ಗ್ರಾಮ ಪಂಚಾಯಿತಿ ಏನು? ಹೇಗೆ? ಯಾಕೆ? – ಪ್ರಜಾಕೀಯ
- ಪ್ರತಿ 5000 – 7000 ಜನಸಂಖ್ಯೆಗೆ ಒಂದರಂತೆ ಗ್ರಾಮ ಪಂಚಾಯಿತಿಯ ರಚನೆ.
- ಮಲೆನಾಡು ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ( ಉದಾ. ಬೇಳಗಾಂ , ಚಿಕ್ಕಮಗಳೂರು , ದಕ್ಷಿಣಕನ್ನಡ , ಧಾರವಾಡ , ಹಾಸನ , ಕೊಡಗು , ಶಿವಮೊಗ್ಗ , ಉಡುಪಿ , ಹಾವೇರಿ , ಹಾಗೂ ಉತ್ತರ ಕನ್ನಡ ಜಿಲ್ಲೆಗಳು ) 2500 ಜನಸಂಖ್ಯೆಗೆ ಕಡಿಮೆ ಇಲ್ಲದ ಪ್ರದೇಶವನ್ನು ಒಳಗೊಂಡಂತೆ ಪಂಚಾಯಿತಿ ರಚಿಸಬಹುದಾಗಿದೆ.
- ಅವಶ್ಯಕವೆಂದು ಕಂಡುಬಂದಲ್ಲಿ , ಗ್ರಾಮದ ಕೇಂದ್ರದಿಂದ ಐದು ಕಿ.ಮೀ. ಸುತ್ತಳತೆಯಲ್ಲಿರುವ ಪ್ರದೇಶವನ್ನು ಸಹ ಪಂಚಾಯಿತಿ ವ್ಯಾಪ್ತಿಯೆಂದು ಪರಿಗಣಿಸಬಹುದು.
- ಪ್ರತಿ 400 ಜನಸಂಖ್ಯೆಗೆ ಒಬ್ಬರಂತೆ ಗ್ರಾಮ ಪಂಚಾಯಿತಿಗೆ ಸದಸ್ಯರ ಆಯ್ಕೆ ನಡೆಯುತ್ತದೆ.
- ಪಟ್ಟಣ ಪಂಚಾಯಿತಿ ಅಥವಾ ಕೈಗಾರಿಕಾ ಉಪನಗರ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಇರುವ ಜಾಗಗಳನ್ನು ಹೊರತುಪಡಿಸಿ ಇಡೀ ತಾಲ್ಲೂಕಿನ ಮೇಲೆ ತಾಲ್ಲೂಕು ಪಂಚಾಯಿತಿ ನಿಯಂತ್ರಣ ಹೊಂದಿದೆ.
- ತಾಲ್ಲೂಕಿನ ಒಟ್ಟು ಜನಸಂಖ್ಯೆಯಲ್ಲಿ 10,000 ಕ್ಕೆ ಒಬ್ಬರಂತೆ ತಾಲ್ಲೂಕು ಪಂಚಾಯಿತಿ ಸದಸ್ಯರ ಆಯ್ಕೆ ನಡೆಯುತ್ತದೆ.
- ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ತಾಲ್ಲೂಕುಗಳಲ್ಲಿ ಕನಿಷ್ಠ 11 ಮಂದಿ ಚುನಾಯಿತ ಸದಸ್ಯರಿರಬೇಕು.
- ಪ್ರತಿ ತಾಲ್ಲೂಕು ಪಂಚಾಯಿತಿ ಕ್ಷೇತ್ರದಲ್ಲಿ ಚುನಾವಣೆಯ ಮೂಲಕ ಸದಸ್ಯರ ಆಯ್ಕೆ ನಡೆಯುತ್ತದೆ. ಮಾತ್ರವಲ್ಲದೆ. ತಾಲ್ಲೂಕನ್ನು ಪ್ರತಿನಿಧಿಸುವ ಲೋಕಸಭಾ , ವಿಧಾನಸಭಾ , ರಾಜ್ಯಸಭಾ , ವಿಧಾನ ಪರಿಷತ್ ಸದಸ್ಯರು ಜೊತೆಗೆ ಒಂದು ವರ್ಷದ ಅವಧಿಗೆ , ಸರದಿ ಪ್ರಕಾರ ತಾಲ್ಲೂಕಿನ 1/5 ಭಾಗದ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರುಗಳು ಸದಸ್ಯರಾಗಿರುತ್ತಾರೆ.
