ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಪ್ರಜಾಕೀಯಾ – ಪ್ರಜೆಗಳಿಗೆ ವಿವರಿಸುವುದು ಹೇಗೆ?

(ಎಲ್ಲಾ ಪ್ರಜಾಕೀಯ ಅನುಯಾಯಿಗಳು, ಇದನ್ನು ಓದ ಬೇಕೆಂದು ವಿನಂತಿ).

ಒಂದು ವಿಶ್ಲೇಷಣೆ- A Analysis

ನಾವೆಲ್ಲರೂ, ಪ್ರಜಾಕೀಯವನ್ನು ಪ್ರಜೆಗಳಿಗೆ ತಲುಪಿಸುವ ಅಥವಾ ಮಾಹಿತಿ ಕೊಡುವ ಕೆಲಸವನ್ನು ಮಾಡುತ್ತಿರುವೆವು. ಖಂಡಿತಾ ಇದು ನಮ್ಮೆಲ್ಲರ, ನಮಗಾಗಿ, ಪ್ರಜೆಗಳಿಗಾಗಿ ಮಾಡುವ, ಬದಲಾವಣೆಯ ಒಂದು ದಾರಿ. ರಾಜ್ಯ-ದೇಶ ಹಾಗು ಪ್ರಜೆಗಳನ್ನು, ಅಭಿವೃಧ್ಧಿಗೆ ತೆಗೆದು ಕೊಂಡು ಹೋಗುವ ಒಂದು ಸುಮಧುರ, ಸುಂದರ, ಸೌಮ್ಯ ಹಾಗು ಮೌನ ಕ್ರಾಂತಿ.

ನಾವು ಪ್ರಜೆಗಳನ್ನು ಸಂಪರ್ಕಿಸುವಾಗ, ಅವನ/ಅವಳ ಗ್ರಹಿಕೆ(Perception) ಯನ್ನೂ ಅರ್ಥ ಮಾಡಿ ಕೊಳ್ಳುವುದು ಅತೀ ಅವಶ್ಯ ಇದೆ. ಅವನು/ಅವಳು ಒಬ್ಬ ಅಪರಿಚಿತನಿಂದ ಏನನ್ನು ತಿಳಿಯಲು ಬಯಸುವರೆಂದು, ನಾವು ಮೊದಲು ತಿಳಿಯುವುದು ಉತ್ತಮ.

1. ಬಂದವನ ಗುರುತು.
2. ಅವನು ಯಾತಕ್ಕಾಗಿ ಬಂದಿರುವನು.
3. ಅವನಿಗೆ ಕೊಡಲು ನನ್ನ ಹತ್ತಿರ ಸಮಯ ಇದೆಯೇ ?
4. ಬಂದವನ ಮಾತು ಅಥವಾ ಅವನು ಹೇಳುವ ವಿಷಯದಿಂದ ನನಗೇನು ಲಾಭ.
5. ಬಂದವನು ಹೇಳುವ ಮಾತುಗಳು ನಡೆಯಲು ಸಾಧ್ಯವೇ ?
6. ಬಂದವನು ಹೇಳುವ ವಿಷಯದಲ್ಲಿ ನಾನು ಭಾಗವಹಿಸ ಬೇಕೇ ?
7. ಬಂದವನು ಹೇಳಿದ ವಿಷಯದಲ್ಲಿ ನಾನು ಭಾಗವಹಿಸಿದರೆ, ನನ್ನ ದೈನಂದಿನ ಚಟುವಟಿಕೆಗಳಿಗೆ ತೊಂದರೆ ಆಗುವುದೇ ?
8. ನಾನು ಈಗಾಗಲೆ, ಬೇರೆ ಪಕ್ಷಕ್ಕೆ ಬೆಂಬಲಿಸುತ್ತಿದ್ದೇನೆ. ಬಂದವನು ಹೇಳಿದ ವಿಷಯಕ್ಕೆ ಸಪೋರ್ಟ್ ಕೊಟ್ಟರೆ ಒಳ್ಳೆಯದಾಗುವುದೇ ?
9. ಇದು ಬೇರೆ ರಾಜಕೀಯ ಪಕ್ಷಕ್ಕಿಂತ ಬೇರೆ ಹೇಗೆ, ಹಾಗು ಇದರಿಂದ ಬದಲಾವಣೆ ಆಗುವುದೇ ?
10. ಇದು ಆಗಲು ಸಾಧ್ಯವೇ ?

ಹೀಗೆ, ಕೆಲವೊಂದು ಗೃಹಿಕೆಗಳು ಪ್ರತೀ ಒಬ್ಬ ಪ್ರಜೆಯದಾಗಿರುವುದು. ಇವುಗಳಿಗೆ, ಸರಿಯಾದ ಪರಿಹಾರ ಸಿಕ್ಕಿದರೆ, ಆ ಪ್ರಜೆಯು ಹೊಸ ವಿಷಯವನ್ನು ಕೂಡಲೆ ಒಪ್ಪಿ ಕೊಳ್ಳುತ್ತಾನೆ.

