ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಉತ್ತರಕನ್ನಡ ಜಿಲ್ಲೆಯ ಮಲೆನಾಡಿನ ಶಿರಸಿ ಮಣ್ಣಿನ ಹೆಮ್ಮೆಯ ಹೋಳಿ ಜಾನಪದ ಕಲೆ ಬೇಡರ ವೇಷ

ಉತ್ತರಕನ್ನಡ ಜಿಲ್ಲೆಯ ಮಲೆನಾಡಿನ ಶಿರಸಿ ಮಣ್ಣಿನ ಹೆಮ್ಮೆಯ ಹೋಳಿ ಜಾನಪದ ಕಲೆ ಬೇಡರವೇಶ..!

ಉತ್ತರಕನ್ನಡ ಜಿಲ್ಲೆಯ ಮಲೆನಾಡಿನ ಶಿರಸಿ ಮಣ್ಣಿನ ಹೆಮ್ಮೆಯ ಹೋಳಿ ಜಾನಪದ ಕಲೆ ಬೇಡರವೇಶ, ಇನ್ನೇನು ಶಿರಸಿಯಲ್ಲಿ ಮಾರ್ಚ್ 3 ರಿಂದ ಬೇಡರವೇಷದ ಅಬ್ಬರ ಶುರು ಆಗಿದೆ ಮಾರ್ಚ್ 6 ರ ವರೆಗೆ ಈ ಉತ್ಸವ ವಿಜೃಂಭಣೆಯಿಂದ ಜರುಗಲಿದೆ,


ಬೇಡರವೇಷ ಕಲೆಗೆ ಸುಮಾರು 300 ವರ್ಷಗಳ ಇತಿಹಾಸವಿದೆ, ತುಂಬ ಪಾವಿತ್ರತೇ ಭಯ ಭಕ್ತಿಯಿಂದ ಹಿಂದಿನಿಂದಲೂ ಈ ಕಲೆಯನ್ನು ಶಿರಸಿಯ ಜನ ನಡೆಸಿಕೊಂಡು ಬಂದಿದ್ದಾರೆ, ಹಾಗೆ ಸುಮಾರು ವರ್ಷಗಳ ಹಿಂದೆ ಯಲ್ಲಾಪುರಕ್ಕೆ ಬಂದು ನೆಲೆಸಿದ ಶಿರಸಿ ಬೇಡರವೇಶ ಸಂಪ್ರದಾಯದ ಮನೆತನದವರು ಯಲ್ಲಾಪುರದಲ್ಲೂ ಈ ಕಲೆಯನ್ನು ನಡೆಸಿಕೊಂಡು ಬಂದಿದ್ದಾರೆ, ಬೇಡರವೇಷ ಸಂಪ್ರದಾಯ ಪ್ರಾರಂಭವಾಗಲು ಬಹಳ ರೋಚಕವಾದ ಇತಿಹಾಸವಿದೇ, ಈ ಕಲೆಯ ಹುಟ್ಟಿನ ಬಗ್ಗೆ ಹುಡುಕುತ್ತ ಹೋಗುವಾಗ ನಮಗೆ ಎರಡು ಸಂಗತಿಗಳು ಸಿಗುತ್ತವೆ, ಎಲ್ಲರಿಗೂ ಗೊತ್ತಿರುವ ಪ್ರಕಾರ ಸೋದೆ ರಾಜರ ಕಾಲದ ಸೇನಾನಿ ಆಗಿದ್ದ ಬೇಡರ ಮಲ್ಲೇಶಿಯ ಹಿನ್ನಲೆ ಸಿಗುತ್ತದೆ ಊರಿನ ಗಡಿ ಕಾಯುತ್ತಿದ್ದ ವೀರ ಮಲ್ಲೇಶಿ ಸ್ಥಳಿಯ ಶ್ರೀಮಂತ ದಾಸಪ್ಪ ಶೆಟ್ಟಿಯ ಮಗಳು ರುದ್ರಾ0ಬಿಕೆಯನ್ನು ವಿವಾಹವಾಗುತ್ತಾನೆ ಮುಂದೆ ಆತನ ಬುದ್ಧಿ ಭ್ರಮಣೆಯಾಗಿ ಜನರಿಗೆ ತೊಂದರೆ ಕೊಡಲು ಪ್ರಾರಂಭಿಸಿದಾಗ ಆತನ ಪತ್ನಿಯೇ ಆತನನ್ನು ಹಿಡಿದುಕೊಟ್ಟು ರಾಜರಿಗೆ ಒಪ್ಪಿಸುತ್ತಾಳೆ ತದನಂತರ ಮಲ್ಲೆಶಿಯನ್ನು ಕಟ್ಟುಹಾಕಿ ಚಿತೆಯ ಮೇಲೆ ಧಹನ ಮಾಡಲಾಗುತ್ತದೆ ಅದೇ ಚಿತೆಯಲ್ಲಿ ಆತನ ಪತ್ನಿ ರುದ್ರಾ0ಬಿಕೆಯು ಹಾರಿ ಜೀವವನ್ನು ಅರ್ಪಿಸುತ್ತಾಳೆ ಅಂದಿನಿಂದ ಪತಿ ಪತ್ನಿಯ ವೀರಗತಿಯ ನೆನಪಿಗಾಗಿ ಬೇಡರವೇಶ ಸಂಪ್ರದಾಯ ಪ್ರಾರಂಭವಾಯಿತು ಎನ್ನುವ ಕಥೆ ಎಲ್ಲರಿಗೂ ತಿಳಿದಿದೆ ಆದರೆ ಸ್ಥಳೀಯ ಜಾನಪದ ಇತಿಹಾಸದ ಪ್ರಕಾರ ಈ ಕಲೆಗೆ ಮತ್ತೊಂದು ಕ್ರಾಂತಿವೀರರ ಹಿನ್ನಲೆಯಿದೆ ಎಂದು ಯಾರಿಗೂ ಸರಿ ತಿಳಿದಿಲ್ಲ, ಅದುವೇ ಕ್ರಾಂತಿವೀರ ಬೇಡರ ಬರಮನ ಇತಿಹಾಸ,
200 – 300 ವರ್ಷಗಳ ಹಿಂದೆ ಪರಕೀಯರ ಆಳ್ವಿಕೆಯಿಂದ ನಮ್ಮ ದೇಶ ತತ್ತರಿಸಿ ಹೋಗಿತ್ತು, ಆ ಸಂಧರ್ಭದಲ್ಲಿ ಪರಕೀಯರ ದಬ್ಬಾಳಿಕೆಯನ್ನು ಮೆಟ್ಟಿ ಹಾಕಲು ದೇಶದಲ್ಲಿ ಅನೇಕ ಕ್ರಾಂತಿಕಾರಿಗಳು ಹುಟ್ಟಿಕೊಂಡರು, ಹಾಗೆಯೇ ಉತ್ತರಕನ್ನಡ ಜಿಲ್ಲೆಯಲ್ಲೂ ಕ್ರಾಂತಿಕಾರಿಗಳ ಹೋರಾಟ ಶುರು ಆಗಿತ್ತು, ಇಂತಹ ಸಮಯದಲ್ಲಿ ಶಿರಸಿಯಲ್ಲಿ ಸ್ಥಳೀಯ ಕ್ರಾಂತಿವೀರನಾಗಿದ್ದ ಬೇಡರ ಬರಮ ಎಂಬುವ ವ್ಯಕ್ತಿ ತನ್ನ ಸ್ನೇಹಿತರಾದ ಆಲೂರು ಮುಸ್ಯ, ಇನಾಸ ಹಾಗೂ ಹೊನ್ನಾವರ ಭಾಗದಿಂದ ಬಂದಿದ್ದ ಕೂಡಲ ಕೃಷ್ಣ ಈ ನಾಲ್ಕು ಜನರ ಜೊತೆಗೂಡಿ ತಮ್ಮದೇ ಒಂದು ಕ್ರಾಂತಿಕಾರಿಗಳ ತಂಡವನ್ನು ಕಟ್ಟಿಕೊಳ್ಳುತ್ತಾನೆ, ಪರಕೀಯರ ದಬ್ಬಾಳಿಕೆಯನ್ನು ಮಟ್ಟ ಹಾಕಲು ಸಲುವಾಗಿ ಈ ನಾಲ್ಕು ಕ್ರಾಂತಿವೀರರು ಪರಕೀಯರ ಬೊಕ್ಕಸಕ್ಕೆ ಕನ್ನ ಹಾಕಿ ಚಿನ್ನ ಬಂಗಾರವನ್ನು ಬಡವರಿಗೆ ದಾನ ಮಾಡಿ ಅವರ ಜೀವನ ನಡೆಸಲು ಅನುವು ಮಾಡಿ ಕೊಡುತ್ತಿದ್ದರು, ಹೀಗೆ ಈ ಕ್ರಾಂತಿವೀರರನ್ನು ಬಂಧಿಸಲು ಫಿರಂಗಿ ಅಧಿಕಾರಿಗಳು ಶಿರಸಿ ಸೀಮೆಯಲ್ಲಿ ಬಿಗಿಯಾದ ಕಾವಲನ್ನು ಹಾಕುತ್ತಾರೆ, ಹೀಗೆ ಕ್ರಾಂತಿವೀರರು ಎಲ್ಲೂ ಕನ್ನ ಹೊಡೆಯಲು ಆಗದೆ ಬಡಜನರು ಉಪವಾಸ ಅನುಭವಿಸಲು ಶುರುಮಾಡುತ್ತಾರೆ, ನಂತರ ಈ ನಾಲ್ಕು ಜನ ಒಂದು ಅಡವಿಯಲ್ಲಿ ಹೋಗಿ ಸಂಭಾಷಣೆ ಮಾಡಿಕೊಳ್ಳುತ್ತಾರೆ ಜನರ ಸುಖ ದುಃಖಗಳಿಗೆ ಸ್ಪಂಧಿಸುವನು ದೇವರು ಆತನು ದೀನರ ಎಂದು ಕೈ ಬಿಡಲಾರ ಹೀಗಿರುವಾಗ ಹಾನಗಲ್ ಊರಿನಲ್ಲಿ ದೇವಿ ಜಾತ್ರೆ ನಡೆಯುತ್ತಿದೆ ಅಲ್ಲಿ ದೇವರಿಗೆ ಸಾಕಷ್ಟು ಬಂಗಾರ ಒಡವೆಗಳನ್ನು ಹಾಕುತ್ತಾರೆ ಜಾತ್ರೆ ಮುಗಿದ ನಂತರ ನಾವು ಅಲ್ಲಿಗೆ ಹೋಗುವ ಜಾತ್ರೆಯ ಕೊನೆಯ ದಿನ ಅವರು ದೇವಿಯ ಬಂಗಾರವನ್ನು ಒಂದು ಪೆಟ್ಟಿಗೆಯಲ್ಲಿ ಇಡುತ್ತಾರೆ ಮತ್ತು ದೇವರ ಮೂರ್ತಿಯನ್ನು ಇನ್ನೊಂದು ಪೆಟ್ಟಿಗೆಯಲ್ಲಿ ಇಡುತ್ತಾರೆ, ನಾವೂ ಆ ಒಡವೆಯ ಪೆಟ್ಟುಗೆಯನ್ನು ತಗೆದುಕೊಂಡು ಬರುವ ಮತ್ತು ಇಲ್ಲಿಯ ಬಡ ಜನರಿಗೆ ಹಂಚುವ ಎಂದು ಮಾತನಾಡಿಕೊಳ್ಳುತ್ತಾರೆ, ಹೀಗೆ ಬಲವಾದ ನಿರ್ಧಾರ ಮಾಡಿಕೊಂಡು ಈ ನಾಲ್ಕು