ಪ್ರಜಾಕೀಯ ಸಿಧ್ಧಾಂತದ ಪ್ರಕಾರ ನಡೆಯುವ ಉತ್ತಮ ಪ್ರಜಾಕೀಯ ಪಕ್ಷ (ಉ.ಪಿ.ಪಿ.)ದ ಚುನಾವಣಾ ಅಭ್ಯರ್ಥಿ ಹಾಗು ಅಭ್ಯರ್ಥಿ ಅಕಾಂಕ್ಷಿ ಆಗುವವರ ಗಮನಕ್ಕೆ.
ಭಾಗ II
ಚುನಾಯಿತ ಪ್ರತಿನಿಧಿಗಳ ನಮೂನೆ
1. ತಾಲೂಕು ಪಂಚಾಯಿತಿ ಸಧಸ್ಯ -ಗ್ರಾಮ ಪಂಚಾಯಿತಿಗೆ ಒಬ್ಬ. – ಸುಮಾರು 5,000
2. ಜಿಲ್ಲಾ ಪಂಚಾಯಿತಿ ಸಧಸ್ಯ -ಸುಮಾರು 5 ಗ್ರಾಮ ಪಂಚಾಯಿತಿಗೆ ಒಬ್ಬ. -ಸುಮಾರು 1,100
3. ಕೌನ್ಸಿಲರ್ ಹಾಗು ಕಾರ್ಪರೇಟರ್ -ಪಟ್ಟಣ, ನಗರ ಹಾಗು ನಗರ ಪಾಲಿಕೆ ವಾರ್ಡ್ಗೆ ಒಬ್ಬ. – ಸುಮಾರು 6700
4. ವಿಧಾನ ಸಭಾ ಸಧಸ್ಯ- MLA- ಸುಮಾರು 2,25,000 ಮತದಾರರಿಗೆ ಒಬ್ಬರಂತೆ -224.
5. ವಿಧಾನ ಪರಿಷತ್ ಸಧಸ್ಯ – MLC – 75. ( ವಿಧಾನ ಸಭಾ ಸಧಸ್ಯರು- 25, ಸ್ಥಳಿಯ ಸಂಸ್ಥೆಯ ಚುನಾಯಿತ ಪ್ರತಿನಿಧಿಗಳು- 25 ಅಧ್ಯಾಪಕರು- 7, ಪಧವೀದರು- 7 ಹಾಗು ರಾಜ್ಯಪಾಲರು -11 ಚುನಾಯಿಸುವರು).
,6. ಲೋಕ ಸಭಾ ಸಧಸ್ಯ- MP ( ಕರ್ನಾಟಕ – 28, ಬಾರತ – 543).
7. ರಾಜ್ಯ ಸಭಾ ಸಧಸ್ಯರು -225
ಮೇಲಿನ ಏಳು ವರ್ಗಗಳಿಗೆ ಚುಣಾವಣೆ ನಿಲ್ಲಲು ಬಯಸುವವರು, ಮೊಟ್ಟ ಮೊದಲಿಗೆ ಪ್ರಜಾಕೀಯದ ಸಿಧ್ಧಾಂತವನ್ನು ಸಂಪೂರ್ಣ ಒಪ್ಪಿ, ಅಳವಡಿಸಿ ಕೊಂಡು, ಅದರಂತೆ ನಡೆಯಲು ದೃಡ ನಿರ್ಧಾರ ಮಾಡಿ ಕೊಂಡಿರಬೇಕು. ಪ್ರಜಾ ಕಾರ್ಮಿಕನಾಗಿ ಸಂಬಳಕ್ಕಾಗಿ ಅಥವಾ ಗೌರವ ಧನಕ್ಕಾಗಿ ಕೆಲಸ ಮಾಡಲು ಸಂಪೂರ್ಣ ಒಪ್ಪಿಗೆ ಇರಬೇಕು.
ಮೊದಲ ಮೂರು ವರ್ಗದಲ್ಲಿ ಕೇವಲ ಸಣ್ಣ ಗೌರವ ಧನ ಸಿಗುವುದರಿಂದ, ಯಾರೂ ತಮ್ಮ ಉದ್ಯೋಗ ಅಥವಾ ವ್ಯವಹಾರ ಬಿಡುವ ಅವಶ್ಯಕತೆ ಇಲ್ಲ.
