ಹನ್ನೆರಡು ಸೂತ್ರಗಳು ಹಾಗು ಪ್ರಜೆಗಳ ಅವಶ್ಯಕತೆಗಳು.
Budget
1. ನೀರು.- 5%
2. ವಿದ್ಯುತ್. 5%
3. ಆಹಾರ. 8%
4. ವಸತಿ. 5%
5. ವಿಧ್ಯಾಭ್ಯಾಸ. 15%
6. ಆರೋಗ್ಯ. 20%
7. ಕಾನೂನು ವ್ಯವಸ್ಥೆ 10%
8. ರೈತರ ಅವಶ್ಯಕತೆ. 10%
9. ಉದ್ಯೋಗ. 5%
10. ತ್ಯಾಜ್ಯ ವಿಲೆವಾರಿ. 7%
11. ಸಾರಿಗೆ ವ್ಯವಸ್ಥೆ. 7%
12. ಪ್ರವಾಸೋದ್ಯಮ. 3%
100%
ಈ ಹನ್ನೆರಡನ್ನು ಸರಿಯಾಗಿ ಮಾಡಿದಾಗ, ಪ್ರಜೆಗಳ ಉಳಿದ ಸಣ್ಣ- ಪುಟ್ಟ ಅವಶ್ಯಕತೆಗಳು ತಾನಾಗಿಯೆ ಪೂರೈಸಲು ಪಡುವುದು.
ಈ ಹನ್ನೆರಡು ಅವಶ್ಯಕತೆಗಳನ್ನು ಸರಿಯಾಗಿ ಸರ್ಕಾರವು ಒದಗಿಸಿದಾಗ, ಅದು ಒಂದಕ್ಕೊಂದು ಪೂರಕವಾಗುವುದು. ಉದ್ಯೋಗವೂ ಇವುಗಳಿಂದಲೆ ಉತ್ಪತ್ತಿಯಾಗುವುದು.
ಈ ಹನ್ನೆರಡು ಅವಶ್ಯಕತೆಗಳನ್ನು ಅಂತರಾಷ್ಟ್ರೀಯಾ ಮಟ್ಟದ್ದಾಗಿ ಮಾಡಬೇಕು. ಆವಾಗ ಗುಣಮಟ್ಟದ ಉದ್ಯೋಗವು ಸೃಷ್ಟಿಯಾಗುವುದು.
ಎಲ್ಲರಿಗೂ ಉಧ್ಯೋಗವು ಅತೀ ಪ್ರಾಮುಖ್ಯ ವಿಷಯ. ಪ್ರಜೆಗಳಿಗೆ ಸರಿಯಾದ ಸಂಪಾದನೆ (ಅಂದರೆ ಮೂಲಭೂತ ಸೌಕರ್ಯಗಳನ್ನು ಪೂರೈಸುವಂತೆ) ಇದ್ದರೆ, ಪ್ರಜೆಗಳು ನೆಮ್ಮದಿಯಿಂದ ಬದುಕುವಂತಾಗುವುದು.
ಇದು ಕಾನೂನು ವ್ಯವಸ್ಥೆಗೆ ಪೂರಕವಾಗಿ, ಅಪರಾಧವೂ ತನ್ನಿಂದ ತಾನೆ ಕಡಿಮೆಯಾಗುವುದು.
ದೇಶದ- ರಾಜ್ಯದ ಬಜೆಟ್, ಈ ಹನ್ನೆರಡರ ಮೇಲೆ ಖರ್ಚು ಮಾಡಬೇಕು.
ಇಲ್ಲಿ ಕ್ರಮಾಂಕ 5, 6, 7, 8 & 10 ನ್ನು ಬಿಟ್ಟು, ಉಳಿದ 1, 2, 3, 4, 9, 11 & 12 ಕ್ಕೆ ಪರದೇಶದಿಂದ ಬಂಡವಾಳ ಹೂಡಿಕೆಗೆ ಅವಕಾಶ ಮಾಡಿ ಕೊಡಬಹುದು ಹಾಗು ಇದರಿಂದ ತೆರಿಗೆ ಹಣದ ಮೇಲಿನ ಒತ್ತಡ ಕಡಿಮೆಯಾಗುವುದು.
