ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಬದುಕಿಗೊಂದು ಅನುಭವಾಮೃತ

🦋ಬದುಕಿಗೊಂದು ಅನುಭವಾಮೃತ 🦋

೧. ಕಾಲಿಗೆ ಆದ ಘಾಯ ಹೇಗೆ ನಡೆಯ ಬೇಕೆಂದು ತಿಳಿಸುತ್ತದೆ.
ಮನಸ್ಸಿಗೆ ಆದ ಘಾಯ ಹೇಗೆ ಬದುಕಬೇಕೆಂದು ಕಲಿಸುತ್ತದೆ.
೨. ನೀವು ಕಣ್ಣಾರೆ ಕಂಡದ್ದನ್ನೆಲ್ಲಾ ಸತ್ಯ ಎಂದು ನಂಬ ಬೇಡಿ;
ಏಕೆಂದರೆ ಒಂದೊಮ್ಮೆ ದೂರದಿಂದ ಕಂಡಾಗ ಉಪ್ಪು ಕೂಡ
ಸಕ್ಕರೆಯ ಹಾಗೆ ಕಾಣುತ್ತದೆ.
೩. ನಮ್ಮ ನೋವು ನಮಗೆ ಗೊತ್ತಾದರೆ ನಾವು ಬದುಕಿದ್ದೇವೆ
ಎಂದು ಅರ್ಥ. ಪರರ ನೋವು ನಮಗೆ ಗೊತ್ತಾದರೆ ನಾವು
ಮನುಷ್ಯರಾಗಿದ್ದೇವೆ ಎಂದು ಅರ್ಥ.
೪. ಹೆಂಡದ ಅಮಲು ನಡಿಗೆಯನ್ನು ಮಾತ್ರ ತಪ್ಪಿಸುತ್ತದೆ.
ಆದರೆ ಹಣದ ಅಮಲು ನಡವಳಿಕೆಯನ್ನೇ ತಪ್ಪಿಸುತ್ತದೆ.
೫. ಚಿಂತೆಗಳು ತಲೆಯ ಸುತ್ತ ಹಾರಾಡುವ ಹಕ್ಕಿಗಳಿದ್ದಂತೆ;
ಹಾರಾಡಲಿ, ಆದರೆ ಅಲ್ಲಿಯೇ ಗೂಡು ಕಟ್ಟಲು ಅವಕಾಶ
ನೀಡಬೇಡಿ.
೬. ಕೊಟ್ಟದ್ದನ್ನು ನೆನೆಯದೆ ಮತ್ತು ಪಡೆದದ್ದನ್ನು ಮರೆಯದೆ
ಇರುವವರೇ ಜಗತ್ತಿನಲ್ಲಿ ಧನ್ಯರು.
೭. ಪ್ರತಿಯೊಂದರ ಬೆಲೆ ತಿಳಿಯುವುದು ಎರಡು ಬಾರಿ ಮಾತ್ರ.
ಒಮ್ಮೆ ಅದನ್ನು ಪಡೆಯುವ ಮೊದಲು; ಇನ್ನೊಮ್ಮೆ ಅದನ್ನು
ಕಳೆದುಕೊಂಡಾಗ.
೮. ನಮ್ಮಲ್ಲಿ ನಾವು ಸತ್ಯ ಹೇಳಿಕೊಳ್ಳುವುದು ಸತ್ಯ ನಿಷ್ಠೆ. ಬೇರೆಯವರಲ್ಲಿ
ಸತ್ಯ ಹೇಳುವುದು ಪ್ರಾಮಾಣಿಕತೆ.
೯. ಅರಮನೆ ಕಟ್ಟುವಂತ ಸಿರಿತನ ಇಲ್ಲದಿದ್ದರೇನಂತೆ, ಕಣ್ಣೀರು ಒರೆಸುವಂತ
ಗೆಳೆತನ ಇದ್ದಾರೆ ಸಾಕು.
೧೦. ಜಗತ್ತು ನಮ್ಮನ್ನು ನೋಡಲಿ ಎಂಬ ಆಸೆಯಿಂದ ಪರ್ವತ ಏರುವ ಬದಲು
ನಾವು ಜಗತ್ತನ್ನು ನೋಡುವ ಇಚ್ಛೆಯಿಂದ ಹತ್ತಬೇಕು .
೧೧. ನಗದು ಇಲ್ಲದವರು ಬಡವರಲ್ಲ…. ನಗದೇ ಬಾಳುವವರು ಖಂಡಿತ ಬಡವರೇ.
೧೨. ನಂಬುವವರು ಕಲ್ಲುಗಳಲ್ಲೂ ದೇವರನ್ನು ಹುಡುಕಿಕೊಂಡರೆ, ನಂಬದವರ
ಮನಸ್ಸೇ ಕಲ್ಲಾಗಿರುತ್ತದೆ.
೧೩. ಬೆಟ್ಟ ಇಂದಿಗೂ ನಮ್ಮ ಮುಂದೆ ಬಾಗುವುದಿಲ್ಲ. ಆದರೆ ಕಷ್ಟಪಟ್ಟು ಏರಿದರೆ
ಅದು ನಮ್ಮ ಪಾದದ ಕೆಳಗೆ ಇರುತ್ತದೆ. ಗುರಿ ಮುಟ್ಟುವ ತನಕ ನಿಲ್ಲದಿರಿ. ನಡೆಯುತ್ತಿರಿ.
೧೪.ಬರಿ ಹಣ ಇರುವವನು ಆಳಿಗೆ ಮಾತ್ರ ಯಜಮಾನ. ಆದರೆ ಗುಣ ಇರುವವನು
ಮನುಷ್ಯ ಕುಲಕ್ಕೆ ಯಜಮಾನ.
೧೫. ಏನಿದ್ದರೇನಂತೆ ?
ಹಾಸಿಗೆ ಕೊಳ್ಳಬಹುದು —-ನಿದ್ರೆ ಕೊಳ್ಳಲಾಗದು.
ಮನೆ ಕೊಳ್ಳಬಹುದು ——–ನೆಮ್ಮದಿ ಕೊಳ್ಳಲಾಗದು.
ಪುಸ್ತಕ ಕೊಳ್ಳಬಹುದು ——-ವಿದ್ಯೆ ಕೊಳ್ಳಲಾಗದು.
ವಿದ್ಯೆ ಇದ್ದರೇನಂತೆ ——-ವಿವೇಕ ಇಲ್ಲದಿದ್ದರೆ ?
ಹಣ ಇದ್ದರೇನಂತೆ —–ಗುಣ ಇಲ್ಲದಿದ್ದರೆ?
ಪ್ರಾಣ ಇದ್ದರೇನಂತೆ —–ತ್ರಾಣ ಇಲ್ಲದಿದ್ದರೆ ?
ಗುರು ಇದ್ದರೇನಂತೆ——–ಅರಿವೇ ಇಲ್ಲದಿದ್ದರೆ ?
ರೂಪ ಇದ್ದರೇನಂತೆ ——ಮಾನ ಇಲ್ಲದಿದ್ದರೆ ?
ಸುಖ ಇದ್ದರೇನಂತೆ ——-ಶಾಂತಿ ಇಲ್ಲದಿದ್ದರೆ ?
ಏನಿದ್ದರೇನಂತೆ————ಮಾನವೀಯತೆ ಇಲ್ಲದಿದ್ದರೆ ?

Leave a Reply

Your email address will not be published. Required fields are marked *

Translate »