ಕ್ರಾಂತಿವೀರರು ಮಾರುವೇಶ ಹಾಕಿ ಹಾನಗಲ್ ಜಾತ್ರೆಗೆ ಹೋಗುತ್ತಾರೆ, ಅಲ್ಲಿ ದೇವಿಯ ಜಾತ್ರೆಯ ಕೊನೆ ದಿನದ ಎಲ್ಲ ಕಾರ್ಯ ಪದ್ಧತಿಗಳು ಮುಗಿದ ನಂತರ ಹಾನಗಲ್ ಊರಿನ ಪ್ರಮುಖರು ಸಂಪ್ರದಾಯದಂತೆ ದೇವಿಯ ದಾಗಿನ ಒಡವೆಗಳನ್ನು ತಗೆದು ಒಂದು ಪೆಟ್ಟಿಗೆಯಲ್ಲಿ ಹಾಗೆ ದೇವರ ಮೂರ್ತಿಯನ್ನು ಕಳಚಿ ಇನ್ನೊಂದು ಪೆಟ್ಟಿಗೆಯಲ್ಲಿ ಹಾಕಿ ದೇವಸ್ಥಾನದ ಪಡಸಾಲೆಯಲ್ಲಿ ಇಡಲು ನಿರ್ಧರಿಸುತ್ತಾರೆ ಇದನ್ನು ಆ ಕ್ರಾಂತಿವೀರರು ಸರಿಯಾಗಿ ಕೆಳಿಸಿಕೊಂಡು ಹೋಗುತ್ತಾರೆ, ಆ ಸಂಧರ್ಭದಲ್ಲಿ ಹೊಸದಾಗಿ ನೇಮಕಗೊಂಡ ಅಂದಿನ ಧರ್ಮಶಿಯವರು ನೀವು ಪೆಟ್ಟಿಗೆ ಇಡುವ ಜಾಗ ಸರಿ ಅಲ್ಲ ಎಂದು ಒಡವೆಯ ಪೆಟ್ಟಿಗೆ ಇರುವ ಜಾಗದಲ್ಲಿ ದೇವರ ಮೂರ್ತಿ ಇರುವ ಪೆಟ್ಟಿಗೆಯನ್ನು ಇಡುತ್ತಾರೆ ಹಾಗೆ ದೇವರ ಮೂರ್ತಿ ಇರುವ ಪೆಟ್ಟಿಗೆ ಇಡುವ ಜಾಗದಲ್ಲಿ ಒಡವೆಯ ಪೆಟ್ಟಿಗೆ ಇಟ್ಟು ಅದಲು ಬದಲು ಮಾಡುತ್ತಾರೆ, ಆದರೆ ಈ ಅದಲು ಬದಲು ಮಾಡಿದ ಸಂಗತಿ ಕ್ರಾಂತಿವೀರರಿಗೆ ಗೊತ್ತಿರುವುದಿಲ್ಲ, ತಾವು ಏನು ಯೋಜನೆ ಹಾಕಿಕೊಂಡುದ್ದರೋ ಅದೇ ರೀತಿಯಾಗಿ ರಾತ್ರೆ ದೇವಸ್ಥಾನದ ಪಡಸಾಲೆಯಲ್ಲಿ ನುಗ್ಗಿ ಪೆಟ್ಟಿಗೆಯನ್ನು ನೋಡುತ್ತಾರೆ ಅಂದುಕೊಂಡ ಹಾಗೆ ಬಂಗಾರದ ಪೆಟ್ಟಿಗೆ ಎತ್ತಿ ನೋಡಿದಾಗ ಬಹಳ ಭಾರವಾಗಿ ಕಂಡುಬರುತ್ತದೆ, ಇದೆ ಬಂಗಾರದ ಪೆಟ್ಟಿಗೆ ಎಂದು ಅದನ್ನು ಎತ್ತಿಕೊಂಡು ಶಿರಸಿ ಸೀಮೆಯ ಕಡೆಗೆ ಧಾವಿಸುತ್ತಾರೆ, ಶಿರಸಿ ಬಂದು