ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಪ್ರಕೃತಿ ದೇವರು – ಸಂರಕ್ಷಣೆ ಮಾಡುವ

*ಪ್ರಕೃತಿ*- *ದೇವರು*

*ಇವತ್ತು ದೇವಾಸ್ತನಕ್ಕೆ ಬರಬೇಡಿ, ತೀರ್ಥ ಹಾಗು ಪೂಜೆ ಮಾಡದಂತಹ ಸ್ತಿತಿಗೆ ಮನುಷ್ಯ ತಲುಪಿರುವುದು.*

*ಇದು ಯಾತಕ್ಕೆ ಆಯಿತು ?*

ಒಂದು ಕಾಲದಲ್ಲಿ ಮಣ್ಣು, ಕಲ್ಲು, ನೀರು, ಆಕಾಶ, ಬೆಂಕಿ, ಹಾಗು ಮರಗಿಡಗಳ ಸುಂದರ ಪ್ರಕೃತಿಯ- ಭೂಮಿಯ ಪೂಜೆಯಾಗುತ್ತಿತ್ತು.

ಯಾವುದೇ ಆಡಂಬರವಿಲ್ಲದೆ‌ ಸರಳ ರೀತಿಯ ಪೂಜೆ ಪ್ರತೀ ಮನುಷ್ಯನು ಮಾಡುತ್ತಿದ್ದನು.

ಇಲ್ಲಿ ಯಾರು ಬಡವ- ಶ್ರೀಮಂತನೆಂಬ ಭೇದ- ಭಾವ ಇಲ್ಲದೆ ಸರಳ ರೀತಿಯ ಪೂಜೆಯಾಗುತಿತ್ತು.

ಬಡವನಿಗೆ ಧಾನ ಮಾಡುವ ಪೂಜೆಯಾಗುತಿತ್ತು. ಅದಕ್ಕಾಗಿ ಮಾಡುವವನನ್ನು ಗೌರವಿಸುತ್ತಿದ್ದರು.

ಕಪಟ-ಅನ್ಯಾಯ- ಅಧರ್ಮ ಜಾಸ್ತಿಯಾದಂತೆ,
ಬರ- ಬರುತ್ತಾ ಇಂತಹ ಆಚರಣೆಗಳು ಆಡಂಬರದ ಪೂಜಾ ವಿಧಾನಗಳಾದವು.

ಹಣವಂತರಿಗೆ ದೊಡ್ಡ ಪೂಜೆ, ಬಡವನಿಗೆ ಸಣ್ಣ ಪೂಜೆ, ಹಣವಿಲ್ಲದವನಿಗೆ ಪೂಜೆಯ ಅವಕಾಶವಿಲ್ಲದಂತಾಯಿತು. ಹೊಟೇಲಿನ ಮೆನು ಕಾರ್ಡ್ ಗಳಂತೆ ಪ್ರತಿ ದೇವಾಸ್ಥಾನಗಳಲ್ಲಿ ತರಹ- ತರಹದ ಪೂಜಾ ವಿಧಾನಗಳು ಪ್ರಾರಂಭವಾದವು.

  ಮನೆಯಂಗಳದಲ್ಲಿ ತುಳಸಿ ಏಕಿರಬೇಕು?

ದೇವರು ಎಲ್ಲರಿಗೂ ಸಮಾನವಾಗಿರ ಬೇಕಾದಲ್ಲಿ, ಹಣವಂತರಿಗೆ ಬೇರೆ, ಬಡವನಿಗೆ ಬೇರೆ ಎಂಬ ತಾರತಮ್ಯವಾಯಿತು.

ಹಣ ಕೊಟ್ಟವರಿಗೆ ಪೂಜೆ ಮಾಡುವ ಸ್ಥಳದಲ್ಲಿ ಗೌರವ ಕೊಡಲಾಯಿತು.

ಅನೈತಿಕ ಹಾಗು ಭ್ರಷ್ಟ ವ್ಯವಸ್ಥೆಯಿಂದ ಸಂಪಾದಿಸಿದ ಹಣ ದೇವಾಸ್ಥಾನಗಳಿಗೆ ಹರಿದು ಬಂತು.

ಹಣ- ಐಶ್ವರ್ಯ ಹಾಗು ದೊಡ್ಡ- ದೊಡ್ಡ ಪೂಜಾ ವಿಧಾನದಿಂದ ದೇವರನ್ನೆ ಖರೀದಿಸುವ ಕಾರ್ಯಕ್ರಮಗಳಾದವು.

ದೇವಾಸ್ಥಾನದ ಹೆಸರಿನಲ್ಲಿ ಲಕ್ಷ- ಲಕ್ಷ ಹಣದ ಹಾಗು ಬಂಗಾರ – ಬೆಳ್ಳಿಯು ಸುರಿಯಲಾರಂಭಿಸಿತು. ಅದನ್ನು ಕದಿಯುವ ಕಳ್ಳರ ಸಮೂಹ ಹುಟ್ಟಿ ಕೊಂಡಿತು.

ದೇವರ ಕಡೆ ಹೋಗಬೇಕಾದ ಲಕ್ಷ, ಲಕ್ಷದ ಕಡೆ ಗಮನ ಹರಿಯಿತು.

ಮನೆಗೊಂದು ದೇವರು, ಕುಟುಂಬಕ್ಕೊಂದು ದೇವರು, ಪರಿಸರಕ್ಕೊಂದು ದೇವರು, ಊರಿಗೊಂದು ದೇವರು, ಗ್ರಾಮಕ್ಕೊಂದು ದೇವರು, ಪ್ರಸಿಧ್ಧಿಗೊಂದು ದೇವರು, ಕೆಲಸಕ್ಕೊಂದು ದೇವರು, ಮಕ್ಕಳು ಪಡೆಯಲು ಒಂದು ದೇವರು ಹೀಗೆ ನೂರಾರು ದೇವರ ಜನನವಾಯಿತು.