ಆದರೆ, 4,5,6 & 7 ರಲ್ಲಿ ಚುನಾಯಿತ ಪ್ರತಿನಿಧಿ ಆದರೆ, ತನ್ನ ಉದ್ಯೋಗಕ್ಕೆ ರಾಜಿನಾಮೆ ಕೊಡಬೇಕು ಹಾಗು ವ್ಯವಹಾರವನ್ನು ಕುಟುಂಬದ ಸಧಸ್ಯರಿಗೆ ವಹಿಸಿ ಕೊಡಬೇಕು. ಇಲ್ಲಿ, ಬೇಕಾದಷ್ಟು ಸಂಭಾವನೆ ಹಾಗು ಸೌಲಭ್ಯಗಳೂ ನ್ಯಾಯ ಬಧ್ಧವಾಗಿ ಸಿಗುವುದು ಹಾಗು 5 ವರ್ಷದ ನಂತರ, ಜೀವನ ಪರ್ಯಂತ ಪಿಂಚಣಿಯೂ ಸಿಗುವುದು. ತನ್ನ ಸಮಯವನ್ನು ಪ್ರಜೆಗಳ ಹಾಗು ರಾಜ್ಯ-ದೇಶದ ಕೆಲಸಕ್ಕಾಗಿ ಮೀಸಲಿಡಬೇಕು.
ನೆನಪಿರಲಿ, ಚುನಾಯಿತ ಪ್ರತಿನಿಧಿ ಆಗುವವರೆಗೆ ಉದ್ಯೋಗ ಅಥವಾ ವ್ಯವಹಾರ ಬಿಡುವ ಅವಶ್ಯಕತೆ ಇಲ್ಲ.
ಚುನಾವಣೆ ನಿಲ್ಲುವ ವಿಧಾನ:
ಇಲ್ಲಿ ಚುನಾವಣಾ ಅಭ್ಯರ್ಥಿಯ ಆಯಿಕೆ (Selection), ಚುನಾವಣೆ (Election), ತಿದ್ದುಪಡಿ (Correction), ತಿರಸ್ಕರಣೆ ( Rejection) ಹಾಗು ಪದೋನ್ನತಿ ( Promotion) ಎಲ್ಲವನ್ನೂ ಪ್ರಜೆಗಳೇ ಮಾಡುವರು. ಈ ಪ್ರಕ್ರಿಯೆಯು ಸುಗಮವಾಗಿ ನಡೆಯುವಂತೆ ಹಾಗು ಯಾರೂ ಇದನ್ನು ದುರುಪಯೋಗ ಮಾಡದಂತೆ ಪಕ್ಷದ ಕಡೆಯಿಂದ ನೋಡಿ ಕೊಳ್ಳಲಾಗುವುದು. ಪಕ್ಷದ ಕಡೆಯಿಂದ ಯಾರನ್ನು ಅಭ್ಯರ್ಥಿ ಅಕಾಂಕ್ಷಿಯಾಗಿ ನೇಮಿಸುವಂತಿಲ್ಲ.
ಪಕ್ಷದ ಕಡೆಯಿಂದ ಕೊಡಬೇಕಾದ ಎಲ್ಲಾ ದಾಖಲೆಗಳು(A, B, C, D Form) ಪಡೆಯುವ ತನಕ, ಯಾರೂ ಅಭ್ಯರ್ಥಿ ಎಂದು ಘೋಷಿಸುವಂತಿಲ್ಲ. ಕೇವಲ “ಅಭ್ಯರ್ಥಿ ಅಕಾಂಕ್ಷಿ” ಆಗಿರುವರು. “ಅಭ್ಯರ್ಥಿ” ಎಂದು ಕೇವಲ ಪಕ್ಷದ ಅಧ್ಯಕ್ಷರು ಘೋಷಿಸುವರು.
ಅಭ್ಯರ್ಥಿ ಅಕಾಂಕ್ಷಿ ಆಗ ಬಯಸುವ ಪ್ರಜಾಕೀಯ ಅನುಯಾಯಿಯು, www.prajaakeeya.org ವೆಬ್ ಸೈಟ್ನಿಂದ ಅಥವಾ UPP(I)PRAJAAKEEYA -ಪ್ಲೇ ಸ್ಟೋರ್ ಆ್ಯಪ್ನಿಂದ, ಉತ್ತಮ ಪ್ರಜಾಕೀಯ ಪಕ್ಷದ “ಪ್ರಜೆಗಳ ಶಿಫಾರಷು ಪತ್ರ”ವನ್ನು ಡೌನ್ ಲೋಡ್ ಮಾಡಿ ಕೊಂಡು, ಅದರಲ್ಲಿ ಬರೆದಿರುವ 9 ಪೋಯಿಂಟ್ಗಳನ್ನು ಸರಿಯಾಗಿ ಅರ್ಥೈಸಿ, ಅದರಂತೆ ಮುಂದೆ ನಡೆದು ಕೊಳ್ಳುವೆನೆಂದು ದೃಡ ನಿರ್ಧಾರ ಮಾಡಬೇಕು.
