ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ತಾಳಿ ಮಾಂಗಲ್ಯವು ಬಂಗಾರದ್ದೇ ಇರಬೇಕೇ ?

ಮಾಂಗಲ್ಯವು ಬಂಗಾರದ್ದೇ ಇರಬೇಕೇ..?

ಒಂದು ಸಾವಿರ ವರ್ಷಗಳ ಕೆಳಗೆ ನಮ್ಮಲ್ಲಿ ಮಾಂಗಲ್ಯವಿರಲಿಲ್ಲ ಎಂದು ಕೇಳಿದರೆ ನೀವು ಆಶ್ಚರ್ಯಚಕಿತರಾಗಬಹುದು. ಮಾಂಗಲ್ಯಧಾರಣಾ ಸಂಪ್ರದಾಯವು ಬಹುತೇಕ ದಕ್ಷಿಣ ಭಾರತದ್ದು.

ಈಗಲೂ ಉತ್ತರ ಭಾರತದವರಲ್ಲಿ ಅಷ್ಟಾಗಿ ಮಾಂಗಲ್ಯ ಧರಿಸುವ ಪದ್ಧತಿಯಿಲ್ಲ.

ಮಾಂಗಲ್ಯಂ ತಂತುನಾನೇನ ಮಮಜೀವನಹೇತುನಾ
ಕಂಠೇ ಭದ್ನಾಮಿ ಸುಭಗೇ ತ್ವಂಜೀವ ಶರದಶ್ಯತಂ॥

ಎನ್ನುವ ಶ್ಲೋಕ ಮಂತ್ರವು ಪೂರ್ವಕಾಲದಲ್ಲಿರಲಿಲ್ಲ. ಕನ್ಯಾದಾನವಿತ್ತು! ಅಗ್ನಿಸಾಕ್ಷಿಯಿತ್ತು! ಸಪ್ತಪದಿಯಿತ್ತು! ಮಾಂಗಲ್ಯಧಾರಣೆಯಿರಲಿಲ್ಲ. ಹೌದು! ಇದು ಸತ್ಯ, ರಾಮಾಯಣ ಕಾಲದಲ್ಲಿ ಈ ಸಂಪ್ರದಾಯವು ಇರಲಿಲ್ಲ. ಮಹಾಭಾರತದ ಕಾಲದಲ್ಲಿಯೂ ಇರುವ ಹಾಗೆ ಕಾಣಿಸುತ್ತಿಲ್ಲ, ೨೩೦೦ ವರ್ಷಗಳಿಂದೀಚೆಗೆ ಪ್ರಾರಂಭವಾಗಿ ಅನ್ಯಮತದವರ ಆಕ್ರಮಣ ಕಾಲದಲ್ಲಿ ಸ್ಥಿರಗೊಂಡಿರಬೇಕೆಂದು ಪರಿಶೋಧಕರ ಅಭಿಪ್ರಾಯವಾಗಿದೆ.

  ನಮಸ್ಕಾರ ಪ್ರಾಮುಖ್ಯತೆ

ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಈಗಲೂ ಮಾಂಗಲ್ಯ ಪದ್ಧತಿಯಿಲ್ಲ, ಅವರಿಗೆ ಬೈತಲೆಯಲ್ಲಿನ ಸಿಂಧೂರವೇ ಮಾಂಗಲ್ಯವಾಗಿದೆ.

ಬಂಗಾಳ ರಾಜ್ಯದವರು ಕೈಬಳೆಗಳನ್ನೇ ಮಾಂಗಲ್ಯವಾಗಿ ಭಾವಿಸುತ್ತಾರೆ. ಮಾಂಗಲ್ಯವಾಗಲೀ ಕರಿಮಣಿಗಳಾಗಲೀ, ಬೈತಲೆಯ ಸಿಂಧೂರವಾಗಲೀ ಯಾಕಿರಬೇಕೆಂದರೆ ಪರಪುರುಷರಿಗೆ ಇವಳು “ವಿವಾಹಿತಳು” ಎಂದು ತಿಳಿಯುವುದಕ್ಕಾಗಿಯೇ! ಮಾಂಗಲ್ಯದ ಪರಮೋದ್ದೇಶ ಇಷ್ಟೇಯಾದರೂ ಕಾಲಕ್ರಮದಲ್ಲಿ ಅಪೂರ್ವ ಮಹತ್ವವನ್ನು ಪಡೆದುಕೊಂಡಿದೆ.

