ಕೌಟುಂಬಿಕ ವ್ಯವಸ್ಥೆ ಇನ್ನು ಮುಂದೆ ಇರುವುದಿಲ್ಲ.
ಅತಿ ಶೀಘ್ರದಲ್ಲಿ ಈ ಕುಟುಂಬ ವ್ಯವಸ್ಥೆಯನ್ನು ಪೂರ್ತಿಯಾಗಿ ಕಳೆದುಕೊಳ್ಳುತ್ತೇವೆ. ಬಹಳಷ್ಟು ಜನ ಈ ದಿನಗಳಲ್ಲಿ ಕುಟುಂಬ ವ್ಯವಸ್ಥೆಯನ್ನು ಇಷ್ಟಪಡುತ್ತಿಲ್ಲ.
ಇದಕ್ಕಿಂತ ದೌರ್ಭಾಗ್ಯದ ಪರಿಸ್ಥಿತಿ ಮತ್ತೊಂದಿಲ್ಲ.
ಕುಟುಂಬ ಎಂದರೆ ಇಷ್ಟವಿಲ್ಲದೇ ಇದ್ದರೂ ಬೇರೆಯವರ ತೋರಿಕೆಗೆ ಇಷ್ಟ ಇರುವಂತೆ ನಟಿಸುತ್ತಿದ್ದಾರೆ. ನಿಜ ಹೇಳಬೇಕೆಂದರೆ ಮನುಷ್ಯರಿಗೆ ಜನ ಎಂದರೆ ಅಲರ್ಜಿ ಆಗಿ ಬಿಟ್ಟಿದೆ. ಹತ್ತಿರದ ಜನ ಎಂದರೆ ಇಷ್ಟವಾಗುತ್ತಿಲ್ಲ .
ಈ ಕೌಟುಂಬಿಕ ವ್ಯವಸ್ಥೆ ಕುಸಿದು ಹೋಗಲು ಕೆಲವು ಪ್ರಧಾನ ಕಾರಣಗಳು .
*೧* .ಅತಿಯಾದ ಬುದ್ಧಿವಂತಿಕೆ.
೨ .ಚಿಕ್ಕದಾದ ತಪ್ಪುಗಳನ್ನು ಕೂಡ ಭರಿಸುವ ಶಕ್ತಿ ಸಹನೆ ಇಲ್ಲದಿರುವುದು .
೩ .ಎಲ್ಲರೂ ಸಮಾನರು ಎನ್ನುವ ವಿಚಿತ್ರ ಭಾವನೆ ಬೆಳೆಯುತ್ತಿರುವುದು (ಡೆಮಾಕ್ರಸಿ).
೪ .ಮನೆಯ ಸದಸ್ಯರು, ಮಕ್ಕಳು ಎಲ್ಲರೂ ಒಟ್ಟಿಗೆ ಕುಳಿತುಕೊಂಡು ಮಾತನಾಡದೆ ಇರುವುದು.
೫ .ಯಾವಾಗಲೂ ಮನೋರಂಜನೆ ಕಾರ್ಯಕ್ರಮಗಳಲ್ಲಿ ಮುಳುಗಿರುವುದು. ಎಲ್ಲೋ ಇರುವ ಸಿನಿಮಾ ನಟರು ಈ ದಿನ ಬೆಳಿಗ್ಗೆ ಏನು ಮಾಡಿದ್ದಾರೆ ಎಂದು ಹೇಳುವ ಜನರು, ಮನೆಯವರು ಹೇಗಿದ್ದಾರೆ ಯಾವಾಗ ಏನು ಮಾಡುತ್ತಾರೆ ಎಂದು ತಿಳಿದುಕೊಳ್ಳದೆ ಇರುವ ದುಸ್ಥಿತಿ ಬಂದುಬಿಟ್ಟಿದೆ.
೬ .ಚಿಕ್ಕ ವಿಷಯಕ್ಕೆ ಮುನಿಸಿಕೊಂಡು ಹತ್ತಿರದವರನ್ನು ದೂರ ಮಾಡಿಕೊಳ್ಳುತ್ತಿದ್ದಾರೆ .
೭ .ಬೇರೆಯವರ ಕೆಟ್ಟ ಮಾತುಗಳಿಂದ ಇಡೀ ಕುಟುಂಬವೇ ಒಡೆದುಹೋಗುವುದಕ್ಕೆ ಕಾರಣವಾಗುತ್ತಿರುವುದು.
೮ .ಆರ್ಥಿಕ ಸಮಸ್ಯೆಗಳಿಂದಾಗಿ ಮನೆಯ ಹಿರಿಯ ಸದಸ್ಯರು ದೃಢವಾಗಿ, ಬಲವಾಗಿ ಮತ್ತು ಸರಿಯಾಗಿ ಕುಟುಂಬ ನಿರ್ವಹಣೆ ಮಾಡದೆ ಇರುವುದು ಕೂಡ ಕಾರಣವಾಗಿದೆ.