- ಪಟ್ಟಣ ಪಂಚಾಯಿತಿ ಅಥವಾ ಕೈಗಾರಿಕಾ ಉಪನಗರ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಇರುವ ಜಾಗಗಳನ್ನು ಹೊರತುಪಡಿಸಿ ಇಡೀ ಜಿಲ್ಲೆಯ ಮೇಲೆ ಜಿಲ್ಲಾ ಪಂಚಾಯಿತಿ ನಿಯಂತ್ರಣ ಹೊಂದಿದೆ.
- 40,000 ಜನಸಂಖ್ಯೆಗೆ ಒಬ್ಬರಂತೆ ಜಿಲ್ಲಾ ಪಂಚಾಯಿತಿ ಸದಸ್ಯರ ಆಯ್ಕೆ ನಡೆಯುತ್ತದೆ.
- ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ 30,000 ಜನಸಂಖ್ಯೆಗೆ ಹಾಗೂ ಕೊಡಗು ಜಿಲ್ಲೆಗೆ 18,000 ಜನಸಂಖ್ಯೆಗೆ ಒಬ್ಬರಂತೆ ಒಬ್ಬ ಸದಸ್ಯರನ್ನು ಆಯ್ಕೆ ಮಾಡಬೇಕಿದೆ.
- ಪ್ರತಿ ಜಿಲ್ಲಾ ಪಂಚಾಯಿತಿಗೆ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಚುನಾಯಿತ ಸದಸ್ಯರಲ್ಲದೇ ಜಿಲ್ಲೆಯನ್ನು ಪ್ರತಿನಿಧಿಸುವ ಲೋಕಸಭಾ , ವಿಧಾನಾಸಭಾ , ರಾಜ್ಯಸಭಾ , ವಿಧಾನ ಪರಿಷತ್ತಿನ ಸದಸ್ಯರು ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷರುಗಳು ಸದಸ್ಯರಾಗಿರುತ್ತಾರೆ.
- ಮೀಸಲಿಟ್ಟ ಹಾಗೂ ಮೀಸಲಿರಿಸದ ( ಸಮಾನ್ಯ ) ಒಟ್ಟು ಸ್ಥಾನಗಳಲ್ಲಿ 1/3 ಕ್ಕಿಂತ ಕಡಿಮೆಯಿಲ್ಲದ ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಬೇಕು.
- ಚುನಾಯಿತರಾದ ಸದಸ್ಯರ ಅವಧಿಯು ಗ್ರಾಮ ಪಂಚಾಯಿತಿಯ ಪ್ರಥಮ ಸಭೆ ಅಂದರೆ ಅಧ್ಯಕ್ಷ / ಉಪಾಧ್ಯಕ್ಷರ ಆಯ್ಕೆಗಾಗಿ ಗೊತ್ತುಪಡಿಸಿದ ಸಭೆಯ ದಿನಾಂಕದಿಂದ ಮುಂದಿನ ಐದು ವರ್ಷಗಳವೆರೆಗೆ ಇರುತ್ತದೆ.
- ಗ್ರಾಮ ಪಂಚಾಯಿತಿಯ ಅನುಮತಿ ಇಲ್ಲದೆ. ಗ್ರಾಮ ಪಂಚಾಯಿತಿಯ ಮೂರಕ್ಕಿಂತ ಹೆಚ್ಚು ಸಾಮಾನ್ಯ ಸಭೆಗಳಿಗೆ ಅನುಕ್ರಮವಾಗಿ ಗೈರುಹಾಜರಾದರೆ ಅವರು ಸದಸ್ಯತ್ವ ಕಳೆದುಕೊಳ್ಳುತ್ತಾರೆ.
- ಗ್ರಾಮ ಪಂಚಾಯಿತಿ ಸದಸ್ಯರು ತಮ್ಮ ಸಹಿ ಸಹಿತ ಬರಹದಲ್ಲಿ ಬರೆದು ರಾಜೀನಾಮೆಯನ್ನು ಅಧ್ಯಕ್ಷರಿಗೆ ಸಲ್ಲಿಸಬಹುದು. ಹೀಗೆ ಬರೆದ ಬರಹವನ್ನು 15 ದಿನಗಳೊಳಗೆ ಬರಹದ ಮೂಲಕ ಹಿಂತೆಗೆದುಕೊಳ್ಳದಿದ್ದಲ್ಲಿ , ಅವರ ಸ್ಥಾನ ಖಾಲಿಯಾಗುತ್ತದೆ.
