ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಪ್ರಜಾಕೀಯದಲ್ಲಿ ಪ್ರಜೆಯ ಶಕ್ತಿ ತಿಳಿಯಿರಿ

ಪ್ರಜೆ

ಹುಟ್ಟಿದ ಮಗು ನಡೆಯಲು ಒಂದು ವರ್ಷ

ಮಾತನಾಡಲು ಎರಡು ವರ್ಷ

ಶಾಲೆಗೆ ಹೋಗಲು ಪ್ರಾರಂಭ ಮೂರು ವರ್ಷ

ಶಾಲಾ ಜೀವನ ವಿಧ್ಯಾರ್ಥಿಯಾಗಿ ಮೂರರಿಂದ 18 ವರ್ಷ

ಕಾಲೇಜು ಜೀವನ 18 ರಿಂದ 25 ವರ್ಷ

ಇವುಗಳು ಸಂಪೂರ್ಣ ತಂದೆ-ತಾಯಿಯ ಕೊಡುಗೆ ಆಗಿರುವುದು. ಇಲ್ಲಿ ಸ್ವಂತದ ಪಾತ್ರ ಖಂಡಿತಾ ಇಲ್ಲ. ಆದರೂ ಕೆಲವೊಂದು ಮಂದಿಯ ಜೀವನವು, ತಂದೆ-ತಾಯಿ ಹಾಗು ಸಂಬಂದಿಕರ ಬೆಂಬಲ ಇಲ್ಲದಾಗ, 18 ವರ್ಷದ ನಂತರ ತಾನೇ ರೂಪಿಸುವಂತಾಗ ಬಹುದು.

ಉದ್ಯೋಗದ ಪ್ರಾರಂಭ 25 ವರ್ಷದಿಂದ

ಈವಾಗ ಪ್ರಜೆಯು, ರಾಜ್ಯ- ದೇಶಕ್ಕೆ ಸಂಪನ್ಮೂಲನಾಗುವನು.

ಮದುವೆ-ಕುಟುಂಬದ ಪ್ರಾರಂಭ 30 ವರ್ಷದಿಂದ

ಹೀಗೆ 25 ರಿಂದ 60 ರ ವರೆಗೆ (35 ವರ್ಷ) ಪ್ರತೀ ಪ್ರಜೆಯು ತನ್ನ ಎಲ್ಲಾ ಜವಾಬ್ದಾರಿಯನ್ನು ಪೂರೈಸುವನು

ತಂದೆ-ತಾಯಿ ಜವಾಬ್ದಾರಿ, ಹೆಂಡತಿ- ಮಕ್ಕಳ ಜವಾಬ್ದಾರಿ, ಕೆಲವೊಂದು ಸಲ ಸಹೋದರ- ಸಹೋದರಿಯರ ಜವಾಬ್ದಾರಿ, ಈ ಸಮಯದಲ್ಲಿ ಅವನು ಈ 35 ವರ್ಷದಲ್ಲಿ ಮಾಡ ಬೇಕಾಗುವುದು.

ಇದೇ 35 ವರ್ಷದಲ್ಲಿ, ಅವನು ರಾಜ್ಯ-ದೇಶಕ್ಕೆ ತೆರಿಗೆ ಕಟ್ಟುತ್ತಾನೆ ಹಾಗು ರಾಜ್ಯ-ದೇಶದ ಅಭಿವೃದ್ಧಿಗೂ ಕಾರಣಿಭೂತನಾಗುವನು.

ಆದ್ದರಿಂದ, ಈ 35 ವರ್ಷ, ಅವನ ಜವಾಬ್ದಾರಿಯು ಮುಗಿಲು ಮುಟ್ಟುವುದು.

ತಂದೆ- ತಾಯಿ, ಹೆಂಡತಿ- ಮಕ್ಕಳು, ರಾಜ್ಯ- ದೇಶ, ಎಲ್ಲವೂ ಒಬ್ಬ ಪ್ರಜೆಯ ಜವಾಬ್ದಾರಿ ಆಗುವುದು. ಖಂಡಿತಾ ಇದರಲ್ಲಿ ಹೆಂಡತಿಯ ಪಾಲು ಅಷ್ಟೆ ಇರುವುದು.

ಹೆಂಡತಿ- ಮಕ್ಕಳನ್ನು ಸಾಕಿದ ಹಾಗೆ, ಅವನು ರಾಜ್ಯ- ದೇಶದ ಅಭಿವೃದ್ದಿಗೆ ಕೂಡಾ ದುಡಿಯುತ್ತಾನೆ.

ತಾನೂ ಸಂಪನ್ಮೂಲನಾಗಿ, ಒಂದು ಕಡೆ, ತನ್ನ ಮಕ್ಕಳನ್ನು ಸಂಪನ್ಮೂಲ ಪ್ರಜೆಯಾಗಲು ಕಷ್ಟ ಪಟ್ಟರೆ, ಇನ್ನೊಂದು ಕಡೆ, ತನ್ನ ಸಂಪಾದನೆಯಿಂದ ತೆರಿಗೆ ಕಟ್ಟಿ, ರಾಜ್ಯ- ದೇಶದ ಅಭಿವೃದ್ದಿಗೆ ದುಡಿಯುತ್ತಾನೆ.

ಆದ್ದರಿಂದ ಪ್ರತೀಯೊಬ್ಬ ಪ್ರಜೆಯು ನಮ್ಮ ರಾಜ್ಯ-ದೇಶದ ಅಭಿವೃದ್ದಿಯಲ್ಲಿ, ತನ್ನ ಆದಾಯಕ್ಕೆ ತಕ್ಕಂತೆ ಕೊಡುಗೆ ಮಾಡುವನು.

