ಪೂರ್ವದಲ್ಲಿ ( ಸತ್ಯ ಯುಗದಲ್ಲಿ ) ಎಲ್ಲ ದೇವತೆಗಳು ಭೂಲೋಕದಲ್ಲಿ ಮನುಷ್ಯರ ನಡುವೆಯೇ ಎಲ್ಲರ ಜೊತೆಯಲ್ಲಿಯೇ ಜೀವನ ಮಾಡುತಿದ್ದರು ಹಾಗೂ ಆಗ ಸೃಷ್ಟಿಕರ್ತ ಬ್ರಹ್ಮನಿಗೆ ಮಾತ್ರ ಪೂಜೆ ಆರಾಧನೆ ಆಗಿತ್ತು. ಹಾಗೆಂದು ಬ್ರಹ್ಮಾಂಡಪುರಾಣದಲ್ಲಿ ಉಲ್ಲೇಖವಿದೆ.ಹಾಗೂ ತ್ರೆತಾಯುಗದಲ್ಲಿ ಸೂರ್ಯನ ಆರಾಧನೆ ಇತ್ತು. ಹಾಗೂ ದ್ವಾಪರ ಯುಗದಲ್ಲಿ ವಿಷ್ಣುವಿನ ಆರಾಧನೆಯಾಗಿತ್ತು. ಹಾಗೆ ಈ ಕಲಿಯುಗದಲ್ಲಿ ಶಿವನ ಹಾಗೂ ಶಿವ ಸಂಬಂದಿತ ಜಪ ತಪ ಆರಾಧನೆ ಮಾಡಿದರೆ ಶೀಘ್ರ ಸಿದ್ದಿಯಾಗುವುದು. ಉದಾಹರಣೆಗೆ ಭೈರವ, ವೀರಭದ್ರ, ಮೃತ್ಯುಂಜಯ, ಮೃತ್ಯು ಸಂಜೀವಿನಿ ಇತ್ಯಾದಿ ಯಂತ್ರ, ಮಂತ್ರ, ತಂತ್ರ ಸಾಧನೆ ಬೇಗ ಸಿದ್ದಿಸುವುದು.
- ಪೆಯ್ತಕಾರಿಣಿ ತಂತ್ರ ದಲ್ಲಿ 4 ರಸ್ತೆ ಕೂಡುವ ಸಂಗಮದಲ್ಲಿ ಮದ್ಯಸ್ಥಾನದಲ್ಲಿ ಕುಳಿತು ಜಪ ಮಾಡಿದರೆ ಅದು ವಿಶೇಷ ದಿನದಲ್ಲಿ ಹುಟ್ಟಿದ ದಿನ, ನಕ್ಷತ್ರ, ತಿಥಿ ಹಾಗೂ ಗ್ರಹಣ ಮತ್ತು ಪ್ರದೋಷ ಕಾಲದಲ್ಲಿ ಜಪ ಮಾಡಿದರೆ 10 ರಷ್ಟು ಫಲವಿದೆ.
ಅದರಲ್ಲೂ ರಾತ್ರಿ ಸಮಯದಲ್ಲಿ ಜಪ ಮಾಡಿದರೆ
ವಿಶೇಷ ಶಕ್ತಿ ಹೊಂದಿದೆ.. ಅದರಲ್ಲೂ ಶಿವನ ಹಾಗೂ ಶಿವನ ವಿಭಿನ್ನ ಶಕ್ತಿಯ ಜಪ 4 ರಸ್ತೆ ಸೇರುವ ಸಂಗಮದ ಮಧ್ಯ ಮಾಡಿದರೆ ಶೀಘ್ರ ಸಿದ್ದಿ ಹಾಗೂ ಶೀಘ್ರ ಫಲ ಪ್ರಾಪ್ತಿ ಹಾಗೆಂದು ಶಿವ ರಹಸ್ಯದಲ್ಲಿದೆ.. - ಪೂರ್ವ ದಿಕ್ಕು ಜಪಕ್ಕೆ ಶ್ರೇಷ್ಠ ಹಾಗೂ ಉತ್ತರ ಕೂಡ ಅತ್ಯುತ್ತಮ.ದಕ್ಷಿಣ ಮಾತ್ರ ನಿಷಿದ್ಧ ದಿಕ್ಕು ಎಂದು ಪೆಯ್ತಕಾರಿಣಿ ತಂತ್ರದಲ್ಲಿ ಉಲ್ಲೇಖವಿದೆ.
