ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಸೌಂದರ್ಯದ ಅಹಂಕಾರ ಮತ್ತು ಹಣದ ಅಹಂಕಾರ

ಅಹಂಕಾರ..!
………………………………….
ಅಹಂಕಾರದಲ್ಲಿ ಹಲವು ವಿಧ ಅವುಗಳಲ್ಲಿ ಸೌಂದರ್ಯದ ಅಹಂಕಾರ ಮತ್ತು ಹಣದ ಅಹಂಕಾರ ಮುಖ್ಯವಾದವು

ಸೌಂದರ್ಯದ ಅಹಂಕಾರ ಮನುಷ್ಯನಿಗೆ ಬಂದರೆ ಅವನ ವಿನಾಶ ಖಚಿತ ಏಕೆಂದರೆ ಎಲ್ಲಾ ಅಹಂಕಾರಕ್ಕಿಂತ ಅದು ತುಂಬಾ ಕೆಟ್ಟದ್ದು ಅವರ ಮನಸ್ಸಿನಲ್ಲಿ ನಮಗಿಂತ ಸುಂದರವಾಗಿರುವವರು ಪ್ರಪಂಚದಲ್ಲಿ ಯಾರೂ ಇಲ್ಲ ಎಂದುಕೊಂಡಿರುತ್ತಾರೆ ಹಾಗೂ ಈ ಸೌಂದರ್ಯ ಶಾಶ್ವತ ಎಂದುಕೊಂಡಿರುತ್ತಾರೆ ಆದರೆ ಆ ಸೌಂದರ್ಯ ಕೆಲವು ದಿನ ಮಾತ್ರ ಅದಕ್ಕೂ ಸಾವಿದೆ ಮತ್ತು ನಮಗೆ ಇನ್ನೊಂದು ದೇಹವು ಮುಂದೆ ಸಿಗಬಹುದು(ಇನ್ನೊಂದು ಜನ್ಮದಲ್ಲಿ) ಆಗ ನಾವು ಕುರೂಪಿ ಆಗಿ ಹುಟ್ಟಬಹುದು, ದೇವರು ನಮ್ಮೊಳಗೆಯೇ ಇದ್ದಾರೆ ಈ ಸೌಂದರ್ಯವನ್ನು ಕೊಟ್ಟವನು ಅವನೇ ಕಿತ್ತುಕೊಳ್ಳುವವನು ಅವನೇ ಎಂದು ಮರೆತಿರುತ್ತೇವೆ ಅಕಸ್ಮಾತ್ ನಾಳೆಯೆ ನಮಗೆ ಅಪಘಾತವಾಗಿ ಈ ಸೌಂದರ್ಯ ಮಾಸಿ ಹೋಗಬಹುದು ಯಾರಿಗೆ ಗೊತ್ತು ನಮ್ಮ ಕರ್ಮ ಫಲ ಹಾಗಿರಬಹುದು ಹಾಗಾಗಿ ನಮ್ಮ ಸೌಂದರ್ಯದ ಬಗ್ಗೆ ನಾವೇ ಹೊಗಳುವುದಕ್ಕಿಂತ ಬೇರೆಯವರನ್ನು ನೋಡಿ ಗೇಲಿ ಮಾಡುವುದಕ್ಕಿಂತ ನಯವಿನಯದಿಂದ ಭಗವಂತನ ಧ್ಯಾನ ಮಾಡುತ್ತಾ ಬದುಕಿದರೆ ನಮ್ಮ ಈ ಜೀವನ ಸಾರ್ಥಕವಾಗುತ್ತದೆ

