ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಗುರುಗಳ ಉಪದೇಶದಿಂದ ಶಿಷ್ಯನಲ್ಲಿ ಯಾವ ರೀತಿ ಬದಲಾವಣೆಯಾಗುತ್ತದೆ …?

ಗುರುಗಳ ಉಪದೇಶದಿಂದ ಶಿಷ್ಯನಲ್ಲಿ ಯಾವ ರೀತಿ ಬದಲಾವಣೆಯಾಗುತ್ತದೆ…?
ಗುರುಗಳು ನೀಡಿದ ದೀಕ್ಷೆ ಯಂತೆ ಶಿಷ್ಯನು ಶ್ರದ್ಧೆಯಿಂದ ಸಾಧನೆ ಮಾಡಿದಾಗ ಗುರುಗಳ ಕೃಪೆಯಾಗುತ್ತದೆ !
ಗುರು ಶಿಕ್ಷಕನಾಗಿ ಸಾಧಕನಿಗೆ ಶಿಕ್ಷಣ ನೀಡುತ್ತಾರೆ. ಶಿಕ್ಷಣ = ಶ + ಈಕ್ಷಣ. ಶ = ಶಕ್ತಿ, ಈಕ್ಷಣ = ಕರುಣಾಳು ದೃಷ್ಟಿಯಿಂದ ನೋಡುವುದು, ಕೃಪಾಕಟಾಕ್ಷ, ಶಕ್ತಿಪ್ರದಾನ ಮಾಡುವುದು.

ಗುರುಗಳ ಮೂಲಕ ಮಂತ್ರಯುಕ್ತ ಶಕ್ತಿಯು ಶಿಷ್ಯನ ಹೃದಯದೊಳಗೆ ಸ್ಥಾಪಿತಗೊಂಡ ಬಳಿಕ ಅವನ ಸಾವಿರಾರು ಜನ್ಮಗಳ ಪಾಪ, ರಜ-ತಮಾತ್ಮಕ ಶಕ್ತಿಗಳ ಆವರಣ, ಸ್ವಭಾವದೋಷ ಹಾಗೂ ಅಹಂನಿರ್ಮೂಲನೆಯಾಗಿ ಅಂತಃಕರಣವು ಶುದ್ಧವಾಗುತ್ತದೆ !
ಗುರುಗಳ ಉಪದೇಶದಿಂದ ಶಿಷ್ಯನಲ್ಲಿ ಯಾವ ರೀತಿ ಬದಲಾವಣೆಯಾಗುತ್ತದೆ ?

ಅ. ಗುರುಗಳು ನೀಡಿದ ದೀಕ್ಷೆ ಯಂತೆ ಶಿಷ್ಯನು ಶ್ರದ್ಧೆಯಿಂದ ಸಾಧನೆ ಮಾಡಿದಾಗ ಗುರುಗಳ ಕೃಪೆಯಾಗುತ್ತದೆ !

ಪ.ಪೂ. ಪಾಂಡೆ ಮಹಾರಾಜರು
ಗುರು ಶಿಕ್ಷಕನಾಗಿ ಸಾಧಕನಿಗೆ ಶಿಕ್ಷಣ ನೀಡುತ್ತಾರೆ. ಶಿಕ್ಷಣ = ಶ + ಈಕ್ಷಣ. ಶ = ಶಕ್ತಿ, ಈಕ್ಷಣ = ಕರುಣಾಳು ದೃಷ್ಟಿಯಿಂದ ನೋಡುವುದು, ಕೃಪಾಕಟಾಕ್ಷ, ಶಕ್ತಿಪ್ರದಾನ ಮಾಡುವುದು.

ಆ. ಗುರುಗಳ ಮೂಲಕ ಮಂತ್ರಯುಕ್ತ ಶಕ್ತಿಯು ಶಿಷ್ಯನ ಹೃದಯದೊಳಗೆ ಸ್ಥಾಪಿತಗೊಂಡ ಬಳಿಕ ಅವನ ಸಾವಿರಾರು ಜನ್ಮಗಳ ಪಾಪ, ರಜ-ತಮಾತ್ಮಕ ಶಕ್ತಿಗಳ ಆವರಣ, ಸ್ವಭಾವದೋಷ ಹಾಗೂ ಅಹಂನಿರ್ಮೂಲನೆಯಾಗಿ ಅಂತಃಕರಣವು ಶುದ್ಧವಾಗುತ್ತದೆ !