ನಮ್ಮ ತೆರಿಗೆ ಹಣದಿಂದ ಸಂಬಳ, ಬತ್ತೆ, ಸೌಕರ್ಯ- ಸೌಲಭ್ಯ, ಪಿಂಚಣಿ ಪಡೆದ ರಾಜಕಾರಣಿಯಿಂದ, ಖಂಡಿತಾ ಏನೂ ರಾಜ್ಯ- ದೇಶಕ್ಕೆ ಕೊಡುಗೆ ಇಲ್ಲ. ಅವನೊಬ್ಬ ಪರಾವಲಂಬಿ ಪ್ರಜೆ. ನಮ್ಮ ತೆರಿಗೆ ಹಣದಿಂದ ಬೇಕಾದಷ್ಟು ಸೌಕರ್ಯ- ಸೌಲಭ್ಯ ಪಡೆದು, ನಮ್ಮ ತೆರಿಗೆ ಹಣವನ್ನೆ ಭೃಷ್ಟಾಚಾರದಿಂದ ಲೂಟಿ ಹೊಡೆಯುವ ಗೆದ್ದಲು ಹುಳ.

ನೆನಪಿರಲಿ, ಇಲ್ಲಿ ನಿಜವಾದ ದೇಶ ಭಕ್ತ, ರಾಜ್ಯ-ದೇಶಕ್ಕಾಗಿ ದುಡಿಯುವವನು, ಸಾಮಾನ್ಯ ಪ್ರಜೆ. ಅವನ/ಅವಳ ತೆರಿಗೆ ಹಣದಿಂದಲೇ ರಾಜ್ಯ-ದೇಶ ನಡೆಯುವುದು.

ಅವರ ಅಪ್ಪನ ಮನೆಯಿಂದ, ಆಕಾಶದಿಂದ ಅಥವಾ ಸ್ವರ್ಗ ಲೋಕದಿಂದ, ಈ ರಾಜಕಾರಣಿಗಳು ಹಣ ತಂದು ರಾಜ್ಯ-ದೇಶ ನಡೆಯುವುದಿಲ್ಲ.

ಆದ್ದರಿಂದ ಪ್ರತೀ ಪ್ರಜೆಯು ರಾಜ್ಯ- ದೇಶಕ್ಕೆ ಅತೀ ಪ್ರಾಮುಖ್ಯ ಹಾಗು ಅವನಿಂದಲೆ ದೇಶ- ರಾಜ್ಯ ನಡೆಯುವುದು.

ಯಾರೇ, ರಾಜಕಾರಣಿ ತಾನು ಮಾಡಿದ್ದು ಎಂದು ಹೇಳಿದರೆ ಅಥವಾ ತನ್ನ ಸರಕಾರ ಮಾಡಿದ್ದು ಎಂದು ಹೇಳಿದರೆ, ಕೂಡಲೇ, ಅವನನ್ನು ಖಂಡಿಸಬೇಕು.

ನೆನಪಿರಲಿ, ಸರಕಾರ ಪ್ರತೀಯೊಬ್ಬ ಪ್ರಜೆಯದ್ದು, ಯಾವುದೇ ಪಕ್ಷ ಅಥವಾ ವ್ಯಕ್ತಿಯದಲ್ಲ. ಅವನನ್ನು ಆ ಕೆಲಸ ಮಾಡಲು ಆರಿಸಿ, ಸಂಬಳ ಕೊಟ್ಟು ಸಾಕುತ್ತಿರುವುದು, ನಾವು ಪ್ರಜೆಗಳು.

ಕಳೆದ 75 ವರ್ಷದ ರಾಜಕಾರಣಿಗಳ ಗುಲಾಮಗಿರಿ ಸಾಕು. ನಾವು ಪ್ರಜೆಗಳು, ಪ್ರಜಾಪ್ರಭುತ್ವವನ್ನು ಮನದಟ್ಟು ಮಾಡಿ ಕೊಂಡು, ರಾಜ್ಯ-ದೇಶವನ್ನು ಅಭಿವೃದ್ದಿ ಪತದತ್ತ ಸಾಗಿಸುವ.

ಪ್ರತೀಷ್ಟೇ, ಪ್ರಸಿಧ್ಧಿ, ಸಮಾಜ ಸೇವೆ, ಹೋರಾಟ, ಬೆಂಬಳಿಗರು, ಜಾಹಿರಾತು, ಸಭೆ-ಸಮಾರಂಭ, ಬ್ಯಾನರ್ – ಪೋಸ್ಟರ್ ಗಳಿಂದ ಮಿಥ್ಯಾ ವ್ಯಕ್ತಿತ್ವವನ್ನು ಬಿಂಬಿಸಿ, ಕತ್ತೆಯನ್ನು ಕುದುರೆ ಎಂದು ತೋರಿಸುವ, ಈ ಮಿಥ್ಯಾ ಪ್ರಜಾಪ್ರಭುತ್ವದಿಂದ ಮುಕ್ತಿ ಆಗಬೇಕಿದೆ. ವಿಚಾರಗಳಿಗೆ ಮತ ಹಾಕುವ ಸಂಸ್ಕ್ರತಿ ಖಂಡಿತಾ ಬರಬೇಕು. ಆಗಲೇ, ನಿಜವಾದ ಪ್ರಜಾಪ್ರಭುತ್ವದ ಸ್ಥಾಪನೆ ಆಗುವುದು.

ಜೈ ಪ್ರಜಾಕೀಯ

Leave a Reply

Your email address will not be published. Required fields are marked *

Translate »

You cannot copy content of this page