ಗರುಡ ಪುರಾಣದ ಪ್ರಕಾರ ಆರು ವಿಧದ ಶುದ್ಧೀಕರಣ ಸ್ನಾನ
1) ಬ್ರಹ್ಮ
2) ಆಗ್ನೇಯ
3) ವಾಯವ್ಯ
4) ದಿವ್ಯಾ
5) ವರುಣ
6) ಯೌಗಿಕಾ
ಬ್ರಹ್ಮ ಸ್ನಾನ – ಬ್ರಹ್ಮ ಸ್ನಾನ ಎಂದರೆ ಪವಿತ್ರ ಮಂತ್ರಗಳನ್ನು ಪಠಿಸುತ್ತಾ ಪವಿತ್ರ ಕುಸಾ ಹುಲ್ಲಿನ ಮೂಲಕ ದೇಹವನ್ನು ನೀರಿನ ಹನಿಗಳಿಂದ ಚಿಮುಕಿಸುಕೊಂಡು ದೇಹವನ್ನು ಉಜ್ಜುವುದು
ಬ್ರಹ್ಮ ಸ್ನಾನ – ಬ್ರಹ್ಮ ಸ್ನಾನ ಎಂದರೆ ಪವಿತ್ರ ಮಂತ್ರಗಳನ್ನು ಪಠಿಸುತ್ತಾ ಪವಿತ್ರ ಕುಸಾ ಹುಲ್ಲಿನ ಮೂಲಕ ದೇಹವನ್ನು ನೀರಿನ ಹನಿಗಳಿಂದ ಚಿಮುಕಿಸುಕೊಂಡು ದೇಹವನ್ನು ಉಜ್ಜುವುದು.
ಆಗ್ನೇಯ ಸ್ನಾನ – ಆಗ್ನೇಯ ಸ್ನಾನ ಎಂದರೆ ದೈವಿಕ ಭಸ್ಮವನ್ನು ತಲೆಯಿಂದ ಪಾದದವರೆಗೆ ಹಚ್ಚಿ ದೇಹವನ್ನು ಶುದ್ಧೀಕರಿಸುವುದು.
ವಾಯವ್ಯ ಸ್ನಾನ – ಒಣಗಿದ ಗೋವಿನ ಸಗಣಿ ದೂಳನ್ನು ದೇಹಕ್ಕೆ ಹಚ್ಚುವುದು ವಾಯವ್ಯ ಎಂಬ ಅತ್ಯುತ್ತಮ ಸ್ನಾನದ ರೂಪವಾಗಿದೆ.
ದಿವ್ಯ ಸ್ನಾನ – ಮಳೆ ಬರುವಾಗ ಬಿಸಿಲೂ ಇದ್ದು, ಅಂತಹ ಸಮಯದ ಮಳೆಯಲ್ಲಿ ಸ್ನಾನ ಮಾಡುವುದನ್ನು ದಿವ್ಯ ಸ್ನಾನ ಎಂದು ಕರೆಯಲಾಗುತ್ತದೆ.
ವರುಣ ಸ್ನಾನ – ನೀರಿನ ತೊಟ್ಟಿಗಳು, ಕೆರೆ, ನದಿಗಳಲ್ಲಿ ಧುಮುಕುವುದನ್ನು ವರುಣ ಸ್ನಾನ ಎಂದು ಕರೆಯಲಾಗುತ್ತದೆ.
ಯೌಗಿಕ ಸ್ನಾನ -ಏಕಾಗ್ರತೆಯಿಂದ ಯೋಗದ ಮೂಲಕ ದೇವರನ್ನು ಧ್ಯಾನಿಸುವುದನ್ನು ಯೌಗಿಕ ಸ್ನಾನ ಎನ್ನುತ್ತಾರೆ