  ಜೀವನಾಮೃತಸಾರ ಪ್ರೀತಿ

ಶಾಸ್ತ್ರ : ಶ+ಅಸ್ತ್ರ. ಶ = ಶಕ್ತಿ; ಅಸ್ತ್ರ = ಮಂತ್ರದಿಂದ ತುಂಬಿರುವ ಶಸ್ತ್ರ, ಇದರಿಂದ ಕ್ಷಾತ್ರತೇಜದ ನಿರ್ಮಾಣವಾಗುತ್ತದೆ. ಶಾಸ್ತ್ರದಿಂದ ಅವನಿಗೆ ಬ್ರಾಹ್ಮತೇಜ ಹಾಗೂ ಕ್ಷಾತ್ರತೇಜ ಇವೆರಡರ ಪ್ರಾಪ್ತಿಯಾಗುತ್ತದೆ, ಹೇಗೆಂದರೆ, ಭಗವಂತನ ಪರಶುರಾಮ ಅವತಾರದಲ್ಲಿ ಕ್ಷಾತ್ರತೇಜ ಹಾಗೂ ಬ್ರಾಹ್ಮತೇಜಗಳೆರಡೂ ಇದ್ದ ಹಾಗೆ. ಅವತಾರಿ ಪುರುಷರಲ್ಲಿ ಕ್ಷಾತ್ರ ಹಾಗೂ ಬ್ರಾಹ್ಮತೇಜ ಪರಿಪೂರ್ಣವಿರುತ್ತದೆ. ಅಸ್ತ್ರಗಳಲ್ಲಿ ಶಸ್ತ್ರವು ಇದೆ ಹಾಗೂ ಮಂತ್ರಶಕ್ತಿ ಕೂಡ ಇದೆ, ಅದೇ ರೀತಿ ಶಾಸ್ತ್ರದಲ್ಲಿ ಅಧಿಕ ಪ್ರಮಾಣದಲ್ಲಿ ಚೈತನ್ಯದ ನಿರ್ಗುಣ ಶಕ್ತಿ ಇದೆ. ಆದ್ದರಿಂದ ಶಾಸ್ತ್ರದಂತೆ ಧರ್ಮಾಚರಣೆ ಮಾಡುವುದು ಮಹತ್ವದ್ದಾಗಿದೆ; ಏಕೆಂದರೆ ಭಗವಂತನ ಸಂಕಲ್ಪದಿಂದ ಯಾವ ಮಧುಕಶಾ (ಪ್ರಾಣ ಹಾಗೂ ಅನ್ನವನ್ನು ಧರಿಸುವ) ಚೈತನ್ಯಮಯ ಶಕ್ತಿಯು ಋಷಿಗಳ ಮುಖದಿಂದ ಸಂಸ್ಕೃತದಂತಹ ದೇವವಾಣಿ ಭಾಷೆಯ ಮೂಲಕ ಹೊರಗೆ ಬಂದು ನಂತರ ದೇವನಾಗರಿಯಿಂದ ಲಿಪಿಬದ್ಧವಾದ ಹಾಗೆ, ಅಂತಹ ಮಂತ್ರಯುಕ್ತ ಶಕ್ತಿಯು ಯಾವಾಗ ಗುರುಗಳ ಮೂಲಕ ಸಾಧಕರ ಹೃದಯದಲ್ಲಿ ಸಂಚರಿಸುತ್ತದೆಯೊ, ಆಗ ಸಾಧಕನಲ್ಲಿರುವ ಕೊಳಕು ಅಂದರೆ ಸಾವಿರಾರು ಜನ್ಮಗಳ ಪಾಪ, ರಜ-ತಮದ, ಅನಿಷ್ಟ ಶಕ್ತಿಯ ಆವರಣ, ಸ್ವಭಾವದೋಷ ಹಾಗೂ ಅಹಂ ನಿರ್ಮೂಲನೆಯಾಗಿ ಅಂತಃಕರಣ ಶುದ್ಧವಾಗುತ್ತದೆ.