೯ .ಮನೆಯಲ್ಲಿ ಗಂಡ -ಹೆಂಡತಿ (ತಂದೆ-ತಾಯಿ) ಸಣ್ಣಪುಟ್ಟ ವಿಷಯಗಳಿಗೆ ಜಗಳ ಮಾಡಿಕೊಳ್ಳುತ್ತಿರುವುದರಿಂದ ಮನೆಯ ಸದಸ್ಯರಿಗೆ ಆತಂಕ ಉಂಟುಮಾಡಿದೆ.
ಎಲ್ಲ ಕುಟುಂಬಗಳಲ್ಲಿ ಜಗಳ ಹೊಡೆದಾಟ, ಬಡಿದಾಟಗಳನ್ನು ನೋಡಿ ಕುಟುಂಬವೆಂದರೆ ಜಿಗುಪ್ಸೆ ಎನ್ನುತ್ತಿರುವುದು.
ಅನ್ಯೋನ್ಯವಾಗಿ, ಸಹಬಾಳ್ವೆಯಿಂದ, ಪ್ರೀತಿ ಪ್ರೇಮಗಳಿಂದ, ಇರುವ ಕುಟುಂಬಗಳು ಕಂಡುಬರದೇ ಇರುವುದು, ಈ ಕೌಟುಂಬಿಕ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲದಾಗಿದೆ.
ಇದರಿಂದಾಗಿ, ಯುವಜನ ಮದುವೆ ಮಾಡಿಕೊಳ್ಳುವುದೇ ಇರುವುದು. ಮೂವತ್ತೊಂದು ದಾಟಿದರೂ ಮದುವೆಯ ಬಗ್ಗೆ ಮನೆಯಲ್ಲಿ ಪ್ರಸ್ತಾಪ ಮಾಡುವುದೇ ಇಲ್ಲ. ಕಳೆದ 30-40 ವರ್ಷಗಳಿಂದ ಸಂಸಾರವನ್ನು ನಿರ್ವಹಣೆ ಮಾಡಿದ ಕೆಲ ಹಿರಿಯರು ಕುಟುಂಬದ ಜಂಜಾಟಗಳಿಂದ ಬೇಸತ್ತು, ಈ ಕುಟುಂಬ ವ್ಯವಸ್ಥೆಯೇ ಸಾಕಪ್ಪಾ ಸಾಕು, ಎಂದು ನೇರವಾಗಿ ಮಕ್ಕಳಿಗೆ ಹೇಳುತ್ತಿದ್ದಾರೆ.
೧೦ .ಆರ್ಥಿಕತೆಯ ಅವಸರ ಮತ್ತು ವ್ಯತ್ಯಾಸಗಳನ್ನು ಪರಸ್ಪರ ಹೋಲಿಸಿಕೊಳ್ಳುವುದರಿಂದ ಕುಟುಂಬ ವ್ಯವಸ್ಥೆ ನಿಲ್ಲದಾಗಿದೆ.
೧೧ .ಮನುಷ್ಯರಿಗೆ ಬೆಲೆಯೇ ಇಲ್ಲದಾಗಿದೆ. ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಕಂಡರೆ ಬೇಜಾರು ಮಾಡಿಕೊಳ್ಳುತ್ತಿದ್ದಾನೆ .
*೧೨* .ಮಧ್ಯಸ್ಥಿಕೆ ವಹಿಸುವಂತಹ ಹಿರಿಯರು ಇಲ್ಲದಾಗಿದ್ದಾರೆ. ಇದರಿಂದಾಗಿ ಅವರಿಗೆ ಬೇಕಾದಂತೆ ಬದುಕುತ್ತಿದ್ದಾರೆ.
೧೩ .ಕುಟುಂಬ ನಿರ್ವಹಣೆಯೂ ಒಂದು ಕಲೆಯಾಗಿದೆ. ಆ ಕಲೆಯು ಎಲ್ಲರಿಗೂ ಇಲ್ಲದಿರುವುದರಿಂದ ಕೂಡ ಈ ವ್ಯವಸ್ಥೆ ತಲೆಕೆಳಗಾಗಲು ಕಾರಣವಾಗಿದೆ.
೧೪ .ಮಾನವನ ಪ್ರವರ್ತನೆಯು ಕನಿಷ್ಠ ಅವಗಾಹನೆ ಇಲ್ಲದ ದುಸ್ಥಿತಿಗೆ ತಲುಪಿದೆ. ಮಾನವನು ಒರಟಾಗಿ ಪ್ರವರ್ತಿಸುತ್ತಿದ್ದಾನೆ. ನಾನು, ನನ್ನ ಹೆಂಡತಿ/ಗಂಡ ಎನ್ನುವ ಸಿದ್ಧಾಂತ ಹೋಗಿ,“ನಾನೇ ನಾನು” “ನಾನು ನಾನೇ” ಎನ್ನುವ ಪಾಲಿಸಿ ಬಂದಿದೆ.