ಆನಂತರ, ಅದರಲ್ಲಿ ತನ್ನ ಸಹಿ ನಮೂದಿಸಿ, ಅದನ್ನು ತಮ್ಮ ಕ್ಷೇತ್ರದ ಪ್ರಜೆಗಳ ಸಂಪರ್ಕ ಮಾಡಿ, ಆ 9 ವಿಷಯವನ್ನು ವಿವರಿಸಿ ಹೇಳಿ, ಅವರು ನಿಮ್ಮನ್ನು ಅಭ್ಯರ್ಥಿಯಾಗಿ ಶಿಫಾರಷು ಮಾಡುವರೆಂದು, ಅವರ ಹೆಸರು, ಮೊಬೈಲ್ ಸಂಖ್ಯೆ ಹಾಗು ಸಹಿ ಸಂಗ್ರಹಿಸಬೇಕು. ಸಹಿ ತೆಗೆದು ಕೊಳ್ಳುವಾಗ, ಒಂದು 5 ರಿಂದ 10 ಸೆಕೆಂಡ್ ವಿಡಿಯೋ ಮಾಡಿದರೆ ಉತ್ತಮ. ಆ ವಿಡಿಯೋಗಳನ್ನು ನಿಮ್ಮ “ಫೇಸ್ ಬುಕ್” ಖಾತೆಯಲ್ಲಿ ನಿಯಮಿತವಾಗಿ, ಅವರ ಹೆಸರಿನೊಂದಿಗೆ ಪೋಸ್ಟ್ ಮಾಡಿದರೆ ಉತ್ತಮ. ವಿಡಿಯೋಗಳು ಎಲ್ಲಿಯೂ ಕಳೆದು ಹೋಗುವ ಅವಕಾಶ ಇರುವುದಿಲ್ಲ.
ಸಹಿ ಸಂಗ್ರಹಣೆಗೆ ಯಾವುದೇ ಸಮಯ ನಿರ್ಬಂದ ಇರುವುದಿಲ್ಲ. ಚುನಾವಣೆಯ ತಾರೀಕು ಘೋಷಿಸುವ ತನಕ ಕಾಯುವುದು ಬೇಡ. ಒಮ್ಮೆ ನೀವು ಚುನಾವಣೆಗೆ ನಿಲ್ಲಬೇಕೆಂದು ನಿರ್ಧರಿಸಿದ ಕೂಡಲೇ ಈ ಪ್ರಕ್ರೀಯೆ ಪ್ರಾರಂಭ ಮಾಡಬಹುದು. ಚುನಾವಣೆ ಘೋಷಣೆ ಆದ ಕೆಲವೇ ದಿನದಲ್ಲಿ ನಾಮಪತ್ರ ಸಲ್ಲಿಕೆ ಪ್ರಾರಂಭ ಆಗುವುದರಿಂದ, ಆದಷ್ಟು ಮುಂಗಡವಾಗಿ ನಿಮ್ಮ ಅರ್ಜಿ ಹಾಗು ಸಹಿ ಪಡೆದ ಶಿಫಾರಷು ಪತ್ರದ ಪ್ರತಿಯನ್ನು, ಪಕ್ಷದ ವೆಬ್ ಸೈಟ್ಗೆ ತಲುಪಿಸಬೇಕು. ಆವಾಗ, ಪಕ್ಷದ ಕಡೆಯಿಂದ ಶಿಫಾರಷು ಪತ್ರದ ತಪಾಸಣೆಗೆ ಬೇಕಾದಷ್ಟು ಸಮಯವೂ ಸಿಗುವುದು ಹಾಗು ನಾಮಪತ್ರ ಸಲ್ಲಿಸಲು ನಿಮಗೂ, ಬೇಕಾದಷ್ಟು ಸಮಯ ಸಿಗುವುದು.