  ಜಿಪುಣ ಮತ್ತು ಜೀವನದ ಮೌಲ್ಯ

ಹಾಗೂ ಹೊರಗಿನ ಪ್ರಪಂಚದಲ್ಲಿ ಕಡೂ ಬಡವರು ಬಿಕ್ಷುಕರು, ಮಾನಸಿಕ ಅಸ್ವಸ್ಥರನ್ನು ನೋಡಿ ನಗುವುದಕ್ಕಿಂತ ಅವರು ಯಾಕೇ ಹಾಗಾದರು ಎಂದು ಯೋಚಿಸುವುದು ಉತ್ತಮ ದೇವರು ನಮಗೆ ಯೋಚಿಸುವ ಶಕ್ತಿಯನ್ನು ಕೊಟ್ಟಿದ್ದಾರೆ ಆದರೆ ನಾವು ಹಲವಾರು ಕೆಟ್ಟ ವಿಚಾರಗಳನ್ನು ಯೋಚಿಸುತ್ತೆವೆ ಆದರೆ ಒಳ್ಳೆಯದನ್ನೇ ಯೋಚಿಸಿದ್ದರೆ ಈ ಪ್ರಪಂಚದಲ್ಲಿ ಬಡವರೆ ಇರುತ್ತಿರಲಿಲ್ಲ ಹಣದ ಅಹಂಕಾರವು ಹಾಗೆಯೇ ಹಣದಿಂದ ನಾನು ಇಡೀ ಪ್ರಪಂಚವನ್ನೆ ಕೊಳ್ಳಬಹುದು ಅಂದುಕೊಂಡಿರುತ್ತಾರೆ ಆದರೆ ಅವರಿಗೆ ತಿಳಿದಿಲ್ಲ ಹಣದಿಂದ ಸಾವನ್ನು ಗೆಲ್ಲಲಾಗದು ಎಂದು ಹಾಗೂ ಭಗವಂತ ಹಣಕ್ಕೆ ಎಂದು ಒಲಿಯುವುದಿಲ್ಲ ಎಂದು ಈ ರೀತಿ ಅಹಂಕಾರ ತೋರಿದರೆ ನಮ್ಮ ಅಂತರಾತ್ಮದಲ್ಲಿರುವ ಭಗವಂತನಿಗೆ ದ್ರೋಹ ಮಾಡಿದ ಹಾಗೇ ಆಗುತ್ತದೆ ಆದ್ದರಿಂದ ಯಾವಾಗಲೂ ಇನ್ನೊಬ್ಬರಿಗೆ ಒಳಿತನ್ನು ಮಾಡುತ್ತಾ ಬದುಕುವುದು ಉತ್ತಮ ಎಲ್ಲರನ್ನೂ ಪ್ರೀತಿಸಿ ಆ ಪ್ರೀತಿ ನಿಶ್ಕಲ್ಮಶವಾಗಿರಲಿ

