ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಪಾರದರ್ಶಕ ಸರಕಾರ – ಪ್ರಜಾಕೀಯ

1. ವಿಧ್ಯಾಭ್ಯಾಸ- ಉಚಿತ

2. ಆರೋಗ್ಯ – ಉಚಿತ

3. ನೀರು

4. ವಿಧ್ಯುತ್

5. ಕಾನೂನು ವ್ಯವಸ್ಥೆ

6. ತ್ಯಾಜ್ಯ ವಿಲೆವಾರಿ ವ್ಯವಸ್ಥೆ

A. ಪಾರದರ್ಶಕ ಸರಕಾರ

B. ಪ್ರಜೆಗಳ ಡಾಟಾ ಬೇಸ್.

ಮೇಲಿನ ಎಂಟು ವಿಷಯವನ್ನು ಯಾವ ದೇಶದ ಹಾಗು ರಾಜ್ಯದ ಸರಕಾರಗಳು ಸಮಕ್ಷವಾಗಿ ನಿರ್ವಹಿಸುವುದೇ, ಆ ರಾಜ್ಯ ಹಾಗು ದೇಶವು ಅಬಿವ್ರಧ್ಧಿ ಹೊಂದಿದ ದೇಶವಾಗುವುದರಲ್ಲಿ ಸಂಶಯವಿಲ್ಲ.

ಪಾರದರ್ಶಕ ಸರ್ಕಾರದಿಂದ ಭ್ರಷ್ಟಾಚಾರ ಮುಕ್ತ ರಾಜ್ಯ-ದೇಶವಾಗುವುದು.

ಪ್ರಜೆಗಳ ಸಂಪೂರ್ಣ ಡಾಟಾ ಇದ್ದಾಗ, ಸರ್ಕಾರದ ಸೌಲಭ್ಯ- ಸೌಕರ್ಯಗಳು ಅವಶ್ಯಕತೆ ಇದ್ದ ಪ್ರಜೆಗೆ ತಲುಪುವುದು.

ಗುಣಮಟ್ಟದ ಉಚಿತ ವಿಧ್ಯಾಭ್ಯಾಸ ಹಾಗು ಉಚಿತ ಆರೋಗ್ಯ, ರೈತನನ್ನೂ ಸೇರಿಸಿ, ಎಲ್ಲಾ ಪ್ರಜೆಗಳ 50- 60 % ಆದಾಯದ ಉಳಿತಾಯವಾಗುವುದು. ಇದು ದೇಶದ ಆರ್ಥಿಕ ವ್ಯವಸ್ಥೆಯನ್ನು ಉತ್ತುಂಗಕ್ಕೆ ಏರಿಸುವುದು.

ತೆರಿಗೆ ಕೊಟ್ಟು ಹಣ ಸರ್ಕಾರದ ಬೊಕ್ಕಸದಲ್ಲಿದ್ದು ಯಾರೋ ಭ್ರಷ್ಟ ಜನರ ಹಾಗು ಕಂಟ್ರ್ಯಾಕ್ಟರನ ಮನೆ ಮಾತ್ರ ಉದ್ದಾರ ಮಾಡುವುದು.

  ಮನೆಯಲ್ಲಿ ಗಣೇಶ ಮೂರ್ತಿ ಇಡಲು ಕೆಲವು ಪ್ರಮುಖ ವಾಸ್ತು ಸಲಹೆಗಳು

ಆದರೆ ಜನರಲ್ಲಿ ಹಣ ಉಳಿದರೆ ಅಥವಾ ಅವನ ಪರ್ಚೇಸಿಂಗ್ ಪವರ್ ಒಳ್ಳೆಯದಾದರೆ, ಎಲ್ಲವೂ ಮಾರುಕಟ್ಟೆಗೆ
ಬಂದು ನಮ್ಮ ಆರ್ಥಿಕ ವ್ಯವಸ್ಥೆಯನ್ನು ಉತ್ತುಂಗಕ್ಕೇರಿಸುವುದು.

ಇದರಿಂದ ಲಕ್ಷ- ಲಕ್ಷ ಉದ್ಯೋಗ ಸೃಷ್ಟಿ ಮಾಡುವುದರಲ್ಲಿ ಸಂಶಯವಿಲ್ಲ.

ಕಾನೂನು ವ್ಯವಸ್ಥೆ ಸರಿಯಾಗಿ ಹಾಗು ವಿಸ್ತಾರವಾಗಿ ನಡೆದರೆ ರಾಜ್ಯ- ದೇಶದಲ್ಲಿ ಶಾಂತಿ ನೆಲಸುವುದು.

ತ್ಯಾಜ್ಯ ವಿಲೆವಾರಿ ಸರಿಯಾಗಿ ನಡೆದರೆ ರಾಜ್ಯ- ದೇಶ ನಿಜವಾಗಿ ಸ್ವಚ್ಚವೂ ಆಗುವುದು ಹಾಗು ನಮ್ಮ ನದಿ, ಕೆರೆ ಹಾಗು ಎಲ್ಲಾ ನೀರಿನ ಜಲಶಯಾಗಳು ಜನರು ಉಪಯೋಗಿಸುವಂತಾಗುವುದು. ಜಲ ಸಂಪತ್ತುಗಳು ಹೇರಳವಾಗುವುದು.

