾಯಿತಿ ಕಾಮಗಾರಿಗಳಿಗೆ ತಾವಾಗಲೀ ತಮ್ಮ ಏಜೆಂಟರ ಮೂಲಕವಾಗಿ ಕರಾರು ಮಾಡಿಕೊಳ್ಳುವುದು ಅಥವಾ ಸಾಮಾಗ್ರಿ ಸರಬರಾಜು ಮಾಡುವುದು ಸಾಬೀತಾದರೆ ಸದಸ್ಯತ್ವ ರದ್ದಾಗುತ್ತದೆ.
- ಸದಸ್ಯರಿಂದ ಗ್ರಾಮ ಪಂಚಾಯಿತಿಗೆ ಯಾವುದಾದರೂ ಬಾಕಿ ಉಳಿಸಿಕೊಂಡಿದ್ದಲ್ಲಿ ಅಂತಹವರ ಸದಸ್ಯತ್ವ ರದ್ದಾಗುತ್ತದೆ.
- ಕರ್ನಾಟಕ ಸರ್ಕಾರವು ದಿನಾಂಕ/31/03/2008 ರ ಆದೇಶದಲ್ಲಿ ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಯನ್ನು ಸೃಷ್ಠಿಸಿದೆ.