ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ತೆರಿಗೆ – ಸಾಮಾನ್ಯ ಪ್ರಜೆ – ಪ್ರಜಾಕೀಯಾ

*ತೆರಿಗೆ – Tax*

*ಕಳೆದ 72 ವರ್ಷದಿಂದ ಸಾಮಾನ್ಯ ಪ್ರಜೆಗಳಿಗೆ, ತೆರಿಗೆ ವಿಷಯದಲ್ಲಿ ಬೇರೆಯೇ ಲೋಕ ತೋರಿಸುತ್ತಿದ್ದಾರೆ*

*ಇಲ್ಲಿ ಪ್ರತೀಯೊಬ್ಬ ಪ್ರಜೆಯು ತೆರಿಗೆ ಕೊಡುತ್ತಿರುವನೆಂದು ನಮ್ಮ ರಾಜಕಾರಣಿಗಳು ಪ್ರಜೆಗೆ ಮನದಟ್ಟೆ ಮಾಡಲಿಲ್ಲ.*

*ಕೇವಲ ಆದಾಯ ತೆರಿಗೆ (Income Tax) ಕೊಡುವವನು ತೆರಿಗೆ ಪಾವತಿ ಮಾಡುತ್ತಿರುವ ನೆಂಬ ಭ್ರಮೆಯನ್ನು ನಿರ್ಮಿಸಿರುವರು.*

*ಒಬ್ಬ ಬಿಕ್ಷುಕನೂ ತನಗೆ ಬೇಕಾದ ವಸ್ತುವನ್ನು ಖರೀದಿಸಿದಾಗ, ಅವನು ಅದಕ್ಕೆ ತೆರಿಗೆ ಕಟ್ಟುತ್ತಾನೆ. ಅದು GST ಆಗಿರ ಬಹುದು. Excise Duty ಆಗಿರ ಬಹುದು.*

*ಇಲ್ಲಿ ಒಂದು ಮುಖ್ಯ ವಿಷಯ ತಿಳಿಯ ಬೇಕೇನೆಂದರೆ, ಯಾರೆ, ಏನೇ ತೆರಿಗೆ ಎಲ್ಲಿಯಾದರೂ ಕಟ್ಟಿದ್ದರೆ, ಅದನ್ನು ತನ್ನ ಮಾರಾಟದ ಸಾಮಾನಿನ ಮುಖಾಂತರ ಹಿಂಪಡೆಯುತ್ತಾನೆ. ಅವನ ಎಲ್ಲಾ ಖರ್ಚು ಆ ಸಾಮಾನಿನ ಬೆಲೆಯಲ್ಲಿ ಕೂಡಿಸಿರುತ್ತಾನೆ. ಕಡೆಗೆ ಅದನ್ನು ಖರೀದಿಸುವ ಪ್ರಜೆಯೆ ಅದನ್ನು ಹೊರುತ್ತಾನೆ.*

*ಯಾರೆ ಒಬ್ಬ ಬ್ಯುಸಿನೆಸ್ ಮ್ಯಾನ್, ಕಂಪೆನಿ ಅಧಿಕಾರಿಗಳು, ಸಣ್ಣ- ದೊಡ್ಡ ವ್ಯವಹಾರ, ಇತ್ಯಾದಿ ಎಲ್ಲರೂ ಆದಾಯ ತೆರಿಗೆ ಕಟ್ಟುವುದು, ಯಾವುದೆ ಒಂದು ವಸ್ತು ಅಥವಾ ಸೇವೆ, ಪ್ರಜೆಗಳಿಗೆ ಮಾರಿ ಬಂದ ಹಣದಿಂದಲೆ ಕಟ್ಟುತ್ತಾನೆ. ಕಟ್ಟ- ಕಡೆಗೆ ಅದು ಕೂಡಾ ಪ್ರಜೆಗಳಿಂದ ಬಂದ ಹಣವಲ್ಲವೇ ?*