  ಯಾರಿಗೆ ಯಾವಾಗ ಏನು ಎಷ್ಟು ಕೊಡಬೇಕೆಂಬುದನ್ನು ಆ ಭಗವಂತನೇ ಬಲ್ಲ

ಗುರುಗಳು ಶಕ್ತಿಪಾತದ ಮೂಲಕ ಶಿಷ್ಯನ ಕುಂಡಲಿನಿಶಕ್ತಿಯನ್ನು ಜಾಗೃತಗೊಳಿಸಿ ಅದನ್ನು ಊರ್ಧ್ವಗಾಮಿನಿ ಮಾಡುತ್ತಾರೆ ಹಾಗೂ ಆ ಮೂಲಕ ಆತನ ಮುಂದಿನ ಪ್ರಗತಿಯಾಗುತ್ತದೆ !
ಆಮೆಗೆ ಸ್ತನವಿಲ್ಲದೆ ಇರುವುದರಿಂದ ಅದು ತನ್ನ ಮರಿಗಳನ್ನು ಕೇವಲ ಅನುಕಂಪದ ದೃಷ್ಟಿಯಿಂದ ನೋಡುತ್ತದೆ. ಇದರಿಂದ ಅದರ ಮರಿಗಳು ತೃಪ್ತಗೊಂಡು ಅವುಗಳ ಪಾಲನೆ ಪೋಷಣೆಯಾಗುತ್ತದೆ. ಅದೇ ರೀತಿ ಗುರು ಶಕ್ತಿಪಾತದ ಮೂಲಕ ಶಿಷ್ಯನ ಕುಂಡಲಿನಿ ಶಕ್ತಿಯನ್ನು ಜಾಗೃತಗೊಳಿಸಿ ಅದನ್ನು ಉರ್ಧ್ವಗಾಮಿನಿ ಆಗಿಸುತ್ತಾರೆ. ಆಗ ಆ ಕುಂಡಲಿನಿ ಶಕ್ತಿಯು ಸಾಧಕರಲ್ಲಿರುವ ಸ್ವಭಾವದೋಷ ಹಾಗೂ ಅಹಂ ಸ್ವರೂಪದಲ್ಲಿರುವ ಮಲವನ್ನು ಶುದ್ಧಗೊಳಿಸಿ, ಅದೇ ರೀತಿ ಅವನ ಸುತ್ತಲಿರುವ ವಾತಾವರಣದಲ್ಲಿನ ಅನಿಷ್ಟ ಶಕ್ತಿಯನ್ನು ಸೋಲಿಸಿ ಅವನ ಸಹಸ್ರಾರದಲ್ಲಿ ಸ್ಥಿರವಾಗುತ್ತದೆ ಹಾಗೂ ಅವನ ಸಾಧನಾ ಮಾರ್ಗವನ್ನು ಸುಗಮಗೊಳಿಸುತ್ತದೆ. ಈ ಮೂಲಕ ಮುಂದಿನ ಪ್ರಗತಿಯಾಗಿ ಅವನ ಜ್ಞಾನ ಜಾಗೃತವಾಗುತ್ತದೆ. ಅವನ ಪ್ರತಿಯೊಂದು ಕರ್ಮವೂ ಭಗವತ್ ಸ್ವರೂಪ ಸಂಧಾನದಿಂದ ಈಶ್ವರೇಚ್ಛೆಯಿಂದ ಆಗುವುದರಿಂದ ನೈಪುಣ್ಯದಿಂದಾಗಿ ಅವನಿಗೆ ಈಶ್ವರಪ್ರಾಪ್ತಿ ಆಗುತ್ತದೆ. ಇದುವೇ ‘ಯಜ್ಞಕರ್ಮ’. ಈ ಮೂಲಕ ಅವನಿಗೆ ಎಲ್ಲೆಡ ಮಂಗಳ ವಾತಾವರಣ ಕಾಣಿಸತೊಡಗುತ್ತದೆ. ಅವನು ಸದಾ ಆನಂದಾವಸ್ಥೆಯಲ್ಲಿರುತ್ತಾನೆ. ಈ ಅವಸ್ಥೆಯಿಂದ ಅವನ ಮೂಲಕ ಸಾವಿರಾರು-ಕೋಟಿ ಪ್ರಾಣಿಮಾತ್ರರ ಕಲ್ಯಾಣವಾಗುತ್ತದೆ. ಇದೇ ಜೀವನದ ಧ್ಯೇಯ.

  ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳ ಗಮನಕ್ಕೆ

ಹಿಂದೂ ಸಂಸ್ಕ್ರತಿಯಲ್ಲಿ ಪ್ರತಿಯೊಂದಕ್ಕೂ ಕಾರಣ ಇದೆ ಸ್ನೇಹಿತರೇ….ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ🙏
!! ಶ್ರೀಕೃಷ್ಣಾರ್ಪಣಮಸ್ತು !!

Leave a Reply

Your email address will not be published. Required fields are marked *

Translate »