ಇದರಲ್ಲೂ, ಎರಡು ರೀತಿಯ ಪ್ರಜೆಗಳಿರುವರು. ಒಂದು, ತನ್ನ ಆಲೋಚನೆಯನ್ನು ಸ್ವತಂತ್ರವಾಗಿ ಇಟ್ಟು ಕೊಂಡವ, ಹಾಗು ಎರಡನೆಯ ರೀತಿಯ ಪ್ರಜೆ, ಈಗಾಗಲೆ, ಒಂದು ವಿಷಯ, ತತ್ವ ಅಥವಾ ಪಕ್ಷದ ಗೋಡೆ ಕಟ್ಟಿ ಕೊಂಡು, ತನ್ನ ಆಲೋಚನಾ ಲಹರಿಗೆ ಬೀಗ ಹಾಕಿ ಕೊಂಡಿರುತ್ತಾನೆ.

ಎರಡನೇ ರೀತಿಯ ಪ್ರಜೆಯ ಹಿಂದೆ ಹೆಚ್ಚಿಗೆ ಸಮಯ ವ್ಯರ್ಥ ಮಾಡಬೇಡಿ. ಪ್ರಜಾಕೀಯದ ಮಾಹಿತಿಯನ್ನು ತಿಳಿಸಿ ಮುಂದುವರಿಯಿರಿ. ಅವನೂ ಬದಲಾವಣೆ ಆಗುವನು. ಯಾವಾಗ, ಅವನ ಬುಡಕ್ಕೆ ಬೆಂಕಿ ಬಿತ್ತೋ, ಆವಾಗ.

ಪ್ರಜೆಗಳ ಗ್ರಹಿಕೆಗಳಿಗೆ(Perception) ಹೇಗೆ ಉತ್ತರಿಸುವುದು.

1. ನಾವು ನಮ್ಮ ಗುರುತು ತಿಳಿಸುವುದು – ಹೆಸರು, ನಿಮ್ಮ ವಾಸ ಸ್ಥಳ, ಪ್ರಜಾಕೀಯ ಸಿಧ್ಧಾಂತದಂತೆ ನಡೆಯುವ ಉತ್ತಮ ಪ್ರಜಾಕೀಯ ಪಕ್ಷದಿಂದ.
2. ಪ್ರಜಾಕೀಯದ ವಿಷಯ ತಿಳಿಸಲು ಬಂದಿರುವೆನು.
3. ನಿಮ್ಮ ಒಂದು ಹತ್ತು ನಿಮಿಷ ಕೊಡಬಹುದೇ ಎಂದು ವಿಚಾರಿಸಿ.
4. ಪ್ರಜಾಕೀಯವು, ಪ್ರಜೆಗಳಿಂದ ನಡೆಯುವ ಸರಕಾರವನ್ನು ನಿಮ್ಮಿಂದಲೆ ನಿರ್ಮಾಣ ಮಾಡುವುದು.
5. ಈಗಾಗಲೇ ಕರ್ನಾಟಕದಲ್ಲಿ ಸುಮಾರು 40 ಲಕ್ಷದ ಮೇಲೆ ಪ್ರಜಾಕೀಯ ಅನುಯಾಯಿಗಳಿರುವರು.
6. ಪ್ರಜಾಕೀಯದಲ್ಲಿ ಭಾಗವಹಿಸುವುದು ಅತೀ ಸುಲಭ. ನೀವು ಪ್ರಜಾಕೀಯವನ್ನು ಸರಿಯಾಗಿ ಅರ್ಥ ಮಾಡಿ +ಕೊಂಡು, ಅದನ್ನು ನಿಮ್ಮ ಸಂಬಂದಿಕರಿಗೆ, ನೆರೆ-ಹೊರೆಯವರಿಗೆ, ನಿಮ್ಮ ವಠಾರದವರಿಗೆ, ನೀವು ಉದ್ಯೋಗ ಮಾಡುವಲ್ಲಿ, ನಿಮ್ಮ ಸಹಪಾಠಿಗಳಿಗೆ ಹಾಗು ನೀವು ಸಂಪರ್ಕಕ್ಕೆ ಬರುವ ಪ್ರಜೆಗಳಿಗೆ ತಿಳಿಸಿ. ಎಲ್ಲಾ ರೀತಿಯ ಸಾಮಾಜಿಕ ಜಾಲತಾಣದಿಂದಲೂ ಪ್ರಚಾರ ಮಾಡಬಹುದು.
7. ಪ್ರಜಾಕೀಯದಲ್ಲಿ ಭಾಗವಹಿಸುವುದರಿಂದ, ನಿಮ್ಮ ಉದ್ಯೋಗ, ವ್ಯವಹಾರ ಅಥವಾ ವೈಕ್ತಿಕ ಜವಾಬ್ದಾರಿ ಗಳಿಗೆ ತೊಂದರೆ ಆಗದಂತೆ, ನಿಮ್ಮ ಬಿಡುವಿನ ಸಮಯದಲ್ಲಿ ಮಾಡ ಬೇಕು.
8. ಇದು ಪ್ರಜೆಯ ವಿವೇಕಕ್ಕೆ ಬಿಟ್ಟು ಬಿಡಬೇಕು.
9. ಇದು ರಾಜಕೀಯವಲ್ಲ. ಇದು ಪ್ರಜಾಕೀಯ. ಇದು ಹಣ ಇಲ್ಲದೆ ನಡೆಯುವುದು. ಇದು ಸಾಮಾನ್ಯ ಪ್ರಜೆಗಳ ವೇದಿಕೆ. ಇಲ್ಲಿ ಸದಸ್ಯತ್ವ ಶುಲ್ಕ ಇಲ್ಲ, ಪಕ್ಷದ ನಿಧಿ ಇಲ್ಲ ಹಾಗು ದೇಣಿಗೆ ತೆಗೆದು ಕೊಳ್ಳುವುದಿಲ್ಲ. ಎಲ್ಲರಿಗೂ ಸ್ವಾಗತ.
10. ನಾನು ಬದಲಾವಣೆ ಆಗಿರುವೆನು. ಹಾಗೆ ಲಕ್ಷಾಂತರ ಪ್ರಜೆಗಳೂ ಆಗಿರುವರು. ಸುಮಾರು 30 ರಿಂದ 40% ಮತದಾರರು ಬದಲಾವಣೆ ಆದಾಗ ಪ್ರಜಾಕೀಯದ- ನಿಮ್ಮ ಸರಕಾರ ಬರುವುದು.

