ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಉತ್ತಮ ಪ್ರಜಾಕೀಯ ಪಕ್ಷ ಪ್ರಚಾರ ಜವಾಬ್ದಾರಿ

ಎಲ್ಲಾ ಪ್ರಜಾಕೀಯ ಅನುಯಾಯಿಗಳಲ್ಲಿ ವಿನಂತಿ.

ನಾನು ಮತ್ತು ನನ್ನ ಸಹಪಾಠಿಗಳು ಪ್ರಜಾಕೀಯವನ್ನು ಸರಿಯಾಗಿ ಪ್ರಚಾರ ಮಾಡುತ್ತಿರುವೆವು, ಬೇರೆಯವರು ಅದನ್ನು ಮಾಡುತ್ತಾ ಇಲ್ಲ ಎಂದು ಬೇಸರ, ದುಗುಡ ಹಾಗು ನಿರಾಸೆ ಬೇಡ.

ಉತ್ತಮ ಪ್ರಜಾಕೀಯ ಪಕ್ಷ (ಉ.ಪಿ.ಪಿ.)ವು ಪ್ರಜೆಗಳ ಪಕ್ಷ. ಇಲ್ಲಿ ಯಾರು ಮೇಲು – ಕೀಳು ಎಂಬುದಿಲ್ಲ. ಪ್ರಜಾಕೀಯವನ್ನು ಯಾರು ಸರಿಯಾಗಿ ಅರ್ಥ ಮಾಡಿ ಕೊಂಡಿರುವರೇ, ಅವರೆಲ್ಲರೂ ತಮ್ಮ ಕಡೆಯಿಂದ ಅದನ್ನು ಬೇರೆಯವರಿಗೆ ತಿಳಿಸುತ್ತಾ ಮುಂದುವರಿಯಬೇಕು. ಬೇರೆ ಪ್ರಜಾಕೀಯ ಅನುಯಾಯಿಗಳು ಮಾಡುತ್ತಿರುವರೋ ಇಲ್ಲವೋ ಎಂಬುದನ್ನು ನಾವು ಪ್ರಶ್ನೆ ಮಾಡುವಂತಿಲ್ಲ. ಅವರಿಗೆ ತಿಳಿಯ ಹೇಳಿ, ಆದರೆ, ಪ್ರಶ್ನೆ ಮಾಡಬೇಡಿ. ಅವರು ಒಪ್ಪದಿದ್ದರೆ, ಅವರಷ್ಟಕ್ಕೆ ಬಿಟ್ಟು ಬಿಡಿ. ಸೌಹಾರ್ದ್ಯದ ಭಾವನೆ ಇರಲಿ.

  ತೆರಿಗೆ - ಸಾಮಾನ್ಯ ಪ್ರಜೆ - ಪ್ರಜಾಕೀಯಾ

ನಾವು ಮಾಡುತ್ತಿರಲು, ಬೇರೆಯವರು ಮಾಡುತ್ತಾ ಇಲ್ಲ ಎಂಬ ದುಗುಡ ಉಂಟಾಗುವುದು ಸಹಜ. ಆದರೆ, ಯಾರೂ, ನಮ್ಮ ಕೆಲಸದವರಲ್ಲವಲ್ಲ. ಸಾಧ್ಯವಾದರೆ, ಶಾಂತಿಯಿಂದ ಅವರಿಗೆ ವಿವರಿಸಿ. ಒಪ್ಪದಿದ್ದರೆ, ಅವರೊಂದಿಗೆ ವಾದ ಮಾಡಬೇಡಿ.

ಪ್ರಜಾಕೀಯ ಒಂದು “ಮೌನ ಕ್ರಾಂತಿ Silent Revolution”. ಇಲ್ಲಿ ಯಾರ ಜೀವವನ್ನು ಅಥವಾ ಸಂಪತ್ತನ್ನು ಬಲಿ ಕೊಟ್ಟು ಸಾದಿಸುವಂತಿಲ್ಲ. ನಮ್ಮ – ನಮ್ಮ ಖಾಸಾಗಿ(Personal) ಜವಾಬ್ದಾರಿಗಳಿಗೆ ದಕ್ಕೆ ಬಾರದಂತೆ, ನಮ್ಮಬಿಡುವಿನ ಸಮಯ ಹಾಗು ಶ್ರಮವನ್ನು ಪ್ರಜಾಕೀಯಕ್ಕೆ ಉಪಯೋಗಿಸಬೇಕು.