- ಸದಸ್ಯರು ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಅಸಮರ್ಥರಾದರೆ ಅಥವಾ ಅಪಕೀರ್ತಿಕರ ನಡತೆಯುಳ್ಳವರಾದರೆ , ಅವರಿಗೆ ಅಹವಾಲನ್ನು ಹೇಳಲು ಅವಕಾಶವನ್ನು ಕೊಟ್ಟ ತರುವಾಯ ವಿಚಾರಣೆಯನ್ನು ನಡೆಸಿ ನಂತರ ಸದಸ್ಯತ್ವದಿಂದ ತೆಗೆದುಹಾಕಬಹುದು.
- ಗ್ರಾಮ ಪಂಚಾಯಿತಿಯು ಅದರ ಅಧಿಕಾರವನ್ನು ಮೀರಿದರೆ ಅಥವಾ ದುರುಪಯೋಗ ಪಡಿಸಿದರೆ ವಿಸರ್ಜನೆ ಮಾಡಬಹುದು.
- ಗ್ರಾಮ ಪಂಚಾಯಿತಿಗೆ ವಿಧಿಸಿದ ಕರ್ತವ್ಯಗಳನ್ನು ನೆರವೇರಿಸಲು ಅಸಮರ್ಥವಾದರೆ ಅಥವಾ ಮೇಲಿಂದ ಮೇಲೆ ವಿಫಲವಾದರೆ ಅಂತಹ ಗ್ರಾಮ ಪಂಚಾಯಿತಿಯನ್ನು ವಿಸರ್ಜಿಸಬಹುದು.
- ಪ್ರತಿ ಸಮಿತಿಯಲ್ಲಿ ಸಮಿತಿಯ ಅಧ್ಯಕ್ಷರು ಸೇರಿದಂತೆ 3 – 5 ಸದಸ್ಯರಿರುತ್ತಾರೆ. ಸಮಿತಿಯ ಅವಧಿಯು ಚುನಾವಣೆಯ ದಿನಾಂಕದಿಂದ 30 ತಿಂಗಳು
- ಗ್ರಾಮ ಪಂಚಾಯಿತಿ ಅಧ್ಯಕ್ಷರು ಉತ್ಪಾದನಾ ಹಾಗೂ ಸೌಕರ್ಯ ಸಮಿತಿಗಳ ಅಧ್ಯಕ್ಷರಾಗಿರುತ್ತಾರೆ. ಉಪಾಧ್ಯಕ್ಷರು ಸಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷನಾಗುತ್ತಾನೆ.
- ಸಾಮಾಜಿಕ ನ್ಯಾಯ ಸಮಿತಿಯಲ್ಲಿ ಕನಿಷ್ಟ ಪಕ್ಷ ತಲಾ ಒಬ್ಬ ಮಹಿಳಾ ಸದಸ್ಯೆ ಮತ್ತು ಪರಿಶಿಷ್ಟ ಜಾತಿ / ವರ್ಗದ ಸದಸ್ಯರಿಬೇಕು . ಪ್ರತಿ ಸಮಿತಿಯಲ್ಲಿ ಸರ್ಕಾರವು ಅಂಗೀಕರಿಸಿದ ಮಂಡಲಿಗಳು ಸದಸ್ಯರೊಬ್ಬರನ್ನು ಸೇರ್ಪಡೆ ಮಾಡಿಕೊಳ್ಳಲು ಅವಕಾಸವಿದೆ.
- ಇದೇ ರೀತಿ ತಾಲ್ಲೂಕು ಪಂಚಾಯಿತಿ ಮೂರು ಸ್ಥಾಯಿ ಸಮಿತಿಗಳನ್ನು , ಜಿಲ್ಲಾ ಪಂಚಾಯಿತಿ ಐದು ಸ್ಥಾಯಿ ಸಮಿತಿಗಳನ್ನು ರಚಿಸಬೇಕಿದೆ.
- ಕರ್ನಾಟಕ ಪಂಚಾಯಿತಿ ರಾಜ್ ಅಧಿನಿಯಮದ ಪ್ರಕರಣ 61 ( ಎ ) ಪ್ರಕಾರ ಗ್ರಾಮ ಪಂಚಾಯಿತಿಯು ನಿರ್ದಿಷ್ಟ ಉದ್ದೇಶಗಳಿಗೆ ಉಪ ಸಮಿತಿಗಳನ್ನು ರಚಿಸಬಹುದು.
- ಸಾಮಾನ್ಯ ಸಭೆಯು ಕನಿಷ್ಠ ಪ್ರತಿ ತಿಂಗಳಿಗೊಮ್ಮೆ ಸಾಮಾನ್ಯ ಸಭೆಯನ್ನು ನಡೆಸಬೇಕು.