ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಶ್ರೀಕೃಷ್ಣನ ನಾಮಜಪ – ಕೃಷ್ಣ ಜನ್ಮಾಷ್ಟಮಿ

ಶ್ರೀಕೃಷ್ಣನ ನಾಮಜಪ

ಕಲಿಯುಗದಲ್ಲಿ ‘ನಾಮಸಾಧನೆ’ ಅಂದರೆ ದೇವರ ನಾಮವನ್ನು ಜಪಿಸುವುದೇ ಉತ್ತಮ ರೀತಿಯ ಸಾಧನೆಯಾಗಿದೆ ಎಂದು ಅನೇಕ ಸಂತಶ್ರೇಷ್ಠರು ಹೇಳಿದ್ದಾರೆ. ಭಗವಂತನ ನಾಮದೊಂದಿಗೆ ಅವನ ರೂಪ, ರಸ, ಗಂಧ ಮತ್ತು ಅವನ ಶಕ್ತಿಯೂ ಇರುತ್ತದೆ. ಭಗವಂತನ ನಾಮವನ್ನು ಜಪಿಸುವಾಗ ಅಥವಾ ಕೇಳುವಾಗ ಈ ತತ್ತ್ವವನ್ನು ಗಮನದಲ್ಲಿ ಇಟ್ಟುಕೊಂಡರೆ ನಾಮಜಪದಿಂದ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದು.

ವಾಸುದೇವ’ ಪದದ ಅರ್ಥ

ಮೊದಲಿಗೆ ‘ಓಂ ನಮೋ ಭಗವತೇ ವಾಸುದೇವಾಯ ।’ ಎಂಬ ಜಪದಲ್ಲಿರುವ ‘ವಾಸುದೇವ’ ಪದದ ಅರ್ಥವನ್ನು ತಿಳಿದುಕೊಳ್ಳೋಣ. ‘ವಾಸುದೇವ’ ಎಂಬುದು ಶ್ರೀಕೃಷ್ಣನ ಹೆಸರು. ಈ ಪದವು ‘ವಾಸು’ ಮತ್ತು ‘ದೇವ್’ ಎಂಬ ಎರಡು ಪದಗಳು ಸೇರಿ ಬಂದಿರುವ ಶಬ್ದ. ಸಂಸ್ಕೃತ ಪದ ‘ವಾಸಃ’ ಎಂದರೆ ಸ್ಥಿತಿ. ಜೀವಸೃಷ್ಟಿಗೆ ಒಂದು ನಿರ್ದಿಷ್ಟ ಸ್ಥಿತಿಯು ಪ್ರಾಪ್ತವಾಗಬೇಕಾದರೆ ಬೇಕಾಗುವ ಆವಶ್ಯಕ ಲಹರಿಗಳನ್ನು ನೀಡುವ ‘ದೇವ’ (ದೇವತೆ) ಅಂದರೆ ವಾಸುದೇವ, ಅಂದರೆ ಶ್ರೀಕೃಷ್ಣ.

  ತೆನಾಲಿ ರಾಮನನ್ನು ಹುಡುಕುವ ಕಥೆ

ನಾಮಜಪಿಸಿಸುವಾಗ ಅದರಲ್ಲಿ ತಾರಕ ಭಾವವು ನಿರ್ಮಾಣವಾಗಲು ಏನು ಮಾಡಬೇಕು?

‘ಓಂ ನಮೋ ಭಗವತೇ ವಾಸುದೇವಾಯ ।’ ಈ ನಾಮಜಪವನ್ನು ತಾರಕ ಭಾವದಿಂದ ಮಾಡಲು ಪ್ರತಿಯೊಂದು ಶಬ್ದದ ಉಚ್ಚಾರವನ್ನು ದೀರ್ಘವಾಗಿ ಮಾಡಬೇಕು. ಯಾವುದೇ ಶಬ್ದದ ಮೇಲೆ ಒತ್ತನ್ನು ನೀಡದೆ, ಮೃದುವಾಗಿ ಉಚ್ಚರಿಸಬೇಕು.

ಇಲ್ಲಿ ನೀಡಿರುವಂತೆ ನೀವು ಕೂಡ ಶಾಸ್ತ್ರಬದ್ಧವಾಗಿ ಶ್ರೀಕೃಷ್ಣನ ನಾಮಜಪವನ್ನು ಮಾಡಿ, ಅದರಿಂದ ನಿಮಗೂ ಶ್ರೀಕೃಷ್ಣನ ಅನುಭೂತಿ ಸಿಗುವಂತಾಗಲಿ ಎಂದು ಶ್ರೀಕೃಷ್ಣನ ಚರಣಗಳಲ್ಲಿ ಪ್ರಾರ್ಥನೆ.

(ದೇವತೆಯ ತಾರಕ ರೂಪಕ್ಕೆ ಸಂಬಂಧಪಡುವ ನಾಮಜಪಕ್ಕೆ ತಾರಕ ನಾಮಜಪ ಮತ್ತು ದೇವತೆಯ ಮಾರಕ ರೂಪಕ್ಕೆ ಸಂಬಂಧಪಡುವ ನಾಮಜಪಕ್ಕೆ ಮಾರಕ ನಾಮಜಪ ಎಂದು ಹೇಳುತ್ತಾರೆ.

  ನಿತ್ಯ ಪಠನಾ ಶ್ಲೋಕಗಳು

ಶ್ರೀಕೃಷ್ಣತತ್ತ್ವದ ಹೆಚ್ಚಚ್ಚು ಲಾಭಮಾಡಿಕೊಳ್ಳಿ!

ಶ್ರೀಕೃಷ್ಣ ಜನ್ಮಾಷ್ಟಮಿಯಂದು ಶ್ರೀಕೃಷ್ಣತತ್ತ್ವವು ಇತರ ದಿನಗಳ ತುಲನೆಯಲ್ಲಿ ಹೆಚ್ಚು ಪ್ರಮಾಣದಲ್ಲಿ ಅಂದರೆ ೧ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಆದುದರಿಂದ ಶ್ರೀಕೃಷ್ಣತತ್ತ್ವದ ಲಾಭವನ್ನು ಆದಷ್ಟು ಹೆಚ್ಚು ಪಡೆದುಕೊಳ್ಳಲು ಈ ದಿನದಂದು || ಓಂ ನಮೋ ಭಗವತೇ ವಾಸುದೇವಾಯ || ಎಂಬ ನಾಮಜಪವನ್ನು ಆದಷ್ಟು ಹೆಚ್ಚು ಮಾಡಬೇಕು.


ಹಿಂದೂ ಸಂಸ್ಕ್ರತಿಯಲ್ಲಿ ಪ್ರತಿಯೊಂದಕ್ಕೂ ಕಾರಣ ಇದೆ ಸ್ನೇಹಿತರೇ….ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ🙏
!! ಶ್ರೀಕೃಷ್ಣಾರ್ಪಣಮಸ್ತು !!

Leave a Reply

Your email address will not be published. Required fields are marked *

Translate »

You cannot copy content of this page