ಆದರೆ, “ಅಭ್ಯರ್ಥಿ ಅಕಾಂಕ್ಷಿ” ಆಗಿ ಬರುವವರು, ಖಂಡಿತಾ ಹೆಚ್ಚಿಗೆ ಸಮಯ ಪ್ರಜಾಕೀಯಕ್ಕಾಗಿ ವಿನಿಯೋಗಿಸಬೇಕು. ಕಾರಣ, ಅವರು ಸಂಬಳಕ್ಕಾಗಿ ಕೆಲಸ ಮಾಡುವ “ಪ್ರಜಾ ಕಾರ್ಮಿಕ” ಆಗುವವರು. ಅವರು ಖಂಡಿತಾ, ತಮ್ಮ ಕ್ಷೇತ್ರದ ಜನರ ಸಂಪರ್ಕ ಬೆಳೆಸಬೇಕು. ಅದೊಂದು ಅತೀ ಪ್ರಾಮುಖ್ಯವಾದ ಜವಾಬ್ದಾರಿ. ಒಂದು ಕೆಲಸ ಹುಡುಕಲು ಎಷ್ಟು ಪ್ರಯತ್ನ ಮಾಡುವೆವೋ, ಅಷ್ಟಾದರೂ ಪ್ರಯತ್ನ ಮಾಡಬೇಕಲ್ಲವೇ ?

  ಕರ್ನಾಟಕ ಬಜೆಟ್ ಹೇಗಿರಬೇಕು ? - ಉತ್ತಮ ಪ್ರಜಾಕೀಯಾ ಪಕ್ಷ

ಅಭ್ಯರ್ಥಿ ಅಕಾಂಕ್ಷಿಗಳಿಗೆ ಬೇಕಾದ ಬೆಂಬಲ ಹಾಗು ಸಹಾಯ, ಆ ಕ್ಷೇತ್ರದ ಅಥವಾ ಬೇರೆ ಕ್ಷೇತ್ರದ ಪ್ರಜಾಕೀಯ ಅನುಯಾಯಿಗಳು ಒದಗಿಸ ಬಹುದು. ಆದರೆ, ಯಾರನ್ನೂ ಒತ್ತಾಯ ಮಾಡುವಂತಿಲ್ಲ. ಅವರನ್ನು ವಿನಂತಿಸಿ ಕೊಳ್ಳ ಬಹುದು. ಪ್ರತೀ ಪ್ರಜಾಕೀಯ ಅನುಯಾಯಿಗಳು ಸ್ವಂತ ಒಪ್ಪಿಗೆಯಿಂದ ಬೆಂಬಲ ಹಾಗು ಸಹಾಯ ಮಾಡಬೇಕು.

ಇಲ್ಲಿ ಯಾರ ಮೇಲೂ ಒತ್ತಡ ಬೇಡ. ಆದರೆ, ಚುನಾಯಿತ ಪ್ರತಿನಿಧಿಗೆ (Elected Member) ಖಂಡಿತಾ ಪ್ರಜೆಗಳ ಹಾಗು ರಾಜ್ಯದ ಅಭಿವೃಧ್ಧಿಯ ಒತ್ತಡ ಖಂಡಿತಾ ಇರಬೇಕು. ಅದೊಂದು ಪ್ರಾಮುಖ್ಯವಾದ ಜವಾಬ್ದಾರಿ.

  ದೇಶ ಉದ್ದಾರವಾಗುವುದಾದರೂ ಹೇಗೆ ?

ಎಲ್ಲರಿಗೂ ಶುಭವಾಗಲಿ ಹಾಗು ಸ್ಪೂರ್ತಿದಾಯಕವಾಗಲಿ.

ಜೈ ಪ್ರಜಾಕೀಯ

Leave a Reply

Your email address will not be published. Required fields are marked *

Translate »