ರಾಜ್ಯದ ಮುಖ್ಯ ಮಂತ್ರಿ ಅಥವಾ ಮಂತ್ರಿ
ರಾಜ್ಯದ ಮುಖ್ಯ ಮಂತ್ರಿಯನ್ನು ಯಾರು ಆರಿಸುತ್ತಾರೆ ಹಾಗು ಅವನು ಯಾರ ಪ್ರತಿನಿಧಿ ?
ರಾಜ್ಯದ ಮುಖ್ಯ ಮಂತ್ರಿಯನ್ನು ಪ್ರಜೆಗಳು ಕೇವಲ MLA ಆಗಿ ಆರಿಸುತ್ತಾರೆ. ಅವನು/ಅವಳು ರಾಜ್ಯದ ಪ್ರಜೆಗಳ ಪ್ರತಿನಿಧಿ.
ಪ್ರಜೆಗಳು ಮುಖ್ಯ ಮಂತ್ರಿಯನ್ನು, ಮುಖ್ಯ ಮಂತ್ರಿಯಾಗಿ ಅಥವಾ ಮಂತ್ರಿಯಾಗಿ ಆರಿಸುವುದಿಲ್ಲ.
ಮೆಜೋರಿಟಿ(ಅರ್ಧಕ್ಕಿಂತ ಜಾಸ್ತಿ) ಚುನಾಯಿಸಿ ಬಂದ ಪಕ್ಷದ MLA,ಗಳು, ಅವರಲ್ಲಿ ಒಬ್ಬನನ್ನು ಮುಖ್ಯ ಮಂತ್ರಿ ಆಗಿ ಆರಿಸುವರು. ಇಲ್ಲಿ ಪ್ರಜೆಗಳ ಪಾತ್ರ ಇಲ್ಲ. ಆದರೇ, ಅವನು ಒಬ್ಬ ಪ್ರಜೆಗಳಿಂದ ಚುನಾಯಿತ ಪ್ರಜಾ ಪ್ರತಿನಿಧಿ.
ಆ ನಂತರ ಮುಖ್ಯ ಮಂತ್ರಿಯು ಅವನಿಗೆ ಬೇಕಾದವರನ್ನು ಆರಿಸಿ, ಮಂತ್ರಿ ಮಂಡಲ ಮಾಡಿ ಕೊಳ್ಳುತ್ತಾನೆ. ಆದ್ದರಿಂದ ಮಂತ್ರಿ ಮಂಡಲವನ್ನೂ ಆರಿಸುವುದರಲ್ಲಿ ಪ್ರಜೆಗಳ ಪಾತ್ರ ಹಾಗು ಪಕ್ಷದ ಪಾತ್ರ ಖಂಡಿತಾ ಇಲ್ಲ. ಆದರೆ ಅವರೂ ಪ್ರಜೆಗಳ ಪ್ರತಿನಿಧಿಗಳು.
ಹೀಗಿರುವಾಗ, ಮುಖ್ಯ ಮಂತ್ರಿಯಾಗಲಿ, ಮಂತ್ರಿಯಾಗಲಿ ಅಥವಾ ವಿಧಾನ ಸಭಾ ಸದಸ್ಯರಾಗಲಿ, ಎಲ್ಲರೂ ಆ ರಾಜ್ಯದ ಪ್ರಜೆಗಳಿಗೆ ಜವಾಬ್ದಾರರು.
ಆದರೆ, ಇಲ್ಲಿ ನಡೆಯುವುದೇ ಬೇರೆ. ಇವರೆಲ್ಲಾ ಪಕ್ಷದ ಹೈಕಮಾಂಡಿನ ನಿರ್ಧಾರದಂತೆ ಎಲ್ಲವನ್ನೂ ಕಾರ್ಯ ರೂಪಕ್ಕೆ ತರುತ್ತಿರುವರು.
ಇದೆಲ್ಲಿಯ ಪ್ರಜಾಪ್ರಭುತ್ವ ? ಪಕ್ಷದ ಹೈಕಮಾಂಡ್ ಇಲ್ಲಿ ಸರ್ವಾಧಿಕಾರ ಮಾಡುತ್ತಿರುವುದು. ಇದೊಂದು ಪರೋಕ್ಷ ಸರ್ವಾಧಿಕಾರವಲ್ಲವೇ ?
ಪ್ರಜಾಪ್ರಭುತ್ವದಲ್ಲಿ, ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ರಾಜ್ಯ ಹಾಗು ರಾಜ್ಯದ ವ್ಯವಸ್ಥೆ ನಡೆಯ ಬೇಕಲ್ಲವೇ ?
ಆದರೆ, ಇಲ್ಲಿ, ಪಕ್ಷದ ಹೈಕಮಾಂಡ್ ನ ನಿರ್ಧಾರದಂತೆ ರಾಜ್ಯವು ನಡೆಯುವುದು, ಪ್ರಜಾಪ್ರಭುತ್ವಕ್ಕೆ ಅಪವಾದವಲ್ಲವೇ ?
ಮುಖ್ಯ ಮಂತ್ರಿ, ಮಂತ್ರಿಗಳು ಹಾಗು ವಿಧಾನ ಸಭಾ ಸಧಸ್ಯರು ಪ್ರಜೆಗಳಿಗೆ ಜವಾಬ್ದಾರರು. ಚುನಾವಣೆ ಮುಗಿದ ನಂತರ, ಪಕ್ಷಗಳ ಮಧ್ಯೆ ಪ್ರವೇಶ ಖಂಡಿತಾ ಇರಬಾರದು. ಇಲ್ಲವಾದರೆ, ಪಕ್ಷದ ಹೈಕಮಾಂಡ್(ಪ್ರಜೆಗಳ ಪ್ರತಿನಿಧಿಗಳಲ್ಲ) ಪರೋಕ್ಷವಾಗಿ, ಸರ್ವಾಧಿಕಾರದ ಸರಕಾರ ನಡೆಸಿದಂತಾಗುವುದಲ್ಲವೇ ?
ಯೋಚಿಸಿ ಪ್ರಜೆಗಳೇ, ನಮಗೆ ತಿಳಿಯದಂತೆ, ಪಕ್ಷದ ಹೈಕಮಾಂಡ್ ಎಂಬ ಸರ್ವಾಧಿಕಾರ, ರಾಜ್ಯವನ್ನು ನಿಯಂತ್ರಿಸುವುದು ನಮ್ಮ ಗಮನಕ್ಕೆ ಬರುವುದೇ ಇಲ್ಲ.
ಎದ್ದೇಳು ಪ್ರಜೆಯೇ!
ಜೈ ಪ್ರಜಾಕೀಯ
ಜೈ ಉತ್ತಮ ಪ್ರಜಾಕೀಯ ಪಕ್ಷ (ಉ.ಪಿ.ಪಿ.)