ಸೂಚನೆ:
1.ಒಂದೇ ಕ್ಷೇತ್ರದಿಂದ ಒಂದಕ್ಕಿಂತ ಹೆಚ್ಚು ಅರ್ಜಿಗಳು ಬಂದಲ್ಲಿ, ಅತೀ ಹೆಚ್ಚು ಪ್ರಜೆಗಳ ಸಹಿ ಸಂಗ್ರಹಿಸಿದ ಅಭ್ಯರ್ಥಿ ಅಕಾಂಕ್ಷಿಯನ್ನು ಚುನಾವಣೆ ನಿಲ್ಲಲು ಅವಕಾಶ ಮಾಡಿ ಕೊಡಲಾಗುವುದು.
2. ಪ್ರಜೆಗಳನ್ನು ಸಂಪರ್ಕಿಸುವ ಪ್ರಕ್ರಿಯೆಯನ್ನು ಸ್ವತಹ ಅಭ್ಯರ್ಥಿ ಅಕಾಂಕ್ಷಿಯೇ ಮಾಡತಕ್ಕದ್ದು. ತಾಯಿಗಾಗಿ, ತಂದೆಗಾಗಿ, ಹೆಂಡತಿಗಾಗಿ, ಗಂಡನಿಗಾಗಿ, ಅಣ್ಣನಿಗಾಗಿ, ತಮ್ಮನಿಗಾಗಿ, ತಂಗಿಗಾಗಿ, ಅಕ್ಕನಿಗಾಗಿ, ಮಿತ್ರನಿಗಾಗಿ ಬೇರೊಬ್ಬರು ಸಹಿ ಸಂಗ್ರಹಣೆ ಮಾಡುವಂತಿಲ್ಲ. ಪಕ್ಷದ ಕಡೆಯಿಂದ ತಪಾಸಣೆ ಮಾಡುವಾಗ, ಸಹಿ ಸಂಗ್ರಹಣೆಗೆ, ಸ್ವತಹ ಅಭ್ಯರ್ಥಿ ಅಕಾಂಕ್ಷಿ ಬಂದಿಲ್ಲವೆಂದು ತಿಳಿದು ಬಂದರೆ, ಅವನ ಅರ್ಜಿಯನ್ನು ನಿರಾಕರಿಸಲಾಗುವುದು. ಪ್ರಜೆಗಳನ್ನು ಸಂಪರ್ಕ ಮಾಡಲು ಆಗದ ಪ್ರಜೆ, ಅಭ್ಯರ್ಥಿ ಆಗಲು ಖಂಡಿತಾ ಅರ್ಹನಲ್ಲ.
3. ಯಾವುದೇ ರೀತಿಯ ಸುಳ್ಳು ಮಾಹಿತಿ, ನಿಮ್ಮ ಅರ್ಜಿ ಅಥವಾ ಶಿಫಾರಷು ಪತ್ರದಲ್ಲಿ ಕಂಡು ಬಂದಲ್ಲಿ, ನಿಮ್ಮ ಅರ್ಜಿಯನ್ನು ನಿರಾಕರಿಸಲಾಗುವುದು.
4. ಎಲ್ಲಾ ಅಭ್ಯರ್ಥಿ ಅಕಾಂಕ್ಷಿ, ಆಗ ಬಯಸುವವರು, ತಮ್ಮ ನಿರ್ಧಾರವನ್ನು ಆದಷ್ಟು ಮುಂಗಡವಾಗಿ, ಚುನಾವಣೆ ಘೋಷಣೆ ಆಗುವ 5-6 ತಿಂಗಳು ಮೊದಲೆ ತೆಗೆದು ಕೊಂಡು, ಶಿಫಾರಷು ಪತ್ರದ ಪ್ರಕ್ರಿಯೆಯನ್ನು ಪ್ರಾರಂಬಿಸ ಬೇಕಾಗಿ ಎಲ್ಲರಲ್ಲೂ ವಿನಂತಿ. ಇಲ್ಲವಾದರೆ, ಸಮಯ ಅಭಾವದಿಂದ ಮುಜುಗರ ಆಗುವುದು ಸಾಧ್ಯ ಇದೆ. ಪಕ್ಷಕ್ಕೂ, ನಿಮ್ಮ ಅರ್ಜಿ ಹಾಗು ಪ್ರಜೆಗಳ ಶಿಫಾರಷು ಪತ್ರ ಆದಷ್ಟು ಮುಂಗಡವಾಗಿ ತಲುಪುವುದು ಅತೀ ಅವಶ್ಯ.