ಆದ್ದರಿಂದ, ಪ್ರಜಾಕೀಯದ ಸಿಧ್ಧಾಂತವನ್ನು ಪ್ರಜೆಗಳಿಗೆ ತಿಳಿಸುವಾಗ, ಪ್ರಜೆಗಳ ಗೃಹಿಕೆಯನ್ನು ತಿಳಿದು ಕೊಂಡರೆ, ಪ್ರಜಾಕೀಯವು ವೇಗವಾಗಿ, ಪ್ರಜೆಗಳನ್ನು ತಲುಪುವುದು.

ಪ್ರಜೆಗಳಿಗೆ, ನಾವು, ಪ್ರಜಾಕೀಯದ ಅನುಯಾಯಿಗಳು ಅರ್ಥ ಮಾಡಿ ಕೊಡ ಬೇಕಾದ ಅತೀ ಪ್ರಾಮುಖ್ಯ ವಿಷಯ ” ಪ್ರಜೆಗಳಿಂದಲೇ, ಪ್ರಜೆಗಳನ್ನು ಕೇಳಿ, ಅವರ ಅಭಿಪ್ರಾಯದಂತೆ ನಡೆಯುವ, ಪಾರಧರ್ಶಕ ಸರಕಾರವನ್ನು ರಚಿಸುವ ಹಾಗು ನಿಯಮಿತ ಕಾರ್ಯ ವೈಖರಿಯಂತೆ ಕೆಲಸ ಮಾಡುವ ಪ್ರಜಾ ಕಾರ್ಮಿಕರನ್ನು, ಪ್ರಜೆಗಳೇ ಆಯ್ಕೆ ಮಾಡಿ ಹಾಗು ಚುನಾಯಿಸಿ, ಪ್ರಜೆಗಳೇ ಅವನ ತಿದ್ದುಪಡಿ, ತಿರಸ್ಕಾರ ಹಾಗು ಪುರಸ್ಕಾರ ಮಾಡುವಂತಹ ಪ್ರಜೆಗಳಿಂದ ನಡೆಯುವ ಸರಕಾರವನ್ನು ನಿರ್ಮಿಸಲಾಗುವುದು.”

ಎಲ್ಲಾ ಪ್ರಜಾಕೀಯ ಅನುಯಾಯಿಗಳು ಇದನ್ನು ಓದಿ, ಅರ್ಥ ಮಾಡಿ ಕೊಂಡರೆ, ಉತ್ತಮವೆಂದು ನನ್ನ ಅನಿಸಿಕೆ. ಇದು, ನನ್ನ 4 ವರ್ಷದ ಪ್ರಜಾಕೀಯದ ಪ್ರಚಾರದ ವೇಳೆ ತಿಳಿದು ಕೊಂಡ ವಿಷಯ.

suresh kundar

  ಪ್ರಜಾಕೀಯ ಪ್ರಜ್ಞಾವಂತರು ಗ್ರೂಪ್ - ಸೋಶಿಯಲ್ ಮೀಡಿಯಾ

ಜೈ ಪ್ರಜಾಕೀಯ

Leave a Reply

Your email address will not be published. Required fields are marked *

Translate »