  ಜನಸಂಖ್ಯೆ ಸ್ಪೋಟ ಬೆಂಗಳೂರು- POPULATION EXPLOSION -BENGALURU

*ಪ್ರಜೆಯು ಕಷ್ಟ ಪಟ್ಟು ದುಡಿದು ಬಂದ ಹಣದಿಂದ ಆ ವಸ್ತು ಅಥವಾ ಸೇವೆಯನ್ನು ಖರೀದಿಸುವನಲ್ಲವೇ?*

*ಕೇವಲ, NRI( Non Resident Indians) ಗಳು ಕಳುಹಿಸಿದ ಹೊರ ದೇಶದಿಂದ ಬಂದ ಹಣ ಹಾಗು ರಫ್ತು( Export) ನಿಂದ ಸಂಪಾದಿಸಿದ ಹಣಕ್ಕೆ ಆದಾಯ ತೆರಿಗೆ ವಿನಾಯಿತಿ ಇದೆ. ಯಾಕೆಂದರೆ ಅವುಗಳು ದೇಶಕ್ಕೆ ವಿದೇಶಿ ಮುದ್ರಾ ( Foriegn Exchange) ಕ್ಷಮತೆ ಕೊಟ್ಟು, ನಮ್ಮ ದೇಶದ ಹಣಕ್ಕೆ ಸರಿಯಾದ ಭದ್ರತೆಯನ್ನು ಕೊಡುವುದರಿಂದ, ನಮಗೆ ಬೇಕಾದ್ದದನ್ನು ಆಮದು ಮಾಡಿ ಕೊಳ್ಳುವ ಕ್ಷಮತೆಯನ್ನು ಕೊಡುವುದು. ನಮ್ಮ ಪ್ರಜೆಗಳು ಬೇರೆ ದೇಶಕ್ಕೆ ಪ್ರಯಾಣಿಸಿದಾಗ ಅವರಿಗೆ ಬೇಕಾದ ವಿದೇಶಿ ಮುದ್ರವನ್ನು ಒದಗಿಸಲು ಸಂಕೋಚವಿರುವುದಿಲ್ಲ.*

  ಗುಣ ಮಟ್ಟದ ಮೂಲಭೂತ ಸೌಕರ್ಯ - ಉತ್ತಮ ಪ್ರಜಾಕೀಯಾ ಪಕ್ಷ

*ಆದರೆ ದೇಶದ ಒಳಗೆ ನಡೆಯುವ ಎಲ್ಲಾ ವ್ಯವಹಾರ- ತೆರಿಗೆ ಪ್ರಜೆಗಳಿಂದ, ಅವರು ಕಷ್ಟ- ಪಟ್ಟು ದುಡಿದ ಹಣದಿಂದಲೇ ಬರುವುದು.*

*ತೆರಿಗೆ ಸರ್ಕಾರಕ್ಕೆ ಸಲ್ಲಿಸುವವನೂ ಅದಕ್ಕಾಗಿ ಖಂಡಿತಾ ಕಷ್ಟ- ಪಟ್ಟು ದುಡಿಯುತ್ತಾನೆ.*

*ಆದರೆ, ಅವನು ಸಲ್ಲಿಸುವ ಹಣ ಪ್ರಜೆಗಳಿಂದಲೆ ಬಂದಿರುವುದು.*

*ತೆರಿಗೆ ಕಟ್ಟುವುದು ನಿಜವಾದ ಸಮಾಜ ಸೇವೆ. ಯಾಕೆಂದರೆ ಅದೇ ಹಣವನ್ನು ಸರಕಾರವು ಪ್ರಜೆಗಳ ಸೌಕರ್ಯ-ಸೌಲಭ್ಯಗಳಿಗೆ ಉಪಯೋಗಿಸುವುದು.*

