ಶಿಫಾರಸು – Recommendation.
ಇದೊಂದು ನಮ್ಮ ಭಾರತದ ಅತೀ ಭಯಂಕರ ಪಿಡುಗು.
ಒಬ್ಬರಿಗೆ ತುರ್ತು ಚಿಕಿತ್ಸೆ ಬೇಕಾದರೆ, ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಸೇರಿಸಲು ಗಣ್ಯರ ಶಿಫಾರಸು ಬೇಕು.
ಮಕ್ಕಳನ್ನು ಖಾಸಾಗಿ ಶಾಲೆಗೆ ಸೇರಿಸಲು ಗಣ್ಯರ ಶಿಫಾರಸು ಬೇಕು.
ಎಲ್ಲಿಯಾದರೂ ಕೆಲಸಕ್ಕೆ ಸೇರಲು ಗಣ್ಯರ ಶಿಫಾರಸು ಬೇಕು.
ಸರಕಾರದ ಎಲ್ಲಾ ಯೋಜನೆ ಅಥವಾ ಕೆಲಸದಲ್ಲಿ ಗಣ್ಯರ ಶಿಫಾರಸು ಹಾಗು ಲಂಚದ ಬಿಕ್ಷೆ ಕೊಡದೆ ಆಗುವುದೇ ಇಲ್ಲ.
ಯಾವುದೇ ಒಂದು ಬ್ಯಾಂಕ್ ಸಾಲ ತೆಗೆದು ಕೊಳ್ಳ ಬೇಕಾದರೆ, ಬ್ಯಾಂಕಿನ ಗಣ್ಯರ ಅಥವಾ ರಾಜಕಾರಣಿಗಳ ಶಿಫಾರಸು ಇಲ್ಲದೆ ಸಾಧ್ಯವಿಲ್ಲ.
ಸರಕಾರಕ್ಕೆ ಸಂಬಂದ ಪಟ್ಟ ಯಾವುದೇ ಕೆಲಸವು, ಶಿಫಾರಸು ಇಲ್ಲದೆ ಆಗುವುದೇ ಇಲ್ಲ.
ಇದೊಂದು ಕಾನೂನಿನಿಂದ ನಡೆಯುವ ದೇಶ ಅಲ್ಲವೇ ?
ಕೇವಲ ಶಿಫಾರಸಿನಿಂದ ನಡೆಯುವ ದೇಶವೇ ?
ನಮಗೆ ನಾವೇ ಪ್ರಶ್ನೆ ಮಾಡಿ ಕೊಳ್ಳಬೇಕು.
ಶಿಫಾರಸಿನ ಭ್ರಷ್ಟ ವ್ಯವಸ್ಥೆಯಿಂದ “ವ್ಯಕ್ತಿ ಪೂಜೆಯು” ಇನ್ನೊಂದು ಘನ-ಘೋರ ವ್ಯವಸ್ಥೆಯಾಗಿ ಬೆಳೆದು ನಿಂತಿದೆ.
ಹಣವಂತ, ಪ್ರತೀಷ್ಟಿತ, ಹೋರಾಟ ಮಾಡಿದವ, ಸಮಾಜ ಸೇವೆ ಮಾಡಿದವ(ಹಣ ಎಲ್ಲಿಂದ ಬಂತು, ಯಾರೂ ನೋಡುವುದಿಲ್ಲ), ತುಂಬಹ ಹಿಂಬಾಲಕರಿರುವವ, ಜೈಲಿಗೆ ಹೋಗಿ ಬಂದರೂ ತೊಂದರೆ ಇಲ್ಲ, ಕೊಲೆ ಪಾತಕನೂ ಆಗಿದ್ದರೂ ಹಣವಿದ್ದರೆ ಸಾಕು, ಇತ್ಯಾದಿ ಈಗಿನ ಗಣ್ಯರ ಮಾಪನ.
ಇಂತಹ ವ್ಯವಸ್ಥೆಯಲ್ಲಿ, ಇಂತಹ ಗಣ್ಯರು ಕಾನೂನನ್ನು ತಮ್ಮ ಕೈಗೆತ್ತಿ ಕೊಂಡು, ತಮ್ಮದೆ ಕಾನೂನು ಎಂಬಂತೆ ವರ್ತಿಸುವರು.
ಎನಾಯಿತು, ಈ ದೇಶಕ್ಕೆ ? ಅಷ್ಟು ಬಲೀಷ್ಟ ಆಂಗ್ಲರನ್ನು ಓಡಿಸಿದ ನಾವು, ನಮ್ಮ ಪ್ರಜೆಗಳಿಗೆಯೇ ಗುಲಾಮರು ಆದೆವೆಯೇ ?
