ಕರ್ಮದ ಫಲ – ಸಂತಾನದ ರೂಪದಲ್ಲಿ ಯಾರು ಮರುಜನ್ಮಿಸುತ್ತಾರೆ ?

🌷🌷🌷🌷🌷🌷🌷🌷

👤ಕರ್ಮದ ಫಲ👤

👪 ಸಂತಾನದ ರೂಪದಲ್ಲಿ ಯಾರು ಮರುಜನ್ಮಿಸುತ್ತಾರೆ?
ಪೂರ್ವ ಜನ್ಮದ ಕರ್ಮದ ಫಲವಾಗಿ ಈ ಜನ್ಮದಲ್ಲಿ ತಂದೆ-ತಾಯಿ
ಪತಿ-ಪತ್ನಿ
ಮಕ್ಕಳು,
ಬಂಧು-ಬಾಂಧವರು ಇತ್ಯಾದಿ ಸಂಬಂಧಗಳು  ನಮ್ಮೊಂದಿಗೆ ಬೆಸೆಯುತ್ತವೆ. ಸಂಬಂಧಗಳು ನಮಗೆ ಈ ಜನ್ಮದಲ್ಲೂ ಏನಾದರೂ ಕೊಡುವುದಿರುತ್ತದೆ.ಹಾಗೂ ಪಡೆಯುವುದಿರುತ್ತದೆ.

👪 ಹಾಗೆಯೇ ಪುತ್ರ ಅಥವಾ ಪುತ್ರಿಯ ರೂಪದಲ್ಲಿ ಪೂರ್ವಜನ್ಮದ ಸಂಬಂಧಿಯೇ ಜನ್ಮ ಪಡೆಯುತ್ತಾರೆ.

📖 ಶಾಸ್ತ್ರ ಪುರಾಣದಲ್ಲಿ ಇದನ್ನೇ ನಾಲ್ಕು ಪ್ರಕಾರವಾಗಿ ಹೇಳಲಾಗಿದೆ.

1⃣ ಋಣಾನುಬಂಧ:- 👨 ಪೂರ್ವ ಜನ್ಮದ ಯಾವುದಾದರೂ ಸಂಬಂಧಿಯ  ಋಣದಲ್ಲಿ ನೀವು ಇದ್ದಿದ್ದರೆ ಅವರಿಗೆ ನಿಮ್ಮಿಂದ ‘ಧನ ನಷ್ಟ’ ಆಗಿದ್ದರೆ ಆ ಸಂಬಂಧಿ ನಿಮ್ಮ ಈ ಜನ್ಮದಲ್ಲಿ ನಿಮ್ಮ ಮಗನೋ ಮಗಳೋ ಆಗಿ ಜನ್ಮ ಪಡೆಯುತ್ತಾರೆ. ನಿಮ್ಮ ಗಳಿಕೆ ಆಸ್ತಿಯಲ್ಲಿ  ಅವರು ತನ್ನ ” ಧನ ನಷ್ಟ ” ವನ್ನು ಈ ಜನ್ಮದಲ್ಲಿ ಆಸ್ತಿಯ ರೂಪದಲ್ಲಿ ಮರಳಿ ಪಡೆಯುತ್ತಾರೆ.

  ಸತ್ತ್ವ, ರಜ ಮತ್ತು ತಮ ಗುಣ ಎಂದರೇನು ?

2⃣ ಶತ್ರು ಪುತ್ರ :- 👹 ಪೂರ್ವಜನ್ಮದ ಯಾರೋ ಶತ್ರು ನಿಮ್ಮ ವೈರತ್ವ ಸಾಧಿಸಲು ಪುತ್ರನಾಗಿ ಜನ್ಮಿಸುವನು.ಆ ಪುತ್ರನು ನಿಮ್ಮ ಮನೆಯಲ್ಲಿ ಜಗಳಾಟ, ಹೊಡೆದಾಟ ಮಾಡುತ್ತಾ ತೊಂದರೆಗಳನ್ನು  ನೀಡುತ್ತಾ ತಾನು ಖುಷಿಯಲ್ಲಿರುತ್ತಾನೆ.