*ಆದರೆ, ಇಲ್ಲಿ ಬಹುತೇಕ ಭ್ರಷ್ಟರ ಅನೈತಿಕ ಜೋಲಿಗಳಿಗೆ ಹೋಗುವುದು ವಿಷಾದಕರ. ಆದ್ದರಿಂದ ಎಲ್ಲವೂ ಕಳಪೆಯಾಗಿದೆ*

*ತೆರಿಗೆ ಹಣದ ಪ್ರತೀಯೊಂದು ಪೈಸೆ ಕೂಡಾ ಪ್ರಜೆಗಳಿಂದಲೇ ಬಂದಿದ್ದು, ಸರಕಾರವು ಖರ್ಚು ಮಾಡುವ ಪ್ರತೀಯೊಂದು ಪೈಸೆಯೂ ಪ್ರಜೆಯದಾಗಿರುತ್ತದೆ.*

*ನಾಳೆ ಸರಕಾರ ಸಾಲ ಮಾಡಿದರೂ, ನಾವು ಪ್ರಜೆಗಳೇ ಅದನ್ನು ಹಿಂದಿರುಗಿಸ ಬೇಕು. ರಾಜಕಾರಣಿ, 5 ವರ್ಷದ ನಂತರ ಕಾಣೆಯಾಗ ಬಹುದು. ಸಾಲದ ಹೊರೆಯೂ ಪ್ರಜೆಗಳ ಮೇಲೆಯೆ.*

*ಆದ್ದರಿಂದ ಯಾವುದೇ ಪಾರ್ಟಿ ಅಥವಾ ರಾಜಕೀಯಾ ವ್ಯಕ್ತಿ ತಾನು ಮಾಡಿದ್ದು ಎಂದರೆ, ಅದನ್ನು ಖಂಡಿಸ ಬೇಕು.*

  ಶಾಸಕಾಂಗ ಸಭೆಯ ಸದಸ್ಯರ ಪಾತ್ರಗಳು ಮತ್ತು ಜವಾಬ್ದಾರಿಗಳು. ಶಾಸಕರ (ಎಂಎಲ್‌ಎ) ಪಾತ್ರವೇನು ತಿಳಿಯಿರಿ ?

*ಅವನನ್ನು ಆ ಕೆಲಸಕ್ಕೆ ಆರಿಸಿ, ಸಂಬಳ, ಬತ್ತೆ, ಕಾರು, ಮೆಡಿಕಲ್, ಟೆಲಿಫೋನ್, ಆಫೀಸ್, ಸಾರಿಗೆ ಖರ್ಚು ಹಾಗು ಪಿಂಚಣಿ ಕೊಟ್ಟು ಪ್ರಜೆಗಳೇ ಸಾಕುತ್ತಿರುವುದು.*

*ಅವನು ಪ್ರಜೆಗಳ “ಪ್ರಜಾಕಾರ್ಮಿಕ” ಮಾತ್ರ. ಅವನು ಖಂಡಿತಾ ದೊರೆಯಲ್ಲ.*

*ಇಲ್ಲೊಂದು ಮುಖ್ಯ ವಿಷಯ, ತೆರಿಗೆ ಕೊಡುವ ಪ್ರತೀ ಪ್ರಜೆಯು ಸಮಾಜ ಸೇವಕನೆಂದು ತಿಳಿದಿರಬೇಕು.*

*ತೆರಿಗೆ ಕೊಡದವ ಯಾವುದೇ ಪ್ರಜೆ ಈ ದೇಶದಲ್ಲಿಲ್ಲ.*

*ಇದ್ದರೆ ತೋರಿಸಿ .*

*ಜೈ ಪ್ರಜಾಕೀಯಾ.*

*ಜೈ ಉತ್ತಮ ಪ್ರಜಾಕೀಯಾ ಪಾರ್ಟಿ ( ಉ.ಪಿ.ಪಿ.).*

Leave a Reply

Your email address will not be published. Required fields are marked *

Translate »