ಮಕ್ಕಳಿಗೆ ಮದುವೆ ಆಗುತ್ತಿದ್ದಂತೆ ಬೇರೆ ಹಾಕುವುದು ಆಚಾರವಾಗಿ ಬಿಟ್ಟಿದೆ. ಮನೆಯಲ್ಲಿ ಇಟ್ಟುಕೊಳ್ಳಲು ಭಯಪಡುತ್ತಿದ್ದಾರೆ. ಆಮೇಲೆ ನಿಷ್ಟೂರವಾಗುವುದಕ್ಕಿಂತ ಈವಾಗಲೇ ನಿಷ್ಟೂರವಾಗುವುದು ಮೇಲೂ ಎನ್ನುತ್ತಿದ್ದಾರೆ.
ಕೌಟುಂಬಿಕ ಮೌಲ್ಯಗಳು ಕಟ್ಟುಪಾಡುಗಳು ಇನ್ನು ಮುಂದೆ ಇರುವುದಿಲ್ಲ. ಇಷ್ಟ ಬಂದಂತೆ ಬದುಕುವ ದಿನಗಳು ಬಂದಾಗಿದೆ.
ಅಣ್ಣ- ತಮ್ಮ, ಅಣ್ಣ- ತಂಗಿ, ಅಕ್ಕ-ತಮ್ಮ, ಗಂಡ-ಹೆಂಡತಿ ಮಧ್ಯೆ ಬಲವಾದ ಸಂಬಂಧಗಳು ಇಲ್ಲದಾಗಿದೆ.
ಕಥೆಯೇ ಮುಗಿದು ಹೋಗುತ್ತಿದೆ.
ಪ್ರಸ್ತುತ ನಡೆಯುತ್ತಿರುವುದು ನಾಟಕ. ಈ ನಾಟಕ ಕೂಡ ಇನ್ನೂ ಕೆಲವು ದಿನಗಳ ನಂತರ ಪೂರ್ತಿಯಾಗಿ ಇರಲಾರದು.
೧೫ .ಡಿಜಿಟಲ್ ಪ್ಲಾಟ್ ಫಾರಂ ಮೇಲೆ ಇರುವಂತಹ ಸಂಬಂಧ, ಬಾಂಧವ್ಯಗಳೇ ನಿಜವಾದವು ಎಂದು ತಪ್ಪು ಕಲ್ಪನೆಯಲ್ಲಿ ಬದುಕುತ್ತಿರುವ ಜನ. ಯಾರಾದರೂ ತೀರಿಕೊಂಡರೆ ಒಂದು
ಆಕರ್ಷಣೀಯ ಮೆಸೇಜ್ ಇಲ್ಲ, RIP ಎಂದು ಹಾಕಿ ಅಲ್ಲಿಗೆ ಬಿಟ್ಟುಬಿಡುತ್ತಾರೆ. ಶವ ಸಾಗಿಸಲು ಕೂಡ 4 ಜನ ಬರದ ಪರಿಸ್ಥಿತಿ ಇರುತ್ತದೆ.
ಈ ದಿನಗಳಿಗೆ ಎಲ್ಲರೂ, ಎಲ್ಲವೂ ಕಾರಣವಾಗಿದೆ.
ಮಾನವರಿಗೆ ಮಾನವೀಯತೆಯ ಪಾಠ ಹೇಳಿಕೊಡುವಂತಹ ದುಸ್ಥಿತಿ ಬಂದೊದಗಿದೆ. ಸಮಾಜದಲ್ಲಿ ನಂಬಿಕೆ, ನೈತಿಕತೆ ಎನ್ನುವ ಹಸಿರನ್ನು ಮಾನವ ಹೃದಯದಲ್ಲಿ ಬಿತ್ತಬೇಕಾಗಿದೆ. ಛಿದ್ರ ಛಿದ್ರವಾಗುತ್ತಿರುವ ಕೌಟುಂಬಿಕ ಮೌಲ್ಯಗಳನ್ನು, ಕಟ್ಟುಪಾಡುಗಳನ್ನು ಒಟ್ಟುಗೂಡಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ.
ಇಲ್ಲವಾದಲ್ಲಿ, ನಮ್ಮ ಮಕ್ಕಳ ಭವಿಷ್ಯವನ್ನು ನಾವೇ ಹಾಳು ಮಾಡಿದಂತೆ, ಭವ್ಯ ಭಾರತದ ಸಂಸ್ಕೃತಿಯನ್ನು ಅಳಿಸಿ ಹಾಕಿದಂತೆ.
ದಯಮಾಡಿ ಆಲೋಚಿಸಿ. ಪ್ರತಿಯೊಬ್ಬರಿಗೂ ಶೇರ್ ಮಾಡಿ. 🙏🙏