3⃣ ಉದಾಸೀನ ಹಾಗೂ ಸೋಮಾರಿ ಪುತ್ರ 🙇
ಈ ರೀತಿಯ ಪುತ್ರನು ತಂದೆತಾಯಿಯ ಸೇವೆ ಮಾಡದೇ ಮನೋಸುಖ  ನೀಡದೇ ಅವರನ್ನ ಅವರವರ ಪಾಲಿಗೆ ಬಿಟ್ಟು ಬಿಡುತ್ತಾನೆ ಹಾಗೂ
ವಿವಾಹದ ನಂತರ ಇವರು ಮಾಡುವ ಕೆಲಸವೇ ಮನೆ ಒಡೆದು ಬೇರೆ ಇರುವುದು.

  ಗುರು ಪೂರ್ಣಿಮೆ ಪೂಜೆ ವಿಧಾನ ಹಾಗೂ ಮಹತ್ವ

4⃣ ಸೇವಕ ಪುತ್ರ 👪 ಪೂರ್ವ ಜನ್ಮದಲ್ಲಿ ನೀವು ಯಾರಿಗಾದರೂ ಉತ್ತಮ ಸೇವೆ ಮಾಡಿದ್ದರೆ ಅವರು ನಿಮ್ಮ ಸೇವೆಯ ಋಣ ತೀರಿಸಲು ನಿಮ್ಮ ಪುತ್ರನಾಗಿ ಜನಿಸುತ್ತಾರೆ.
ತಂದೆ ತಾಯಿಯ ಋಣ ತೀರಿಸುವ ಮಕ್ಕಳಾಗ್ತಾರೆ.

“ಮಾಡಿದ್ದುಣ್ಣೋ  ಮಾರಾಯಾ”
ಎನ್ನುವ ಹಾಗೆ ನಾವು ಎಷ್ಟು ನಮ್ಮ ತಂದೆ ತಾಯಿಯರ ಸೇವೆ ಮಾಡುತ್ತೇವೆಯೋ ಅಷ್ಟು ಬದುಕಿನ ಕೊನೆಯಲ್ಲಿ ನಮ್ಮ ಮಕ್ಕಳು ನಮ್ಮ ಸೇವೆ ಮಾಡುತ್ತಾರೆ.

ಪುತ್ರನು  ಸುಸಂಸ್ಕ್ರತನಾಗಿದ್ದರೆ  ನೀವು ಗಳಿಸಿಟ್ಟು ಹೋಗಬೇಕಿಲ್ಲಾ. ಅವನೇ ಅವನ ಜೀವನವನ್ನು ರೂಪಿಸಿ ಕೊಳ್ಳುವನು . ಪುತ್ರನು ದುಷ್ಟ, ದುರಹಂಕಾರಿ ಆಗಿದ್ದರೆ ನೀವೆಷ್ಟು ಗಳಿಸಿಟ್ಟರೂ ಅವನು ಎಲ್ಲಾ ನಾಶ ಮಾಡಿಬಿಡುವನು.

  ಕೊಲ್ಲಾಪುರ ಮಹಾಲಕ್ಷ್ಮಿ ದೇವಾಲಯದ ಇತಿಹಾಸ ಮತ್ತು ವಾಸ್ತುಶಿಲ್ಪ

ದಾನಧರ್ಮ ಸೇವೆ ಭಗವಂತನ ಸೇವೆಯೆಂದು ತಿಳಿದು ಅವನ ನುಡಿಯಂತೆ ನಡೆದು  ಜೀವನ ಸಾಗಿಸುತ್ತಾ , ಬೇರೆಯವರ ದುಃಖಕ್ಕೆ ಮರುಗಿ ಕೈಲಾದ ಸಹಾಯ ನೀಡಿದರೆ ಆಗಲೇ ಜೀವನ ಸಾರ್ಥಕ….👍

🙏🙏🙏🙏🙏🙏🙏🙏

Leave a Reply

Your email address will not be published. Required fields are marked *

Translate »