ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಪ್ರಜಾಕೀಯ – POEM

ರಾಜಕೀಯದ ಕಿಂಡಿಯಲಿ ಇಣುಕಿದೆನೊಮ್ಮೆ
ಕಿಂಡಿಯೆಂಬ ಬಾವಿಯಲಿ ಕಂಡೆನು ಕೇವಲ ಭ್ರಷ್ಟರನ್ನೆ |
ರಾಜಾಡಳಿತವು ಪ್ರಜೆಗಳಿಗಾಗಿ ಪ್ರಜೆಗಳ ಹಿತಕ್ಕಾಗಿ
ರಾಜಕೀಯವು ಸ್ವಿಸ್ ಬ್ಯಾಂಕಿಗಾಗಿ ಫಾರಿನ್ ಟೂರಿಗಾಗಿ ||

ಜನಗಳ ಒಳಿತನು ಕಾಣದ ಇವರು 
ಕುರ್ಚಿಗಾಗಿ ಕಿತ್ತಾಡುವರು
ಜನಪ್ರತಿನಿಧಿಗಳ ಖರೀದಿ ಮಾಡುವರು |
ಓಟಿನ ಸಮಯಕೆ ಕಾಲ್ಮುಗಿಯುವ ಇವರು
ಹೆಂಡ ಸಾರಾಯಿ ಹೊಳೆ ಹರಿಸುವರು
ಭರವಸೆಗಳ ಚಂದಿರ ತೋರುವರು ||

ಪ್ರಾಮಾಣಿಕ ಸೇವೆಯ ಮಾಡುವವರನು 
ಎತ್ತಂಗಡಿಯ ಮಾಡುವರು |
ಸ್ವಾರ್ಥದ ಸಾಧನೆ ಮಾಡುವ ಇವರು
ತಮ್ಮಾಪ್ತರನು ಮೇಲೆತ್ತುವರು ||

  ಜನಸಂಖ್ಯೆ ಸ್ಪೋಟ ಬೆಂಗಳೂರು- POPULATION EXPLOSION -BENGALURU

ಅಭಿವೃದ್ಧಿಗೆ ನೀಡುವ ಹಣವನು ಇವರು 
ಅರ್ಧದಲ್ಲೆ ಜೇಬಿಗಿಳಿಸುವರು |
ತಮ್ಮಯ ಕೆಲಸವ ಮಾಡದ ಇವರು
ಬೇರೊಬ್ಬರೆಡೆ ಬೆರಳ್ ಮಾಡುವರು ||

ಆ ದೇವರೆ ಭೂಮಿಗೆ ಬಂದರು ಇಂದು
ಭ್ರಷ್ಟ ರಾಜಕೀಯ ಬದಲಾಗದು ಎಂದು |
ಇವುಗಳಿಗೆಲ್ಲಾ ಎಂದಿಗೆ ಮುಕ್ತಿ
ದೇವರಿಗೂ ಇಲ್ಲ ಇಷ್ಟೆಲ್ಲ ಶಕ್ತಿ ||

Reference : ಪ್ರಜಾಕೀಯ group

Leave a Reply

Your email address will not be published. Required fields are marked *

Translate »