ಈ ತಾಳಿಯ ಪ್ರಾರಂಭವು ಮೊದಲು ತಮಿಳರ ಸಂಪ್ರದಾಯದಲ್ಲಿ ಪ್ರಾರಂಭವಾಗಿದೆ. ತಾಳೆಮರದ ಎಲೆಯನ್ನು ಚತುರಸ್ರಾಕಾರವಾಗಿಯೂ, ತ್ರಿಕೋನಾಕಾರದಲ್ಲಿಯೂ ತಯಾರಿಸಿ ವರನ ಕೈಯಿಂದ ವಧುವಿನ ಕೊರಳಲ್ಲಿ ಹಾಕಿಸುತ್ತಿದ್ದರು. ಹದಿನಾರು ದಿನಗಳವರೆಗೂ ಅದನ್ನು ತೆಗೆಯಬಾರದು. ಹೀಗೆ ಮಾಡುವುದರಿಂದ ವಧುವಿನ ಗ್ರಹದೋಷಗಳು ದೂರವಾಗುತ್ತವೆಂಬ ನಂಬಿಕೆಯಿತ್ತು. ಈ ರೀತಿಯಿಂದ ಪ್ರಾರಂಭವಾದ ತಾಳಿ ತದನಂತರ ಲೋಹದ ರೂಪವನ್ನು ಪಡೆದುಕೊಂಡಿತ್ತು. ತಾಳಿಗೆ ಶಾಶ್ವತತ್ವವನ್ನು ಕಲ್ಪಿಸುವುದಕ್ಕಾಗಿ ಬಂಗಾರವನ್ನು ಉಪಯೋಗಿಸಿ ಮಾಡುವ ಸಂಪ್ರದಾಯವು ಬಂತು. ಇದು ಹನ್ನೊಂದನೆಯ ಶತಮಾನದಿಂದ ದಕ್ಷಿಣಭಾರತದಲ್ಲಿ ಪ್ರಾರಂಭಗೊಂಡಿರಬಹುದು.

  ಹಿರಿಯರ ಅನುಭವದ ಕಿವಿ ಮಾತು

ತಾಳಿ, ಬಂಗಾರದ್ದೇ ಇರಬೇಕೆಂಬ ನಿಯಮವಿಲ್ಲವಾದರೂ ವಿವಾಹಸಮಯದಲ್ಲಿ ಕನ್ಯೆಯನ್ನು ಧಾರೆಯೆರಿಯುವಾಗ

‘ಕನ್ಯಾಂ ಕನಕ ಸಂಪನ್ನಾಂ ಕನಕಾ ಭರಣೈರ್ಯುತಾಂ ದಾಸ್ಯಾಮಿತುಭ್ಯಂ ದೇವ! ಸ್ವರ್ಗ ಲೋಕ ಜಿಗೀಷಯಾ”

ಎಂದು ಕನ್ಯಾಪಿತೃವಿನಿಂದ ಈ ಮಂತ್ರವನ್ನು ಹೇಳಿಸುತ್ತಾರೆ. “ಪರಮೇಶ್ವರ ಸ್ವರೂಪನಾದ ವರಕುಮಾರನೇ ! ಕನಕಾಭರಣಗಳನ್ನು ಧರಿಸಿರುವ ಕನ್ಯೆಯಾಗಿರುವಂಥಾ ನನ್ನ ಮಗಳನ್ನು ನಿನಗೆ ಧಾರೆ ಎರೆಯುತ್ತಿದ್ದೇನೆ. ಈ ಪುಣ್ಯಕಾರ್ಯದಿಂದ ನನಗೆ ಸ್ವರ್ಗ ಲೋಕಪ್ರಾಪ್ತಿಯಾಗಲೀ! ” ಎಂಬರ್ಥದ ಈ ಮಂತ್ರದಿಂದ ಕನ್ಯಾದಾನವು ನಡೆಯುತ್ತದೆ. ಅಂದಾಗ ತಾಳಿ ಬಂಗಾರದ್ದೇ ಇದ್ದರೆ ಚೆನ್ನಾಗಿರುತ್ತದೆಯೆಲ್ಲವೇ!?

ಮದುವೆಯ ಬೆಸುಗೆಗೆ ತಾಳಿ ಬಂಗಾರದ್ದಿರದಿದ್ದರೂ ಚಿಂತೆಯಿಲ್ಲ. ಮನಸ್ಸುಗಳು ಮಾತ್ರ ಖಂಡಿತವಾಗಿಯೂ ಬಂಗಾರದಂತಿದ್ದರೇ ಬಂಧನ ಶಾಶ್ವತವಾಗಿರುತ್ತದೆ. ನೀವೇನಂತೀರಿ..!?

  ಜೀವನಾಮೃತಸಾರ ಪ್ರೀತಿ

Leave a Reply

Your email address will not be published. Required fields are marked *

Translate »