ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಮುತ್ತೈದೆ ಎಂದರೆ ಯಾರು ?

ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।

ವೆಂಕಟಾಚಲ ದೇಶಿಕಂ ।।

ಮುತ್ತೈದೆ ಎಂದರೆ ಯಾರು …?
ಗುರುನಾಥರು ಸ್ತ್ರೀ ಎಂಬ ಪದಕ್ಕೆ ಹಾಗೂ ಸ್ತ್ರೀಯರಿಗೆ ತುಂಬಾ ಗೌರವ ಕೊಡುತ್ತಿದ್ದರು. ಸ್ತ್ರೀ ಎಂದರೆ ಅತ್ಯಂತ ತ್ಯಾಗಮಯಿ.ಅವಳು 24 ಜವಾಬ್ದಾರಿ ಹೊತ್ತು ಈ ಧರೆಗೆ ಬಂದಿರುತ್ತಾಳೆ.( ಮಗಳಾಗಿ, ಹೆಂಡತಿಯಾಗಿ, ತಾಯಾಗಿ ,ಅಕ್ಕನಾಗಿ, ಹಿಂದಿನ ಐದನೆಯ ತಲೆಯಾಗಿದ್ದ ಹಿರಿಯಳಾಗಿ ಇತ್ಯಾದಿ ) ಇವಳು ಯಾವ ಪೂಜೆ- ಪುನಸ್ಕಾರ ಇಲ್ಲದೆ ಭವವನ್ನು ದಾಟಿಬಿಡಬಹುದು.ಆದರೆ ತನ್ನ ಸಂಸಾರವನ್ನುಳಿದು ಬೇರೆ ಯಾವ ವಿಚಾರಕ್ಕೂ ಹೋಗಕೂಡದು.ಗಂಡ ಮಾಡಿದ ಪ್ರತೀ ಪುಣ್ಯದ ಕೆಲಸದಲ್ಲಿ ಅರ್ಧ ಪುಣ್ಯದ ಭಾಗ ಹೆಂಡತಿಗೆ ಸೇರುತ್ತದೆ.ಆದರೆ ಅವಳ ಪುಣ್ಯದಲ್ಲಿ ಅರ್ಧ ಗಂಡನಿಗೆ ಸೇರುವ ಬದಲು ಅವಳು ಮಾಡಿದ ಪಾಪಕರ್ಮದಲ್ಲಿ ಅದರ ಅರ್ಧಭಾಗ ಗಂಡನಿಗೆ ಸೇರುತ್ತದೆ.ಅದಕ್ಕೇ ಹೆಂಡ್ತಿ ಕೆಟ್ರೆ ಗಂಡನ್ನ, ಪ್ರಜೆ ಕೆಟ್ರೆ ರಾಜನ್ನ, ಶಿಷ್ಯ ಕೆಟ್ರೆ ಗುರುವನ್ನು ಬೈಯುವರು ಎಂದು ಹೇಳುತ್ತಿದ್ದರು.

  ಪ್ರಜಾಕೀಯ - POEM

ಒಮ್ಮೆ ಗುರುಬಂಧುವೊಬ್ಬರು ಗುರುವೇ ನಾಳೆ ನಮ್ಮ ಮಗನ ಮದುವೆ ನಿಶ್ಚಿತಾರ್ಥದ ಪ್ರಯುಕ್ತ ಮುತ್ತೈದೆಯರಿಗೆ ಪೂಜೆ ಇಟ್ಟುಕೊಂಡಿದ್ದೇವೆ ಎನ್ನಲು,ಗುರುನಾಥರು ಅಲ್ಲಿದ್ದ ಸ್ತ್ರೀಯರನ್ನೆಲ್ಲ ಅರಿಸಿನ ಕುಂಕುಮವಿತ್ತು ಅಮಂತ್ರಣಕ್ಕೆ ಬರಲು ಕರೆ ಎಂದರು. ಅದರಂತೆ ಮಾಡುತ್ತಿರುವಾಗ ಅಲ್ಲಿದ್ದ ಗುರುಬಂಧುಗಳನ್ನು ಗುರುನಾಥರು ಮುತ್ತೈದೆ ಎಂದರೆ ಯಾರು ಎಂದು ಪ್ರಶ್ನಿಸಿದರು.