ಒಂದು ದಿನ ಪೊರಕೆ ಹಿಡಿದು ಪ್ರಧಾನಿ , ಮುಖ್ಯ ಮಂತ್ರಿ, ಮಂತ್ರಿ, ಸಮಾಜ ಸೇವಕರು ಅಥವಾ ಸಮಾಜ ಸೇವಕಿ ಸಂಘಗಳು ಸ್ವಚ್ಚ ಭಾರತವೆಂದರೆ ದೇಶ- ರಾಜ್ಯ ಸ್ವಚ್ಚವಾಗುವುದಿಲ್ಲ.ಇದೆಲ್ಲಾ ಕೆಮೆರಾದ ಮುಂದಿನ ಗಿಮ್ಮಿಕ್.

  ಬದಲಾವಣೆ - change - ಝೆನ್ ಕಥೆ

ಇದಕ್ಕೆ ಬೇಕಾದ ಉಪಕರಣ,ಸೌಲಭ್ಯ, ತರಬೇತಿ ಹೊಂದಿದ ನೌಕರರು, ಪ್ರತಿದಿನ ಪ್ರತೀ ರಸ್ತೆಗಳಲ್ಲಿ ಕಸ ಸಂಗ್ರಹ ಮಾಡುವ ಹಾಗು ವಿಲೆವಾರಿ ಮಾಡುವ ವ್ಯವಸ್ಥೆ ಬೇಕು.

ಯಾವುದೇ ಮುಂದುವರಿದ ದೇಶವನ್ನು ನೋಡಿದರೆ, ಇವೆ ಸರ್ಕಾರದ ಮುಖ್ಯ ಜವಾಬ್ದಾರಿಗಳು.

Infrastructure( ರಸ್ತೆ, ಸಾರಿಗೆ, ರೈಲ್ವೆ, ಮೆಟ್ರೋ, ಸೇತುವೆ ಹಾಗು ಎಲ್ಲಾ ಸಾರ್ವಜನಿಕ ಕಟ್ಟಡ) ನ್ನು ಮಾಡುವಾಗ ಮುಂದಿನ 25ವರ್ಷದ ಜನ ಸಂಖ್ಯೆಗೆ ಅವಶ್ಯಕತೆ ಇರುವಂತೆ ಮಾಡಿದರೆ, ಮುಂದಿನ 25ವರ್ಷ ಕೇವಲ ನಿರ್ವಹಣೆ( Maintenance) ಮಾಡುವಂತಿರ ಬೇಕು.

ಬೇರೆ ಎಲ್ಲಾ ಭಾವಾನಾತ್ಮಕ ಮಾತುಗಳಿಂದ ರಾಜ್ಯ- ದೇಶ ನಡೆಯುವುದಿಲ್ಲ.

ಮೇಲೆ ತಿಳಿಸಿದ 8 ವಿಷಯಗಳು ರಾಜ್ಯ-ದೇಶದ ಹಾಗು ಪ್ರಜೆಗಳ ಮೂಲಭೂತ ಅವಶ್ಯಕತೆಗಳು ಹಾಗು ಅದರಿಂದಲೇ ರಾಜ್ಯ- ದೇಶ ಅಬಿವ್ರದ್ದಿ ಹೊಂದುವುದು.

ಇದು ನನ್ನ ಯುರೋಪ್, ಕೊಲ್ಲಿ ದೇಶ, ಆಸ್ಟ್ರೇಲಿಯಾ, ಅಮೇರಿಕಾ, ಜಪಾನ್, ಇವುಗಳ ಕೂಲಂಕುಷವಾಗಿ ಸ್ಟಡಿ ಮಾಡಿದಾಗ ತಿಳಿದ ವಿಷಯಗಳು.

  ಶ್ರೀ ವಾದಿರಾಜತೀರ್ಥ ವಿರಚಿತ ಶ್ರೀ ಲಕ್ಷ್ಮಿ ಶೋಭಾನ ಪದ

ಉಳಿದ ಉದ್ಯೋಗ ಸ್ರಷ್ಟಿ, ಪ್ರವಾಸೋಧ್ಯಮ, ಎಲ್ಲವೂ ಈ ಎಂಟು ವ್ಯವಸ್ಥೆಯಿಂದ ತನ್ನಕ್ಕೆ- ತಾನಾಗಿ ಸ್ರಷ್ಟಿ ಯಾಗುವುದರಲ್ಲಿ ಸಂಶಯವಿಲ್ಲ.

ಪ್ರಜಾಕೀಯಾದ ಸರಕಾರ ಬಂದರೇ, ಇವುಗಳು ನಮ್ಮ ಫೋಕಸ್ ಆಗಿರಬೇಕು.

ಇದು ನನ್ನ ಅನಿಸಿಕೆಯಲ್ಲ. ಇದು ಖಂಡಿತಾ ಸಾಧ್ಯವೆಂಬ ಭರವಸೆಯು ಇದೆ. ಇದಕ್ಕೆ ಬೇಕಾದ ಹಣದ ವ್ಯವಸ್ಥೆಯೂ ನಮ್ಮಲ್ಲಿರುವುದು. ಭ್ರಷ್ಟಾಚಾರ ನಿಂತಾಗ, ಹಣದ ಕೊರತೆ ಇರುವುದಿಲ್ಲ. ನಮ್ಮ ಬಜೆಟ್ನ 60- 80% ಕೊಳ್ಳೆ ಹೊಡೆಯಲಾಗುತ್ತಿದೆ.

ಭ್ರಷ್ಟ ರಾಕ್ಷಸರು, ನಮ್ಮನ್ನು ಸಂಪೂರ್ಣ ಆವರಿಸಿರುವರು.

Leave a Reply

Your email address will not be published. Required fields are marked *

Translate »