5. ಇದು ಅತೀ ದೊಡ್ಡ ಜವಾಬ್ದಾರಿ. ರಾಜ್ಯದ ಕೋಟಿಗಟ್ಟಲೆ ಪ್ರಜೆಗಳ ಜವಾಬ್ದಾರಿ. ಆದ್ದರಿಂದ ಸರಿಯಾಗಿ ಆಲೋಚಿಸಿ, ಮುಂಗಡವಾಗಿ, ನಿರ್ಧಾರ ತೆಗೆದು ಕೊಳ್ಳುವುದು ಅವಶ್ಯಕತೆ ಇದೆ. ಇಲ್ಲಿ, ಯಾವುದೇ ರೀತಿಯ ನಿರ್ಲಕ್ಷ ಖಂಡಿತಾ ಸಲ್ಲದು.
6.ನಿಮ್ಮ ಎಲ್ಲಾ ವಿವರವನ್ನು ಮುಂಗಡವಾಗಿ ಪಕ್ಷದ ವೆಬ್ ಸೈಟ್ ನಲ್ಲಿ ಪ್ರಸಾರ ಮಾಡಲಾಗುವುದು. ಎಲ್ಲವೂ ಪಾರಧರ್ಶಕವಾಗಿ ನಡೆಯುವುದು. ಹಾಗೆ, ನೀವು ಸಂಪರ್ಕಿಸಿದ ಪ್ರಜೆಗಳ ವಿಡಿಯೋ, ನಿಮ್ಮ ಫೇಸ್ ಬುಕ್ ನಲ್ಲಿ ಹಾಕುವುದರಿಂದ, ನಿಮ್ಮ ಕ್ಷೇತ್ರದ ಪ್ರಜಾಕೀಯ ಸಪೋರ್ಟರ್ಗೆ ನೀವು ಅಭ್ಯರ್ಥಿ ಅಕಾಂಕ್ಷಿ ಎಂದು ತಿಳಿದು, ಅವರ ಕಡೆಯಿಂದಲೂ ನಿಮಗೆ ಸಹಾಯ ಆಗುವುದು ಹಾಗು ಪ್ರಜೆಗಳೂ ತಿಳಿಯುವರು.
7. ನೆನಪಿರಲಿ, ಇಲ್ಲಿ ಪಕ್ಷ ಯಾರನ್ನೂ ಅಭ್ಯರ್ಥಿ ಆಗಿ ಆಯಿಕೆ ಮಾಡುವುದಿಲ್ಲ. ಎಲ್ಲವೂ ಮೇಲೆ ಹೇಳಿದ ಪ್ರಕ್ರಿಯೆ ಪ್ರಕಾರ ನಡೆಯುವುದರಿಂದ, ಇಲ್ಲಿ ಸಮಯಾವಕಾಶ ಅತೀ ಅಗತ್ಯ.
a) ಪ್ರಜೆಗಳ ಶಿಫಾರಷು ಪತ್ರದಲ್ಲಿ, ಪ್ರಜೆಗಳನ್ನು ಸಂಪರ್ಕಿಸಿ ಅವರ ಸಹಿ ಪಡೆಯುವುದು. ಇದಕ್ಕೆ ಅತಿಯಾದ ಸಮಯ ಬೇಕು.
b) ಆನಂತರ, ಪಕ್ಷಕ್ಕೆ ತಲುಪಿಸಬೇಕು.
c) ಪಕ್ಷಕ್ಕೆ ತಲುಪಿದ ನಂತರ, ಅವರ ಅರ್ಜಿಯನ್ನು ಪರಿಶೀಲಿಸಬೇಕು.
d) ಶಿಫಾರಷು ಪತ್ರದಲ್ಲಿ ಸಂಗ್ರಹಿಸಲಾದ ಪ್ರಜೆಗಳನ್ನು ರಾಂಡಮ್ ಆಗಿ ಪರಿಶೀಲನೆ ಮಾಡಬೇಕು.
e) ಅಭ್ಯರ್ಥಿ ಅಕಾಂಕ್ಷಿಯನ್ನು ಅವನ ಸ್ಥಳದಿಂದ ಕರೆಸಿ, ಅವನಿಗೆ ನಾಮ ಪತ್ರ ಸಲ್ಲಿಸಲು ಬೇಕಾದ ದಾಖಲೆ ಪತ್ರಗಳನ್ನು ಕೊಡಬೇಕಾಗುವುದು.
