ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ತಾರ್ಕಿಕ ಆಲೋಚನೆ – Logical Thinking – Critical Thinking

ತಾರ್ಕಿಕ ಆಲೋಚನೆ – Logical Thinking-Critical Thinking

ಧರ್ಮ, ಜಾತಿ, ಪಂಗಡ, ಸಂಸ್ಕ್ರತಿ, ಇತ್ಯಾದಿ, ನೂರಾರು ವರ್ಷಗಳಿಂದ ನಡೆದು ಬಂದಿರುವ ಒಂದು ಗುರುತಿಸುವ ವಿಧಾನ. ಅದು ರಾಜರ ಕಾಲದಲ್ಲಿ, ಸರ್ವಾಧಿಕಾರಿಗಳ ಕಾಲದಲ್ಲಿ ಹಾಗು ಯಾವುದೇ ರೀತಿಯ ಕರ-ಕುಶಲತೆಯಳಲ್ಲಿ ತರಬೇತಿ ಕೊಡುವ ಶಾಲಾ- ಕಾಲೇಜುಗಳು ಇಲ್ಲದ ಸಮಯ-ಕಾರಣ, ಆ ಕೆಲಸವನ್ನು ತಿಳಿದಿರುವ ಜನರನ್ನು ಒಂದು ಜಾತಿಯ ಹೆಸರಿನಲ್ಲಿ ಗುರುತಿಸಲಾಯಿತು.

ಆ ಕರ-ಕುಶಲತೆ, ತಂದೆಯಿಂದ ಮಗನಿಗೆ, ಕಲಿಸಲಾಯಿತು. ಹಾಗೆ, ಕೇವಲ ಅವುಗಳು ವಂಶ ಪಾರಂಪರೆಯಾಗಿ ಮುಂದುವರಿಯಿತು. ಹೀಗೆ, ಅವರ ಕೆಲಸದ ವಿಶಿಷ್ಟತೆಯ ಮೇಲೆ ಅವರನ್ನು, ಆ ಜಾತಿಯವರೆಂದು ಗುರುತಿಸಲಾಯಿತು. ಇದು ಒಂದು ವಾಡಿಕೆ ಆಯಿತು.

ಹಾಗೆ ಬೇರೆ-ಬೇರೆ ನಂಬಿಕೆ ಹಾಗು ಧಾರ್ಮಿಕ ಕಟ್ಟು-ನಿಟ್ಟುಗಳನ್ನು ನಂಬುವವರು, ಹಿಂಬಾಲಿಸುವವರು, ಅದರಲ್ಲಿ ಬರೆಯಲಾದ ತತ್ವವನ್ನು ಪಾಲಿಸುವವರನ್ನು ಆ ಧರ್ಮದವರೆಂದು ಗುರುತಿಸಲಾಯಿತು.

ಯಾವ ಧರ್ಮದವರಾಗಿರಲಿ, ಜಾತಿಯವರಾಗಿರಲಿ, ಪಂಗಡದವರಾಗಿರಲಿ ಅಥವಾ ಸಂಸ್ಕ್ರತಿಯವರಾಗಿರಲಿ, ಒಂದು ದೇಶದ ಪ್ರಜೆ ಆಗಿರುವುದರಿಂದ, ಆ ದೇಶದ ಸಂವಿಧಾನ ಹಾಗು ಕಾನೂನು ವ್ಯವಸ್ಥೆಯನ್ನು ಪಾಲಿಸಲೇ ಬೇಕು. ಅದರಲ್ಲೂ, ಪ್ರಜಾಪ್ರಭುತ್ವದಲ್ಲಿ ಎಲ್ಲಾ ಪ್ರಜೆಯು ಸಮಾನರು. ಬೇರೆ-ಬೇರೆಯೆಂದು ಗುರುತಿಸಲ್ಪಡುವ ಧರ್ಮ, ಜಾತಿ, ಪಂಗಡ ಹಾಗು ಸಂಸ್ಕ್ರತಿಯು, ಇಲ್ಲಿ ಕೇವಲ ಖಾಸಾಗಿ ವಿಷಯವಾಗುವುದು. ದೇಶಕ್ಕೆ, ಕೇವಲ ಅವನು ಪ್ರಜೆ ಮಾತ್ರ.

