ಅನ್ನ ಬ್ರಹ್ಮ ಸ್ವರೂಪಿ. ಯಾವ ಕಾರಣಕ್ಕೂ ಭಗವಂತನಿಗೆ ಅವಮಾನಿಸಬೇಡಿ…!
ನಿಮ್ಮ ಊಟ ಹೀಗಿರಲಿ
*ತಟ್ಟೆಯಲ್ಲಿ ಅನ್ನ ಬಡಿಸಿದ ತಕ್ಷಣ ಊಟ ಪ್ರಾರಂಭಿಸಿ.
*ಯಾವುದೇ ಕಾರಣಕ್ಕೂ ಊಟವನ್ನು ಕಾಯಿಸಬೇಡಿ
*ಊಟಕ್ಕಾಗಿ ನೀವು ಕಾಯ್ದರೆ ಪರವಾಗಿಲ್ಲ.
*ಊಟಕ್ಕೆ ಕುಳಿತಾಗ ಎಂದಿಗೂ ಎಡಗೈಯನ್ನು ನೆಲಕ್ಕೆ ಊರ ಬೇಡಿರಿ.
*ನಿಮಗೆ ಎಷ್ಟು ಅವಶ್ಯವೋ ಅಷ್ಟನ್ನೇ ಹಾಕಿಸಿಕೊಳ್ಳಿ.
*ತಟ್ಟೆಯಲ್ಲಿ ಎಂದಿಗೂ ಅನ್ನವನ್ನು ಚೆಲ್ಲಬೇಡಿ.
*ಊಟ ಮಾಡುವಾಗ ಊಟದ ಕೈಯನ್ನು ಜಾಡಿಸಬೇಡಿರಿ.
*ಊಟ ಮಾಡುವಾಗ ಮಾತನಾಡಬೇಡಿ. ಮಾತನಾಡುವ ಅವಶ್ಯಕತೆಯಿದ್ದರೆ ಅವಶ್ಯಕತೆ ಇದ್ದಷ್ಟೇ ಮಾತನಾಡಿ.
*ನಡುನಡುವೆ ನೀರು ಕುಡಿಯಿರಿ. ಇದು ಆಹಾರದ ಪಚನ ಕ್ರಿಯೆಗೆ ಸಹಕಾರಿ.
*ಅಡುಗೆಯನ್ನು ಅಮ್ಮ-ಅಕ್ಕ-ಹೆಂಡತಿ ಬಹಳಷ್ಟು ಇಷ್ಟಪಟ್ಟು ಶ್ರಮ ವಹಿಸಿ ತಯಾರಿಸಿರುತ್ತಾರೆ ಎಂಬುದನ್ನು ಎಂದಿಗೂ ಮರೆಯಬೇಡಿ. ಅವರಿಗೆ ಅವಮಾನವಾಗು ವಂತೆ ಅಡುಗೆಯ ಬಗ್ಗೆ ವಿಮರ್ಶೆ ಮಾಡಬೇಡಿ.
*ಉಣ್ಣುವಾಗ ತಟ್ಟೆಯ ಕೆಳಗೆ ಅನ್ನವನ್ನು ಚೆಲ್ಲಿಕೊಂಡು ಉಣ್ಣಬೇಡಿ.
*ಆಕಸ್ಮಾತಾಗಿ ತುತ್ತು ಕೆಳಕ್ಕೆ ಬಿದ್ದರೆ ಯಾವುದೇ ಸಂಕೋಚವಿಲ್ಲದೆ ಎತ್ತಿಕೊಂಡು, ಕಣ್ಣಿಗೆ ಒತ್ತಿಕೊಂಡು ಬಾಯಿಗೆ ಹಾಕಿಕೊಳ್ಳಿ.
*ತುತ್ತಿನ ಬಗ್ಗೆ ಅಲಕ್ಷ್ಯ, ತಾತ್ಸಾರ ಮಾಡಿದರೆ ಮುಂದೊಂದು ದಿನ ಒಂದೊಂದು ತುತ್ತಿಗೂ ಪರದಾಡಬೇಕಾದೀತು.
*ಉಣ್ಣುವಾಗ ನಿಮ್ಮ ಎಂಜಿಲನ್ನು ಪಕ್ಕದ ತಟ್ಟೆಗೆ ಹಾಕುವುದು ಅಥವಾ ಅವರಿಂದ ನೀವು ತೆಗೆದುಕೊಳ್ಳುವುದನ್ನು ಮಾಡಬೇಡಿ.
*ಅನ್ನ ಬ್ರಹ್ಮ ಸ್ವರೂಪಿ. ಯಾವ ಕಾರಣಕ್ಕೂ ಭಗವಂತನಿಗೆ ಅವಮಾನಿಸಬೇಡಿ.
ಶ್ರೀಕಾಂತ್ ನಾಯ್ಕ್ ಆಧ್ಯಾತ್ಮಿಕ ಚಿಂತಕರು.