ನೀರು, ವಿದ್ಯುತ್ ಹಾಗು ಸಾರಿಗೆ ವ್ಯವಸ್ಥೆಯನ್ನು ಸರಿಯಾಗಿ ಭ್ರಷ್ಟಾಚಾರವಿಲ್ಲದೆ ನಿಭಾಯಿಸಿದ್ದಾರೆ, ಅದರ ಮೇಲಿನ ಬಂಡವಾಳವನ್ನು ಅದರಿಂದಲೆ ಪಡೆಯಬಹುದು. ಇದು ಭಾರತದಂತಹ ಜನ ಬರಿತ ದೇಶದಲ್ಲಿ ಖಂಡಿತಾ ಸಾಧ್ಯವಿದೆ.
ಆದರೆ ನಮ್ಮ ದೇಶದಲ್ಲಿ ಭ್ರಷ್ಟಾಚಾರವು ಇವೆಲ್ಲವನ್ನೂ ನುಂಗಿ ತೇಗುತ್ತಿದೆ.
ಮೇಲೆ ಹೇಳಿದ ಹನ್ನೆರಡು ವಿಷಯಗಳು ಉತ್ತಮ ಪ್ರಜಾಕೀಯಾ ಪಕ್ಷ (ಉ.ಪಿ.ಪಿ)ದ ಮಂತ್ರವಾಗ ಬೇಕು.
ಉಳಿದ ಎಲ್ಲಾ ಕಲ್ಯಾಣ, ಭಾಗ್ಯ ಹಾಗು ಸುಧಾರಣೆಗಳು ವ್ಯರ್ಥವಾಗುವುದು. ಇವೆಲ್ಲಾ ಭ್ರಷ್ಟ ರಾಜಕಾರಣಿ ಹಾಗು ರಾಜಕೀಯಾ ಪಕ್ಷಗಳ ಹಣ ಮಾಡುವ ವ್ಯವಸ್ಥೆಗಳು.
ಮೇಲೆ ಹೇಳಿದ ಹನ್ನೆರಡು ವ್ಯವಸ್ಥೆಗಳು ಗುಣ ಮಟ್ಟದ್ದಾಗಿರುವುದು ಅತೀ ಅಗತ್ಯ.
ಈ ವಿಷಯವಾಗಿ ಯಾರು ಬೇಕಾದರೂ ವಿಮರ್ಶೆ ಮಾಡ ಬಹುದು. ಇಲ್ಲಿ ಇಕೋನಾಮಿಸ್ಟ್ಗಳು ಇದನ್ನು ವಿಮರ್ಶೆ ಮಾಡುವುದಾದರೂ ನನ್ನ ಅಭ್ಯಂತರವಿಲ್ಲ.
ಸರ್ಕಾರ ಹಾಗು ಪ್ರಜೆಗಳು ಈ ಹನ್ನೆರಡು ವಿಷಯಗಳನ್ನೆ ಮಾತನಾಡಬೇಕು. ಕೇವಲ ಇವುಗಳು ಮಾತ್ರ ರಾಜ್ಯ- ದೇಶದ ಅಬಿವ್ರಧ್ಧಿ ಮಾಡುವುದು.
ಮಾಧ್ಯಮಗಳು ಕೂಡಾ ಇದೇ ವಿಷಯದಲ್ಲಿ ಚರ್ಚೆ ಏರ್ಪಡಿಸಬೇಕು.
ಉಳಿದದ್ದೆಲ್ಲಾ ಕೇವಲ ಸೆನ್ಸೇಷನ್ಗಳಿಗಾಗಿ.
ಜೈ ಪ್ರಜಾಕೀಯಾ.
ಜೈ ಉತ್ತಮ ಪ್ರಜಾಕೀಯಾ ಪಕ್ಷ.