ಮನುಷ್ಯ ಕುಲವು ನಿರಂತರವಾಗಿ ಸಂಶೋಧನೆಯಲ್ಲಿ ತೊಡಗಿರುವುದರಿಂದ, ತಂತ್ರ ಜ್ಞಾನವೂ ಅವಿಷ್ಕಾರ ಆದಂತೆ, ಅದನ್ನು ತನ್ನೊಳಗೆ ಅಳವಡಿಸುತ್ತಾ ಮುಂದುವರಿಯುತ್ತಾನೆ. ಮನುಷ್ಯನಲ್ಲಿ ಯಾವಾಗ ಕಲ್ಪನೆ ಹಾಗು ತಾರ್ಕಿಕ ಗುಣಗಳು ಹೆಚ್ಚಾಗುವುದೋ, ಆವಾಗ, ಅವನು ಅವಿಷ್ಕಾರದ ಕಡೆ ಗಮನ ಹರಿಸುತ್ತಾನೆ. ಧರ್ಮ, ಜಾತಿ, ಪಂಗಡ ಹಾಗು ಸಂಸ್ಕ್ರತಿಯಿಂದ ಅವಿಷ್ಕಾರ ಖಂಡಿತಾ ಸಾಧ್ಯವಿಲ್ಲ. ಅವುಗಳಲ್ಲಿ ಬದಲಾವಣೆ ಆಗಬಾರದೆಂಬ ಮನೋಭಾವ, ಅದನ್ನು ನಂಬುವ ಪ್ರತೀ ಮನುಷ್ಯನ ಭಾವನೆ.

ಆದ್ದರಿಂದಲೇ ಧರ್ಮ, ಜಾತಿ, ಪಂಗಡ ಹಾಗು ಸಂಸ್ಕ್ರತಿಯು, ಕೇವಲ ನಂಬಿಕೆಯಾದರೆ, ವಿಜ್ಞಾನವು ಖಂಡಿತಾ ತಾರ್ಕಿಕ ಆಲೋಚನೆಯಂತೆ ನಡೆಯಲ್ಪಡುವುದು. ಅವಿಷ್ಕಾರ ಹಾಗು ಬದಲಾವಣೆ ಕೇವಲ ಕಲ್ಪನೆ(Imagination)ಹಾಗು ತಾರ್ಕಿಕ( Logical) ಆಲೋಚನೆ ಮಾಡುವ ವ್ಯಕ್ತಿಯಿಂದ ಮಾತ್ರ ಸಾಧ್ಯ.

ಬದಲಾವಣೆ ಹಾಗು ಅವಿಷ್ಕಾರ ಪ್ರಪಂಚದ ನಿಯಮ. ಅದು ನಿರಂತರವಾಗಿ ಮುಂದುವರಿಯುವುದು. ಒಂದು ಸಮಯದಲ್ಲಿ ಚಂದ್ರನು ದೇವರೆಂದು ತಿಳಿದಿರುವ, ನಮಗೆ, ಅದು ಕೂಡಾ ಭೂಮಿಯಂತೆ ನೆಲ- ಮಣ್ಣು ಇರುವ ಒಂದು ಗ್ರಹವೆಂದು ವಿಜ್ಞಾನ ಪರಿಚಯಿಸಿತು. ಅದನ್ನು ರುಜುವಾತು ಪಡಿಸಲು ಹಾಗು ತಲುಪಲು ವಿಜ್ಞಾನದಿಂದ ಸಾಧ್ಯವಾಯಿತು.

ಆದ್ದರಿಂದ ತಾರ್ಕಿಕವಾಗಿ ( Logical & Critical) ಆಲೋಚನೆ ಮಾಡದೆ, ಯಾವುದೇ ವಿಷಯವನ್ನು ಬೇರೆಯವರ ಮಾತಿನ ಮೇಲೆ ನಿರ್ಧರಿಸುವ ಮನುಷ್ಯನು, ಆಡಿನ ಹಿಂದೆ ಓಡುವ ಕುರಿಗೆ ಸಮಾನ.