f) ಅಭ್ಯರ್ಥಿಯು ಅವನ ಆಸ್ತಿ, ಹಣ, ವಿಧ್ಯಾಭ್ಯಾಸ, ವಯಸ್ಸು, ಫೋಟೊ, ಬ್ಯಾಂಕ್ ಖಾತೆ, ಇತ್ಯಾದಿಗಳ ದಾಖಲೆಗಳನ್ನು ನೋಟರಿಯಿಂದ ಅಫಿಡಾಬಿಟ್ ಮಾಡಿಸಬೇಕು.
g) ಅವನ ವೋಟರ್ ಐಡಿ ಎಕ್ಸ್ಟಾಕ್ಟ್ ತಹಸಿಲ್ದಾರರ ಕಚೇರಿಯಿಂದ ಪಡೆಯಬೇಕು.
h) ಅವನ ಎಜಂಟನನ್ನು ನೇಮಿಸಬೇಕು ಹಾಗು ಅವನ ವಿವರ ಒದಗಿಸ ಬೇಕು.
i) ನಾಮ ಪತ್ರಕ್ಕೆ ಲಗತ್ತಿಸ ಬೇಕಾದ ಎಲ್ಲಾ ಕಾಗದ ಪತ್ರ ಒದಗಿಸಬೇಕು.
ಹೀಗೆ ಕೆಲವೊಂದು ಅವಶ್ಯಕತೆಯನ್ನು, ರಿಟರ್ನಿಂಗ್ ಆಫೀಸರ್ನಿಂದ ಮೊದಲೆ ತಿಳಿದು ತಯಾರು ಮಾಡಿದರೆ ಉತ್ತಮ. ನಾಮ ಪತ್ರ ಸಲ್ಲಿಸಲು ಕೆಲವೇ ದಿನ ಇರುವಾಗ ಬಂದು ಎಲ್ಲವನ್ನೂ ಮಾಡುವೆನೆಂಬ ಹುಂಬತನ ಬೇಡ. ಎಲ್ಲಾ ಪ್ರಕ್ರಿಯೆಯನ್ನು ಸಂಪೂರ್ಣ ಮಾಡಿ, ನಾಮ ಪತ್ರದಲ್ಲಿ ಏನಾದರೂ ಕೊರತೆ ಉಂಟಾಗಿ, ಅದು ನಿರಾಕರಿಸಲ್ಪಟ್ಟರೆ, ನಿಮ್ಮ ತಿಂಗಳು ಕಟ್ಟಲೆ ಪಟ್ಟ ಪ್ರಯತ್ನ ವ್ಯರ್ಥ ಆಗುವುದು. ಅತಿಯಾದ ನಿರಾಸೆ ಆಗುವುದು.
ನೆನಪಿರಲಿ, ಬೇರೆ ಪಕ್ಷಗಳಲ್ಲಿ ಅಭ್ಯರ್ಥಿಗಾಗಿ ಲಾಯರುಗಳನ್ನು ನೇಮಿಸುವರು ಹಾಗು ಅವರು ಎಲ್ಲವನ್ನೂ ನೋಡಿ ಕೊಳ್ಳುವರು. ಆದರೆ, ನಮ್ಮದು, ಹಣ ಇಲ್ಲದೆ ನಡೆಯುವ ಪಕ್ಷ. ಇಲ್ಲಿ ಎಲ್ಲಾ, ನಾವೇ ಮಾಡಿ ಕೊಳ್ಳಬೇಕು. ಖಂಡಿತಾ ಇದು ಕಷ್ಟ ಅಲ್ಲ. ಸರಿಯಾದ ಮಾಹಿತಿ ಪಡೆದು ಕೊಳ್ಳುವುದು ಅವಶ್ಯ.
ಭಾಗ I ಹಾಗು ಭಾಗ II ರಿಂದ ಎಲ್ಲಾ ಕ್ಷೇತ್ರಗಳಿಗೆ ಹಾಗು ಎಲ್ಲಾ ರೀತಿಯ ಅಭ್ಯರ್ಥಿ ಆಗಿ ಬರುವವರಿಗೆ ಗೊಂದಲ ಆಗಬಾರದೆಂದು ಈ ವಿವರವಾದ ಲೇಖನ ಬರೆದಿರುವೆನು.
ಜೈ ಪ್ರಜಾಕೀಯ