ಆಗ ಅವರು ಕುಂಕುಮ ಇಟ್ಟವರು,ಕಾಲುಂಗುರ ಹಾಕಿದವರು ಮುಂತಾಗಿ ಹೇಳಿದಾಗ ಗುರುಗಳು ,ಕೇವಲ ಕುಂಕುಮ ಇಟ್ಟವರು, ಕಾಲುಂಗುರ ಹಾಕಿದವರು ಮುತ್ತೈದೆಯಾಗಿದ್ದಲ್ಲಿ,ಮಹಾತ್ಮರು ಯಾಕೆ ಆ ಗರ್ಭದಲ್ಲಿ ಹುಟ್ಟುವುದಿಲ್ಲ? ಹಾಗೆಯೇ ಮಹಾತ್ಮರಿಗೆ ಜನ್ಮವಿತ್ತ ಅದೆಷ್ಟೋ ತಾಯಂದಿರಿಗೆ ನೀವು ಹೊಗಳಿಕೊಳ್ಳುವ ಮುತ್ತೈದೆ ಸಾವು ಏಕೆ ಬರಲಿಲ್ಲ ಎಂದು ಮುಂದುವರಿಸಿ ನೋಡಿ ... ನಯ, ವಿನಯ ಅನುಕಂಪ,ತ್ಯಾಗ, ಲಜ್ಜೆ  ಇವೇ ಐದು ಮುತ್ತುಗಳು. ಅದನ್ನು ಅಂದರೆ ಆ ಗುಣವನ್ನು ಹೊಂದಿದಾಕೆ ಮುತ್ತೈದೆ. ಅಂಥವರ ಗರ್ಭದಲ್ಲಿ ಹಿರಣ್ಯಗರ್ಭ ಪ್ರಾಪ್ತವಾಗುತ್ತದೆ.ಹೆಣ್ಣು ಚಂಚಲೆ. ಅವಳ ಚಂಚಲತೆಯನ್ನು ಕಡಿಮೆ ಮಾಡಲು ಋಷಿ- ಮುನಿಗಳು ತಿಲಕದಿಂದ ( ಕುಂಕುಮ ಇಟ್ಟು ) ಅಗ್ನಿಬಂಧನ,ಮೂಗುತಿ ಹಾಕಿ ವಾಯುಬಂಧನ ,ಕಿವಿ ಚುಚ್ಚಿ ಜಲ ತತ್ವದ ಬಂಧನ ,ತಲೆಯಲ್ಲಿ ಬೈತಲೆ ತೆಗೆದು ಬಾಚಿ ಆಕಾಶ ತತ್ವ ಬಂಧನ, ಕಾಲುಂಗುರ ಅಥವಾ ಅರಿಸಿನ ಹಚ್ಚಿ ಭೂಬಂಧನದಿಂದಾಗುವ ಚಂಚಲಮನೋಭಾವವನ್ನು  ಕಡಿಮೆ ಮಾಡಬಹುದು ಎಂದು ತಿಳಿಸಿದ್ದಾರೆ ಅಷ್ಟೆ. ಕೇವಲ ಅದನ್ನು ಮಾಡಿದವರೆಲ್ಲ ಮುತ್ತೈದೆಯೆಂದಲ್ಲ ಎಂದು ವಿವರಿಸಿದರು......

‘ಸ್ತ್ರೀ’ ಎಂದರೆ ಭೂಮಿ. ಭೂಮಿಯಂತಹ ತ್ಯಾಗ , ಸಮಾಧಾನವನ್ನು ಸ್ತ್ರೀಯರು ಗಳಿಸಿಕೊಳ್ಳಬೇಕು..

  ಶ್ರೀಶೈಲ ಶಿಖರ ದರ್ಶನದ ಹಿಂದಿನ ರಹಸ್ಯವೇನು ಗೊತ್ತಾ

ನಯ ವಿನಯ ಅನುಕಂಪ ತ್ಯಾಗ ಲಜ್ಜೆ ಇವೇ ಐದು ಮುತ್ತುಗಳು.. ಇವನ್ನು ಹೊಂದಿದಾಕೆಯೇ ಮುತೈದೆ..

ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಸಣ್ಣಮಕ್ಕಳಿಂದಲೇ ಸಾಕಷ್ಟು ಆಚಾರ ವಿಚಾರಗಳ ಕುರಿತು ಪ್ರತಿಯೊಂದನ್ನು ತಾತ ಅಜ್ಜಿಯರು ಹಾಗೂ ತಂದೆತಾಯಿಗಳು ಹೇಳಿಕೊಡಬೇಕು….

।। ಶ್ರೀಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।

ಆತ್ಮೀಯ ಗುರುಭಕ್ತರೇ

ಗುರುನುಡಿ ಎಂದಿಗೂ ತಪ್ಪಾಗದು,

ನಮ್ಮ ಕೆಲಸಗಳಲ್ಲಿ ಶ್ರದ್ಧೆ, ಗುರು ಹಿರಿಯರಲ್ಲಿ ಭಕ್ತಿ, ಮತ್ತು ಹಿರಿಯರ ಮಾರ್ಗದರ್ಶನ,ನಮಗೆ ಸದಾ ಇದ್ದರೆ
ಕಾಣದ ಮಾತೃ ಹೃದಯದ ದೈವೀ ಶಕ್ತಿಯು ನಮ್ಮನ್ನು ಸನ್ಮಾರ್ಗದಲ್ಲಿ ನಡೆಯಲು ದಾರಿ ತೋರುವುದು
ಎಂದು ನಂಬಿರುವ ವಿನಮ್ರ ಭಕ್ತ..

  ನಮಸ್ಕಾರ ಪ್ರಾಮುಖ್ಯತೆ

ಶ್ರೀಸದ್ಗುರವೇ ನಮ:

ಗುರುಭ್ಯೋ_ನಮಃ 🕉

JAGADGURU VANI

!! ಶ್ರೀಕೃಷ್ಣಾರ್ಪಣಮಸ್ತು !!


Leave a Reply

Your email address will not be published. Required fields are marked *

Translate »