ಗಣ್ಯರ ಪರಿಚಯವೇ ಒಂದು ಕ್ವಾಲಿಫಿಕೇಶನಂತೆ ಕೆಲಸ ಮಾಡಲು ಪ್ರಾರಂಭಿಸಿದೆ. ಆದ್ದರಿಂದ ಗಣ್ಯರ ಪರಿಚಯಕ್ಕಾಗಿ ಪ್ರಜೆಗಳು ಹಾತೊರೆಯುವಂತಿದೆ. ಗುಲಾಮಗಿರಿಯ ಅತಿರೇಖ.
ನೂರಾರು ವರ್ಷ ಮೊದಲು, ಹಣವಂತರು ತಮ್ಮ ಬಿಟ್ಟಿ ಕೆಲಸಕ್ಕಾಗಿ ಗುಲಾಮರನ್ನು ನೇಮಿಸುತ್ತಿದ್ದರು. ಆದರೆ, ಈಗ, ಸ್ವತಂತ್ರ ದೇಶದ ಪ್ರಜೆಗಳು, ನಾವೇ, ಗಣ್ಯರ ಗುಲಾಮರಾಗಲು ಹಾತೊರೆಯುವಂತಿದೆ. ನಮಗೆ, ಸ್ವಂತಿಕೆ ಇಲ್ಲವಾ ? ತಾರ್ಕಿಕವಾಗಿ ಆಲೋಚಿಸುವ ಶಕ್ತಿ ಕಳೆದು ಕೊಂಡಿದೇವಾ ?
ಈ ಶಿಫಾರಸು -Recommendation- Favourism ಎಂಬ ಭಹತ್ ಭ್ರಷ್ಟಾಚಾರ ನಿಲ್ಲದೆ, ಈ ದೇಶ ಎಂದೂ ಸುಧಾರಿಸುವಂತಿಲ್ಲ. ಇದು ಭ್ರಷ್ಟಾಚಾರದ ಮೂಲ.
ದೇಶವು, ದೇಶದ ಕಾನೂನು ವ್ಯವಸ್ಥೆಯ ಪ್ರಕಾರ ನಡೆದರೆ ಮಾತ್ರ, ಆ ದೇಶದಲ್ಲಿ ಪ್ರಜೆಗಳಿಗೆ ನೆಮ್ಮದಿಯ ಜೀವನ ಸಿಗುವುದು.
ಈ ಶಿಫಾರಸಿಗೆ ಮೂಲ ಕಾರಣ ಹುಡುಕುತ್ತಾ ಹೋದರೆ ಅರಿವಾಗುವುದು, ನಾವೇ, ಪ್ರಜೆಗಳು ಕಾರಣ ಎಂದು. ಎಲ್ಲವೂ ನಮಗೆ ಬೇಕಾದ ಹಾಗೆ ಆಗಬೇಕು, ನಮ್ಮ ಸಮಯಕ್ಕೆ ಆಗಬೇಕು, ನಾವು ಕಾನೂನಿನ ಪ್ರಕಾರವಾಗಿ ಕೆಲಸವಾಗಲು ಕಾಯಲು ನಮ್ಮಲ್ಲಿ ಸಹನೆ ಇಲ್ಲ. ಅದಕ್ಕಾಗಿ ಗಣ್ಯರ ಗುಲಾಮರಾಗುತ್ತೇವೆ. ಗಣ್ಯರು, ನಾವೇ ರಾಜರು ಎಂದು ಮೆರೆಯುವಂತೆ ಅವಕಾಶ ಮಾಡಿ ಕೊಡುವವರೂ ನಾವೇ.
ಭ್ರಷ್ಟಾಚಾರ ಒಂದು ಕಡೆ ನಮ್ಮ ದೇಶ-ರಾಜ್ಯಕ್ಕೆ ಬಂದಿರುವ ಕ್ಯಾನ್ಸರ್ ಆದರೆ, ಶಿಫಾರಸು ಇನ್ನೊಂದು ತರಹದ ಕ್ಯಾನ್ಸರ್. ಇದು. ಭ್ರಷ್ಟರಿಗೆ ಸೆಲ್ಯೂಟ್ ಹೊಡೆದು, ಪ್ರಜೆಗಳನ್ನು ಗಣ್ಯರ ಗುಲಾಮರನ್ನಾಗಿ ಮಾಡುವುದು.
ವಿಪರೀತ, ಆದರೂ ನಿಜ
ಎದ್ದೇಳು ಪ್ರಜೆ. ಪುನಹ ಗುಲಾಮಗಿರಿಗೆ ಜಾರಿ ಬೀಳ ಬೇಡ. ಕಾನೂನಿಗೆ ಬೆಲೆ ಕೊಡ ಬೇಕು.
ಆಡಿನ ಹಿಂದೆ ಓಡುವ ಕುರಿಯಾಗಬೇಡ.
ಸಶಕ್ತ ಪ್ರಜೆಯಾಗು
ಜೈ ಪ್ರಜಾಕೀಯ
ಜೈ ಉತ್ತಮ ಪ್ರಜಾಕೀಯ ಪಕ್ಷ (ಉ.ಪಿ.ಪಿ.)
Visit : www.prajaakeeya.org