ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಅಪ್ಪ ಏಕೋ ಹಿಂದೆಯೇ ಉಳಿದು ಬಿಟ್ಟ!!! – ಕವನ

*ಅಪ್ಪ ಏಕೋ ಹಿಂದೆಯೇ ಉಳಿದು ಬಿಟ್ಟ!!!*

ಹೆರುವ ವರೆಗೂ ಹೊರುವ ಅಮ್ಮ
ಹರೆಯದ ವರೆಗೂ ಹೊರುವ ಅಪ್ಪ
ಇಬ್ಬರ ಪ್ರೀತಿ ಸಮಾನಾದರೂ
ಅಪ್ಪ ಏಕೋ ಹಿಂದೆಯೇ ಉಳಿದು ಬಿಟ್ಟ!!!

ಕುಟುಂಬಕ್ಕಾಗಿ ಸಂಬಳವಿಲ್ಲದೇ
ದುಡಿಯುವ ಅಮ್ಮ
ದುಡಿದ ಸಂಬಳವೆಲ್ಲ ಕುಟುಂಬಕ್ಕೆ
ನೀಡುವ ಅಪ್ಪ
ಇಬ್ಬರ ಶ್ರಮ ಸಮಾನಾದರೂ
ಅಪ್ಪ ಏಕೋ ಹಿಂದೆಯೇ ಉಳಿದು ಬಿಟ್ಟ!!!

ಕೇಳಿದ್ದನ್ನು ಮಾಡಿ ಉಣಿಸುವ ಅಮ್ಮ
ಕೇಳಿದ್ದನ್ನು ಇಲ್ಲ ಅನ್ನದೆ ಕೊಡಿಸುವ ಅಪ್ಪ
ಇಬ್ಬರ ಪ್ರೀತಿ ಒಂದೇ
ಆದರೂ
ಅಪ್ಪ ಏಕೋ ತುಂಬಾ ಹಿಂದೆಯೇ ಉಳಿದು ಬಿಟ್ಟ!!!

  ಪೂಜೆಯಲ್ಲಿ ಆರತಿ ಮಾಡುವ ಸರಿಯಾದ ವಿಧಿ - ವಿಧಾನ

ಎಡವಿ ಬಿದ್ದಾಗ ಬರುವ ಕೂಗು ಅಮ್ಮ.
ಅವಶ್ಯಕತೆ ಇದ್ದಾಗ ಮಾತ್ರ ನೆನಪಾಗುವ ಅಪ್ಪ,
ಇಬ್ಬರ ಪ್ರೀತಿ ಒಂದೇ
ಆದರೂ
ಮಕ್ಕಳ ಪ್ರೀತಿ ಪಡೆಯಲು
ಹಿಂದಿನಿಂದಲೂ
ಅಪ್ಪ ತುಂಬಾ ಹಿಂದೆಯೇ ಉಳಿದು ಬಿಟ್ಟ!!!

ಕಪಾಟಿನ ತುಂಬಾ ಅಮ್ಮ, ಮಕ್ಕಳ ಬಣ್ಣದ ಬಟ್ಟೆಗಳು, ಅಪ್ಪನ ನಾಲ್ಕಾರು ಬಟ್ಟೆಗಳಿಗೆ ಮೂಲೆಯಲ್ಲಿ ಒಂದಿಷ್ಟು ಜಾಗ,
ತನ್ನ ಬಗ್ಗೆ ತಾನೆಂದೂ ಯೋಚಿಸದ ಅಪ್ಪ,
ನಮ್ಮ ಯೋಚನೆಗೆ ಸಿಗದಷ್ಟು ಹಿಂದೆಯೇ ಉಳಿದು ಬಿಟ್ಟ!!!

ಅಮ್ಮನ ನೋವು ಕಣ್ಣೀರಾಗಿ ಹರಿಯಿತು,
ಅಪ್ಪನ ನೋವು ಮನದಲ್ಲೇ ಹುದುಗಿತು.
ಅಮ್ಮನ ನೋವು ಕಂಡ ನಮಗೆ ಅಪ್ಪನ ನೋವು ಕಾಣಲೇ ಇಲ್ಲ. ಇಬ್ಬರ ನೋವು ಒಂದೇ
ಆದರೂ ಅಪ್ಪ ದುಃಖ ನುಂಗಿ ತುಂಬಾ ಹಿಂದೆಯೇ ಉಳಿದು ಬಿಟ್ಟ!!!

  ಅಮ್ಮ ಎನ್ನುವ ಅಡುಗೆ ಮನೆ ಕಲಾವಿದ

ಅಮ್ಮನಿಗೆ ಒಂದಿಷ್ಟು ಬಂಗಾರದ ಒಡವೆ.
ಅಪ್ಪನಿಗೆ ಒಂದು ಬಂಗಾರದಂಚಿನ ಪಂಚೆ. ಕುಟುಂಬಕ್ಕೆ ಎಷ್ಟೇ ಮಾಡಿದರೂ
ಅವರ ಮೆಚ್ಚುಗೆ ಪಡೆಯುವಲ್ಲಿ ಅಪ್ಪ ತುಂಬಾ ಹಿಂದೆಯೇ ಉಳಿದು ಬಿಟ್ಟ!!!

ಮುಪ್ಪಿನಲ್ಲಿ ಮನೆ ಕೆಲಸಗಳಿಗೆ ನೆರವಾಗುವ ಅಮ್ಮ, ಮಾತುಗಳಿಗೆ ಬೆಲೆಯೇ ಇಲ್ಲದಿದ್ದರೂ ಬೆಲೆಯುಳ್ಳ ಮಾತು ಹೇಳುವ ಅಪ್ಪ, ಇಬ್ಬರೂ ಕಾಳಜಿ ಮಾಡಿದರೂ, ಪ್ರೀತಿ ಪಡೆಯುವಲ್ಲಿ
ಅಪ್ಪ ತುಂಬಾ ಹಿಂದೆಯೇ ಉಳಿದು ಬಿಟ್ಟ!!!

ಅಪ್ಪ ಹೀಗೆ ಹಿಂದೆ ಉಳಿಯಲು ಕಾರಣ ಅವರೇ ನಮ್ಮೆಲ್ಲರ ಬೆನ್ನೆಲುಬು. ಬೆನ್ನೆಲುಬು ಹಿಂದಿರುವುದರಿಂದಲೇ ನಾವೆಲ್ಲರೂ ಬೆಟ್ಟದ ಹಾಗೆ ನಿಂತಿರುವುದು.
ಅದರಿಂದಲೇ ಏನೋ ಅಪ್ಪ ಹಿಂದೆಯೇ ಉಳಿದುಬಿಟ್ಟ!!!

Leave a Reply

Your email address will not be published. Required fields are marked *

Translate »