  ಗಂಡ ಹೆಂಡತಿ - ಹಿರೇಮಗಳೂರು ಕಣ್ಣನ್

ನಾಟಕದ ಪ್ರೀತಿ ಬೇಡ ಪ್ರಪಂಚದಲ್ಲಿ ಯಾವುದೇ ಶತ್ರುಗಳನ್ನು ಇಟ್ಟುಕೊಳ್ಳಬೇಡಿ ನಿಮಗೆ ಒಬ್ಬರು ದುಷ್ಟರು ಎಂದು ಗೊತ್ತಾದರೆ ಅವರಿಂದ ದೂರವಿರಿ ಅದು ಬಿಟ್ಟು ಅವರ ಮುಂದೆ ಚೆನ್ನಾಗಿದ್ದು ಅವರಿಗೆ ಸೇಡು ತೀರಿಸಿಕೊಳ್ಳಲು ಹಿಂದಿನಿಂದ ಸಂಚು ಮಾಡಬೇಡಿ ಅವರ ಕರ್ಮಕ್ಕೆ ತಕ್ಕ ಫಲ ಭಗವಂತ ಕೊಡುತ್ತಾರೆ ಆದರಿಂದ ನಾವು ಸುಮ್ಮನೆ ಅವರಿಂದ ದೂರ ಸರಿಯುವುದು ಉತ್ತಮ ಹಾಗೂ ಒಳ್ಳೆಯವರ ಜೊತೆ ಬದುಕುವುದು ಒಳಿತು,
ಇದಕ್ಕೆಲ್ಲಾ ಮುಖ್ಯವಾದ ಕಾರಣ ಜನರಿಗೆ ತಿಳುವಳಿಯೆ ಇಲ್ಲದಿರುವುದು ಆದರೆ ಕೆಲವರಿಗೆ ತಿಳಿವಳಿಗೆ ಇದ್ದರೂ ಅವರೂ ಬದಲಾಗುವುದಿಲ್ಲ ಕೆಲವರಿಗೆ ಬಾಲ್ಯದಿಂದ ತಂದೆ ತಾಯಿ ಸರಿಯಾದ ಬುದ್ದಿ ಹೇಳದ ಕಾರಣ ಹಾಗಾಗಿರುತ್ತಾರೆ ಆದರಿಂದ ಬಾಲ್ಯದಿಂದಲೇ ಮಕ್ಕಳಿಗೆ ಭಗವದ್ಗೀತೆ ರಾಮಾಯಣ ಮಹಾಭಾರತ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ರಾಮಕೃಷ್ಣ ಪರಮಹಂಸರ ಬೋಧನೆಗಳನ್ನು ತಿಳಿಸಿದರೆ ಯಾವುದೇ ಮನುಷ್ಯ ಕೆಟ್ಟ ದಾರಿ ಹಿಡಿಯುವುದಿಲ್ಲ ಆದರೆ ಕೆಲವರು ಅದರ ಬಗ್ಗೆ ಹೇಳಿದರು ಬದಲಾಗುವುದಿಲ್ಲ ಅಂತವರು ಪ್ರಪಂಚದ ಕೆಟ್ಟ ಹುಳುವಿನಂತೆ ಅವರ ಕರ್ಮ ಫಲವೇ ಅವರಿಗೆ ಬುದ್ದಿ ಕಲಿಸುತ್ತದೆ ಭಗವಂತ ಅವರಿಗೆ ಸರಿಯಾದ ಶಿಕ್ಷೆ ಕೊಟ್ಟು ಶಿಕ್ಷಣ ನೀಡುತ್ತಾರೆ

  ಶ್ರೀ ವ್ಯಾಸರಾಜ ತೀರ್ಥ ಪ್ರತಿಷ್ಠಾಪಿಸಿರುವ 732 ಆಂಜನೇಯ - Sree Vyasaraja Built 732 Anjaneya statues list

ಆದರಿಂದ ನಮಗೆ ಶಾಲೆಯಲ್ಲಿ ಹೇಳಿಕೊಡುವ ಸಮಾಜ ವಿಜ್ಞಾನ ಗಣಿತ ಪಾಠಕ್ಕಿಂತ ನಮ್ಮ ಬದುಕಿನ ಮೌಲ್ಯವನ್ನು ಹೇಳಿಕೊಡುವ ಅಧ್ಯಾತ್ಮ ಪಾಠವೇ ಮುಖ್ಯವಾದದ್ದು ಅದನ್ನು ತಿಳಿದವನೂ ಎಂದು ಕೆಟ್ಟ ಮಾರ್ಗವನ್ನು ಹಿಡಿಯುವುದಿಲ್ಲ ಅವನಿಗೆ ಮನಸ್ಸಿನ ಮೂಲೆಯಲ್ಲೂ ಒಂದು ಚೂರು ಅಹಂಕಾರ ಬರುವುದಿಲ್ಲ ಆದ್ದರಿಂದ ನಿಮ್ಮ ಎಲ್ಲಾ ಮಕ್ಕಳಿಗೂ ಹಾಗೂ ಸ್ನೇಹಿತರಿಗೂ ಹಾಗೂ ಎಲ್ಲಾರಿಗೂ ನಿಮಗೆ ತಿಳಿದಷ್ಟು ಅಧ್ಯಾತ್ಮ ಜ್ಞಾನ ನೀಡಿ ಎಂದು ನಮ್ಮ ವಿನಂತಿ 🙏
ಕೃಷ್ಣ ಕೃಷ್ಣ 🙏

Leave a Reply

Your email address will not be published. Required fields are marked *

Translate »