ಯಾವುದೇ ಒಂದು ಧರ್ಮ, ಜಾತಿ, ಪಂಗಡ ಹಾಗು ಸಂಸ್ಕ್ರತಿಯಿಂದ ಸಂಪೂರ್ಣ ತನ್ನನ್ನು ಆವರಿಸಿ, ತನ್ನ ಸುತ್ತ ಅದರ ಗೋಡೆ ಕಟ್ಟಿಕೊಂಡು, ಹೊಸ ವಿಷಯ, ಅವಿಸ್ಕಾರ, ಬದಲಾವಣೆಗೆ ತನ್ನ ಆಲೋಚನೆಯೆಂಬ ಮನೆಯ ಬಾಗಿಲು ತೆಗೆಯದವ, ಅಭಿವೃಧ್ಧಿಗೆ ಮಾರಕ. ಇಂತವರು, ಕೊಳಚೆಯಲ್ಲಿಯೇ ಬದುಕುವರು. ಸಮಾಜದಲ್ಲಿ ನಡೆಯುವ ಅನ್ಯಾಯ-ಅನರ್ಥಗಳಿಗೆ ಕಾರಣಿಭೂತರಾಗುವರು. ಇಂತವರು, ಬದಲಾವಣೆಯನ್ನು ತನ್ನಲ್ಲಿ ಅಳವಡಿಸಲಾಗುವುದಿಲ್ಲ. ಇವರಿಂದಲೆ, ಸಮಾಜದಲ್ಲಿ ಮೇಲು- ಕೀಳು ಎಂಬ ಭಾವನೆ ತಾಂಡವ ಆಡುವುದು.

ಈಗ, ಧರ್ಮ, ಜಾತಿ, ಪಂಗಡ ಹಾಗು ಸಂಸ್ಕ್ರತಿಯಿಂದಲೂ ಮೇಲಾಗಿ, ಒಬ್ಬ ವ್ಯಕ್ತಿಯನ್ನು ನಂಬುವುದು, ಅವನ ಹಿಂದೆ ಓಡುವುದು ಒಂದು ಹೊಸ ಸಂಸ್ಕ್ರತಿಯನ್ನು ಹುಟ್ಟು ಹಾಕಿದೆ. ಅವನು, ಎಷ್ಟು ಸುಳ್ಳು ಹೇಳಿದರೂ ಪರ್ವ ಇಲ್ಲ, ಕ್ರಿಮಿನಲ್ ಆದರೂ ಪರ್ವ ಇಲ್ಲ, ಅಧರ್ಮಿಯಾದರೂ ಪರ್ವ ಇಲ್ಲ, ಅವನು ನನ್ನ ಜಾತಿಯವ ಅಥವಾ ಧರ್ಮದವ ಹಾಗು ನನ್ನ ನಂಬಿಕೆಯನ್ನು ಹುರಿದುಂಬಿಸುವವ ಆದರೆ ಸಾಕು.

,ಯಾವುದನ್ನೂ ವಿಮರ್ಷೆ ಮಾಡದೆ ಒಪ್ಪಿ ಕೊಳ್ಳುವುದು ನಂಬಿಕೆ ಆಗುವುದು. ಆದ್ದರಿಂದ, ಪ್ರತೀಯೊಬ್ಬ ಮನುಷ್ಯನು, ತಾರ್ಕಿಕ ಆಲೋಚನೆ (Logical & Critical Thinking) ಮಾಡಿ, ತನ್ನ ನಿರ್ಧಾರ ತೆಗೆದು ಕೊಂಡಾಗ, ಅವನಿಂದ ಬೇರೆಯವರಿಗೆ ತೊಂದರೆ ಆಗುವುದಿಲ್ಲ. ಇದು ಇಂದಿನ ಸಮಾಜದ ಅತೀ ಅವಶ್ಯಕತೆ.

ಆಡಿನ ಹಿಂದೆ ಓಡುವ ಕುರಿಗಳಾಗುವುದು ಬೇಡ. ಸ್ವಂತಿಕೆ ಇರುವ ಪ್ರಜೆಗಳಾಗುವ.

ಜೈ ಪ್ರಜಾಕೀಯ
ಜೈ ಉತ್ತಮ ಪ್ರಜಾಕೀಯ ಪಕ್ಷ (ಉ.ಪಿ.ಪಿ.)

Leave a Reply

Your email address will not be published. Required fields are marked *

Translate »