  ದೇವಾಲಯದಲ್ಲಿ ದರ್ಶನ ಮಾಡಿದ ನಂತರ ಏಕೆ ಕುಳಿತುಕೊಳ್ಳಬೇಕು?

ಇವುಗಳ ಹೆಸರಲ್ಲಿ ಚಂದಾ ಎತ್ತುವವರ ಸಂಖ್ಯೆಯೂ ಅತಿಯಾಯಿತು. ಹಣವಿಲ್ಲದಿದ್ದರೂ ಸಾಲಮಾಡಿ ಕೊಡುವ ವ್ಯವಸ್ಥೆ ಆರಂಭವಾಯಿತು. ಪ್ರತೀ ಕುಟುಂಬವೂ ದೇವರ ಕೆಲಸಕ್ಕಾಗಿ ಹಣ ಕೊಡಲೆ ಬೇಕೆಂಬ ಕಟ್ಟು- ನಿಟ್ಟುಗಳು ಪ್ರಾರಂಭವಾದವು.

ಶುಧ್ಧ ಮನಸ್ಸಿನಿಂದ ದೇವರ ಪೂಜೆ- ಭಕ್ತಿ ಮಾಡ ಬೇಕಾದಲ್ಲಿ, ಹಣ ಹಾಗು ವಸ್ತುಗಳ ಆಡಂಬರದ ಪೂಜೆಗಳು ಪ್ರಾರಂಭವಾದವು.

ಇಂತಹ ಸ್ಥಳಗಳಲ್ಲಿ ದೇವರು ಇರಬಹುದೇ ?

ಹಣ ಕೊಡದಿದ್ದರೆ ನಿಮಗೆ ಕೆಟ್ಟದಾಗುವುದೆಂಬ ಹೆದರಿಕೆಯನ್ನು ಜನರಲ್ಲಿ ಮೂಡಿಸಲು ಪ್ರಾರಂಭವಾಯಿತು. ಇಲ್ಲದಿದ್ದರೂ ಕೊಡಲೇ ಬೇಕೆಂಬ ಅನಿವಾರ್ಯತೆ ನಿರ್ಮಾಣವಾಯಿತು. ದೇವರ ಹೆಸರಿನಲ್ಲಿ ಹಣ ಕೊಡುವ ಅನ್ಯಾಯಿಯ ಅನ್ಯಾಯ ಮರೆಮಾಚಲಾಯಿತು.

ದೇವರಿಗೂ ಅಸಹ್ಯ ಪಡುವಂತಹ ಸ್ಥಿತಿ ನಿರ್ಮಾಣವಾಯಿತು. ಇಂತಹ ಸ್ಥಳಗಳಲ್ಲಿ ತಾನಿಲ್ಲವೆಂದು ತೋರಿಸಿ ಕೊಡುವಂತಹ ಪರಿಸ್ತಿತಿ ನಿರ್ಮಾಣವಾಯಿತು.

ಹೊಳೆಗಳು ಬತ್ತಿ, ಇಲ್ಲಿಗೆ ಬರಬೇಡಿ ಎಂಬ ಬೋರ್ಡ್ ಹಾಕಲಾಯಿತು, ಕೆಲವೊಮ್ಮೆ ನದಿ ಉಕ್ಕಿ ಇಲ್ಲಿ ಅಪಾಯವಿದೆ ಎಂದು ತೋರಿಸಲಾಯಿತು.

  ಸರ್ವಜ್ಞ ವಚನ 5 : ಅನ್ನ ದೇವರು

*ಇವತ್ತು ದೇವಾಸ್ಥಾನಕ್ಕೆ ಬರಬಾರದೆಂಬ ಸ್ತಿತಿ ನಿರ್ಮಾಣವಾಯಿತು.*

*ದೇವರಿಗೆ – ಪ್ರಕ್ರತಿಗೆ ಬೇಕಿರುವುದು ಮನುಷ್ಯನ ನಿಷ್ಕಲ್ಮಷ ಪ್ರೀತಿ, ಭಕ್ತಿ ಹಾಗು ಗೌರವ.*

*ಪ್ರಕ್ರತಿ- ಭೂಮಿ, ಮಣ್ಣು, ಮರಗಿಡ, ನೀರು, ಗಾಳಿ,ಗುಡ್ಡ, ಇತ್ಯಾದಿಗಳನ್ನು ನಾಶ ಮಾಡದೆ, ಉಳಿದ 14 ಲಕ್ಷ ಜೀವ ಜಂತುಗಳು ಬದುಕುವಂತೆ ಅನುವು ಮಾಡಿ ಕೊಡಬೇಕು.*

ಅದೇ ಮನುಷ್ಯರು ದೇವರಿಗೆ ಅರ್ಪಿಸುವ ಮಹಾಪೂಜೆ .

ಬೇರೆ ಎಲ್ಲಾ ಆಡಂಬರ.

*ನಮ್ಮ ಭೂಮಿಯನ್ನು ಆರಾದಿಸುವ, ಪ್ರೀತಿಸುವ, ಗೌರವಿಸುವ ಹಾಗು ಸಂರಕ್ಷಣೆ ಮಾಡುವ.*

*ಈಗಾಗಲೆ ವಾರ್ನಿಂಗ್ ಬೆಲ್ ಆಗಿರುವುದು.*

Leave a Reply

Your email address will not be published. Required fields are marked *

Translate »