ಯಾಕೆಂದರೆ ಇದು ಯಮನ ದಿಕ್ಕು ಇದರಿಂದ
ಪಿತೃರ ಕಾಟ ಹೆಚ್ಚಾಗಬಹುದು ಮನಸ್ಸು ಚಂಚಲವಾಗುವುದು.. - ಎಲ್ಲ ವರ್ಣ ದವರಿಗೂ ಒಂದು ದಿಕ್ಕು ಜಪಕ್ಕೆ ಉತ್ತಮ ಎಂದರೆ ಅದು ಉತ್ತರ ದಿಕ್ಕು.. ಹಾಗೂ ಜಿವಂತ ಗುರುಗಳು ಓಡಾಡುತ್ತಿರುವ ಸ್ಥಳ, ಗುರು ಸ್ಥಾನ, ಶಿವ ಲಿಂಗ ಇರುವ ಜಾಗ ಹಾಗೂ ಶಿವ ದೇವಾಲಯ ನದಿ ದಡ ಇವೆಲ್ಲ ಜಪ ಸಾಧನೆಗೆ ಶ್ರೇಷ್ಠ ವೆಂದು ನಾರದಿಯ ತಂತ್ರಸಾರದಲ್ಲಿ ಹೇಳಲಾಗಿದೆ..ಪರ್ವತ, ಬೆಟ್ಟ, ಜಲಾಶಯ ಹಾಗೂ ಗೋ ಶಾಲೆ ಮತ್ತು ದಟ್ಟ ಕಾಡಿನಲ್ಲಿ ಜಪ ಮಾಡಿದರೆ ಮನೆಯಲ್ಲಿ ಜಪ ಮಾಡುವುದಕ್ಕಿಂತ ಲಕ್ಷ ಪಟ್ಟು ಫಲ.. ನದಿ ದಡ ಅದರಲ್ಲೂ ಶಿವನ ದೇವಸ್ಥಾನ
ಹತ್ತಿರ ಇರುವ ನದಿ ದಡದ ಹತ್ತಿರ ಜಪ ಮಾಡಿದರೆ
ಕೋಟಿ ಫಲ ಇರುವುದು…. ಮನೆಯಲ್ಲಿ ಜಪ ಮಾಡಿದರೆ ನೂರರಷ್ಟು ಫಲ.. - ಮಾರ್ಕೆಂಡೇಯ ಋಷಿಗಳ ಪ್ರಕಾರ ಮನೆಯಲ್ಲಿರೋ ತಂದೆ – ತಾಯಿಯ ಮುಂದೆ ಅವರ ಜೊತೆಯಲ್ಲಿ ಅವರು ಓಡಾಡಿದ ಜಾಗದಲ್ಲಿ ಜಪ ಮಾಡಿದರೆ ಅನಂತ ಫಲ ಪ್ರಾಪ್ತಿಯಾಗುವುದು..
- ಗುರುಗಳ ಮುಂದೆಯೇ ಕುಳಿತು ಜಪ ಮಾಡಿದರೆ ಗುರುವಿನ ವಿಶೇಷ ಶಕ್ತಿಯ ಅಲೆಯಿಂದ ನೇರವಾಗಿ ಅವರಲ್ಲಿಯೇ ಸಂಪರ್ಕ ಹೊಂದಿ ವಿಶೇಷ ಶಕ್ತಿಯೊಂದಿಗೆ ಅದರಿಂದ ಸಿಗುವ ಫಲ ಹೇಳತೀರದು..
- ಮನೆಯಲ್ಲಿ ಕುಳಿತು ಜಪ ಮಾಡಿದರೆ ಆ ಜಪದ
ಶಕ್ತಿ 3 ಕಿ. ಮೀ ವರೆಗೆ ವ್ಯಾಪೀಸುವುದು. ನದಿಯ ದಡದಲ್ಲಿ ಕುಳಿತು ಮಾಡಿದ ಜಪದ ಶಕ್ತಿ 10 ಕಿ. ಮೀ ವರೆಗೂ ಹಾಗೂ ನದಿ ದಡದ ಹತ್ತಿರವಿರುವ ಶಿವನ ಸಾನಿಧ್ಯದಲ್ಲಿ ಜಪ ಮಾಡಿದರೆ 16 ಕಿಲೋಮೀಟರ್ ವರೆಗೂ ಅದರ ಶಕ್ತಿ ವ್ಯಾಪಿಸುತ್ತದೆ ಇದರಿಂದ ಆ ವ್ಯಾಪ್ತಿಯಲ್ಲಿ ಬರುವ ಜನರ ರಕ್ಷಣೆಯು ಆಗತ್ತೆ.. ಹಿಗೆ ಮನೆಗೊಬ್ಬ ಸಾಧಕರು ಇದ್ದರೆ ಸುನಾಮಿ, ಭೂಕಂಪಗಳಂತ ಪ್ರಕೃತಿ ವಿಕೋಪಗಳನ್ನು ತಡೆಯಬಹುದು.. ಇದು ಸಮಾಜ ಸೇವೆಯೂ ಆಗುತ್ತದೆ..
ಅಧರ್ಮ ಕಾಮ, ವಂಚನೆ, ಮೋಸ, ದುಶ್ಚಟ, ದುರಹಂಕಾರ ಇದ್ದವರಿಗೆ ಮಂತ್ರ ಜಪ ಸಿದ್ದಿಯಾಗುವುದಿಲ್ಲ… *ವಂದನೆ
🙏🙏🙏🙏🙏🙏🙏🙏
*ಹಿಂದೂ ಸಂಸ್ಕ್ರತಿಯಲ್ಲಿ ಪ್ರತಿಯೊಂದಕ್ಕೂ ಕಾರಣ ಇದೆ ಸ್ನೇಹಿತರೇ….ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ*🙏
*!! ಶ್ರೀಕೃಷ್ಣಾರ್ಪಣಮಸ್ತು !!*