ಸರ್ದಾರ್ ವಲ್ಲಭಭಾಯಿ ಪಟೇಲ್

ಒಬ್ಬ  ಲಾಯರ್ 46 ಜನ ಅಪರಾಧಿಗಳನ್ನು  ಗಲ್ಲುಶಿಕ್ಷೆಯಿಂದ ಪಾರು ಮಾಡುವುದಕ್ಕೆ ವಾದ ಮಾಡುತ್ತಿದ್ದ.

ಆಗಲೇ ಆತನ ಸಹಾಯಕ ಬಂದು ಸಣ್ಣ ಚೀಟಿಯನ್ನು  ಅವನ ಕೈಗೆ ತುರುಕಿದ.  ಅದನ್ನು ನೋಡಿದ ಆ ನ್ಯಾಯವಾದಿ, ತನ್ನ ಜೇಬಿನಲ್ಲಿ  ಅದನ್ನು ಇಟ್ಟುಕೊಂಡು,  ವಾದವನ್ನು ಮುಂದುವರಿಸಿದ.  ಮಧ್ಯಾಹ್ನದ ಊಟದ ವೇಳೆಯಾಯಿತು, ಆಗ ಜಡ್ಜ್ ನ್ಯಾಯವಾದಿಯನ್ನು ಕರೆಸಿ, “ವಾದ ಮಾಡುವಾಗ  ನಿಮಗೆ ಒಂದು ಸಂದೇಶ ಬಂದಿದ್ದು ನಾನು ನೋಡಿದೆ,  ಏನದು?”,  ಎಂದು ಕೇಳಿದರು.  ಆಗ ಆ ಲಾಯರ್, *”ನನ್ನ ಹೆಂಡತಿ ಸತ್ತಿದ್ದಾಳೆ ಜಡ್ಜ್ ಸಾಹೇಬರೇ” ಎಂದರು.*   ಆ  ಜಡ್ಜ್  ಆಘಾತ ಮತ್ತು ಆಶ್ಚರ್ಯದಿಂದ,  “ಇಲ್ಲೇನು ಮಾಡುತ್ತಿದ್ದೀರಿ ಮೊದಲು ಮನೆಗೆ ಹೋಗಿ”,  ಎಂದರು.  ಆಗ ಆ ಲಾಯರ್,  ನಾನು ನನ್ನ ಹೆಂಡತಿಯ ಜೀವವನ್ನು ಮರಳಿ ತರಲಾರೆ,  ಆದರೆ ಈ 46 ಜನರ ಜೀವವನ್ನಾದರೂ ಉಳಿಸಬಹುದು ಅಲ್ಲವೇ?  ಎಂದರು.

  ಅರ್ಜುನನ ಮಗ ಅರವಣನ ಮಹಾಭಾರತದ ಉಪ ಕತೆ

ಆ ಜಡ್ಜ್ ಒಬ್ಬ ಬ್ರಿಟಿಷ್ ಆಗಿದ್ದ, ಆ ಎಲ್ಲಾ 46 ಜನರನ್ನು ಬಿಡುಗಡೆ ಮಾಡುವುದಕ್ಕೆ  ಆದೇಶಿಸಿದ.  ಅವರೆಲ್ಲ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು.

ಆ ಲಾಯರ್ ಮತ್ತೆ ಯಾರು ಅಲ್ಲ ಸ್ನೇಹಿತರೆ, ಮಹಾನ್ ಚೇತನ *ಸರ್ದಾರ್ ವಲ್ಲಭಭಾಯಿ ಪಟೇಲ್* …

ಈಗ ಹೇಳಿ ಅವರಿಗಾಗಿ  ಆ ಮೂರ್ತಿಯು ಕೂಡ ಸಣ್ಣದೇ ಅಲ್ಲವೇ? .🙏🙏🙏🚩🚩🚩🇮🇳🇮🇳🇮🇳

Leave a Reply

Your email address will not be published.

Translate »

You cannot copy content of this page