ಮುಟ್ಟುವಷ್ಟರಲ್ಲಿ ನುಸುಕಿನ ಮುಂಜಾನೆಯಾಗುರುತ್ತದೆ ಆ ಸಂಧರ್ಭದಲ್ಲಿ ಶಿರಸಿಯ ದೇವಿಕೆರೆ ಬಳಿ ಇರುವ ನಾಡಿಗೇರ್ ಕೊಪ್ಪಲದ ಜಾಗದಲ್ಲಿ ಪೆಟ್ಟಿಗೆಯನ್ನು ಇತ್ತು ಇನ್ನೇನು ಪೆಟ್ಟಿಗೆ ತೆರೆಯಬೇಕು ಅನ್ನುವಷ್ಟರಲ್ಲಿ ನಾಡಿಗೇರ್ ಅವರು ತಮ್ಮ ಆಳುಗಳ ಜೊತೆಗೆ ಕೊಪ್ಪಲವನ್ನು ವೀಕ್ಷಿಸಲು ಬರುತ್ತಾರೆ ದೊರದಿಂದ ನೋಡಿ ಯಾರದು ಎಂದು ಕೂಗುತ್ತಾರೆ ನಾಡಿಗೇರ್ ಅವರ ಆಳುಗಳು ಅವರ ಬೆನ್ನುಹತ್ತುತ್ತಾರೆ, ಆಗ ಕ್ರಾಂತಿಕಾರಿಗಳು ಆ ಪೆಟ್ಟಿಗೆಯನ್ನು ದೇವಿಕೆರೆಯಲ್ಲಿ ತಳ್ಳಿ ಒಬ್ಬ ಒಬ್ಬರು ನಾಲ್ಕು ದಿಕ್ಕಿಗೆ ಓಡಿ ಹೋಗುತ್ತಾರೆ,ಕ್ರಾಂತಿವೀರ ಬೇಡರ ಬರಮ ಸೋಂದಾ ದಿಕ್ಕಿನ ಕಡೆಗೆ ಓಡಿ ಹೋಗುತ್ತಾನೆ, ಕೆರೆಯಲ್ಲಿ ತಳ್ಳಿದ ಪೆಟ್ಟುಗೆಯನ್ನು ತಗೆದು ನಾಡಿಗೇರ್ ಅವರು ಸೋಂದಾ ರಾಜರಿಗೆ ತಿಳಿಸಿ ಪಂಚನಾಮೆ ಮಾಡುತ್ತಾರೆ, ಆಗ ಸೋಂದಾ ರಾಜರು ಊರಿನ ಪ್ರಮುಖರ ನೇತೃತ್ವದಲ್ಲಿ ಪೆಟ್ಟಿಗೆಯನ್ನು ತೆರೆದು ನೋಡಿಗಾಗ ಅದರಲ್ಲಿ ದೇವಿಯ ವಿಗ್ರಹ ಕಾಣುತ್ತದೆ, ಆಗ ಮಹಾರಾಜರು ಹೇಳುತ್ತಾರೆ ಮೂರು ದಿನದ ಮೊದಲು ಆಸಾಧಿ ಬಸವ ಹೇಳಿದ್ದ ತನ್ನ ಕನಸಿನಲ್ಲಿ ಹಾನಗಲ್ಲಿನ ದೇವಿ ಆಗ ಆಗ ಬಂದು ತಾನು ಶಿರಸಿಯಲ್ಲಿ ಬಂದು ನೆಲೆಸುತ್ತೇನೆ ಶಿರಸಿಯಲ್ಲಿ ನನಗೆ ಸ್ಥಾನ ನೀಡಬೇಕು ಎಂದು ಸೂಚನೆ ನೀಡುತ್ತುದ್ದಳು ಎಂದು ಹೇಳಿದ್ದ, ಆಸಾಧಿ ಬಸವನನ್ನು ರಾಜರು ಕರೆಸುತ್ತಾರೆ ಶಾಸ್ತ್ರದ ಪ್ರಕಾರ ದೇವರ ಮೂರ್ತಿಯನ್ನು ಜೋಡಿಸಿ ನೋಡಿದಾಗ ಅದು ಜಗನ್ಮಾತೆ ಶ್ರೀ ಮಾರಿಕಾಂಬೆಯ ಮೂರ್ತಿ ಆಗಿರುತ್ತದೆ, ನಂತರ ಸೋಂದಾ ರಾಜರ ಹಾಗೂ ಊರ ಜನರ ಸಹಕಾರದಿಂದ ತಾಯಿ ಮಾರಿಕಾಂಬೆಯನ್ನು ಪೀಠದಲ್ಲಿ ಪ್ರತಿಷ್ಠಾಪಿಸಿ ದೇವಿಗೆ ಸ್ಥಾನ ನೀಡಲಾಗುತ್ತದೆ ಹಾಗೂ ಅತೀ ವೈಭವದಿಂದ ತಾಯಿ ಮಾರಿಕಾಂಬೆಯ ಪೂಜೆ ಪುನಸ್ಕಾರಗಳನ್ನು ಪ್ರಾರಂಭ ಮಾಡಲಾಗುತ್ತದೆ, ಇನ್ನೊಂದು ಕಡೆ ಸೋಂದಾ ದಿಕ್ಕಿನ ಕಡೆಗೆ ಓಡಿ ಹೋಗಿದ್ದ ಕ್ರಾಂತಿವೀರ ಬೇಡರ ಬರಮ ಅಲ್ಲಿರುವ ಬಡ ಜನರ ಕಷ್ಟಗಳನ್ನು ನೋಡಲಾಗದೆ ಅಲ್ಲೂ ಸೋಂದಾ ರಾಜರ ಬೊಕ್ಕಸಕ್ಕೆ ಕನ್ನ ಹೊಡೆದು ಬಡ ಜನರಿಗೆ ಹಂಚಲು ಪ್ರಾರಂಭ ಮಾಡುತ್ತಾನೆ, ಹೀಗೆ ಕನ್ನ ಹೊಡೆಯುತ್ತ ಅಡವಿಯಲ್ಲಿ ಜೀವನ ಸಾಗಿಸುತ್ತ ಇರುತ್ತಾನೆ, ಹೀಗೆ ಅಡವಿಯಲ್ಲಿ ಬೋಳಮ್ಮ ಎನ್ನುವ ವೃದ್ಧೆ ಕೂಡ ವಾಸ ಮಾಡುತ್ತಿದ್ದಳು ತಾನು ಕದ್ದ ಹಣವನ್ನು ಬಡವರಿಗೆ ಹಂಚಿ ಉಳಿದ ಧನವನ್ನು ಬೋಳಮ್ಮ ಅವರಿಗೂ ಕೊಟ್ಟಿ ತನಗೆ ನಿತ್ಯ ಊಟ ಹಾಕಲು ವಿನಂತಿಸಿಕೊಳ್ಳುತ್ತಾನೆ, ಆಗ ಆ ಅಮ್ಮ ದಿನವೂ ಊಟ ಉಪಚಾರ ಕೊಟ್ಟು ರಕ್ಷಿಸುತ್ತ ಬರುತ್ತಾಳೆ, ಬೇಡರ ಬರಮನ ಕಾಟ ತಾಳಲಾರದೆ ಆತನನ್ನು ಹಿಡಿಯಲು ಆಗದೆ ಸೋಂದಾ ರಾಜರು ಬೇಡರ ಬರಮ ವಾಸಿಸುವ ಸ್ಥಳದ ಬಗ್ಗೆ ಮಾಹಿತಿ ತರಲು ಒಂದು ಗುಡಾಚಾರಿಗಳ ತಂಡವನ್ನು ನೇಮಿಸುತ್ತಾರೆ, ಊರೆಲ್ಲ ಸುತ್ತಿ ಕೇಳಿದರು ಎಲ್ಲೂ ಕೂಡ ಬರಮನ ಸುಳಿವು ಸಿಗುವುದಿಲ್ಲ ಹೀಗೆ ಒಮ್ಮೆ ಅಡವಿಯ ಕಡೆಗೆ ಶೋಧಿಸಲು ಹೋದಾಗ ಬೋಳಮ್ಮನ ಗುಡಿಸಲಿನಲ್ಲಿ ಬೇಡರ ಬರಮ ಊಟ ಮಾಡಲು ಹೋಗುವುದು ಬರುವುದನ್ನು ಗುಡಾಚಾರಿಗಳು ಗಮನಿಸುತ್ತಾರೆ, ಈ ವಿಷಯವನ್ನು ರಾಜರಿಗೆ ತಿಳಿಸುತ್ತಾರೆ, ಆಗ ಸೋಂದಾ ರಾಜರು ಬೋಳಮ್ಮಳಿಗೆ ಸ್ವಲ್ಪ ಹಣದ ಆಮಿಷ ಒಡ್ಡಿ ಮತ್ತೂ ಬರುವ ಔಷಧಿಯನ್ನು ಬರಮನ ಊಟದಲ್ಲಿ ಬೆರೆಸಲು ಹೇಳುತ್ತಾರೆ, ಅದೇ ರೀತಿ ಬೋಳಮ್ಮ ಬೇಡರ ಬರಮನ ಊಟದಲ್ಲಿ ಔಷಧಿ ಬೆರೆಸಿ ಕೊಡುತ್ತಾಳೆ ಅದನ್ನು ತಿಂದು ಬೇಡರ ಬರಮ ಪ್ರಜ್ಞೆ ತಪ್ಪಿ ಬೀಳುತ್ತಾನೆ ತಕ್ಷಣವೇ ಅಲ್ಲೇ ಇದ್ದ ಸೈನಿಕರು ಬರಮನನ್ನು ಹಗ್ಗ ಹಾಗೂ ಸರಪಾಲಿಗಳಿಂದ ಕಟ್ಟಿ ಊರಿಗೆ ತರುತ್ತಾರೆ ಅವರ ಮುಂದೆ ಸಾರುವರು ( ಅಂದರೆ ರಾಜರ ಆದೇಶವನ್ನು ತಮಟೆ ಬಾರಿಸುತ್ತ ಸಾರುವ ಜನರು ) ತಮಟೆ ಬಾರಿಸುತ್ತ ಶಿರಸಿಯಲ್ಲಿ ಬೇಡರ ಬರಮನನ್ನು ಹಿಡಿದುದ್ದಾರೋ ಅವ್ನಿಗೆ ಫಾಸಿ ಹಾಕ್ತಾರೋ…….ಎಂದು ಕೂಗುತ್ತ ಬರುತ್ತಾರೆ ತಮಟೆಯ ಶಬ್ಧ ಕೇಳಿ ಎಚ್ಚರಗೊಂಡ ಬೇಡರ ಬರಮ ತನಗೆ ಸರಪಳಿ ಕಟ್ಟಿ ಮೆರವಣಿಗೆ ಮಾಡುತ್ತಿದ್ದನು ಕಂಡು ದಿಗ್ಭ್ರಮೆಯಾಗುತ್ತಾನೆ, ಮುಂದೆ ಬೋಳಮ್ಮಳನ್ನು ನೋಡಿ ತನಗೆ ಮೋಸದಿಂದ ಹಿಡಿದು ಕೊಟ್ಟೆ ಎಂದು ರೊಚ್ಚಿಗೆದ್ದು ತನ್ನ ಸೊಂಟ ಪಟ್ಟಿಯಲ್ಲಿ ಇದ್ದ ಕತ್ತಿ ಹಿಡಿದು ಆಕೆಯನ್ನು ಹೊಡೆಯಲು ಮುಂದೆ ಹೋಗುತ್ತಾನೆ ಆಗ ಬೋಳಮ್ಮ ಬೇಡರ ಬರಮ ನನಗೆ ಸಾಯಿಸಲೀಕ್ಕೆ ಬರುತ್ತಾನೋ ಹೋ ಹೋ ಹೋ ಎಂದು ಕೂಗುತ್ತಾ ಓಡುತ್ತಾಳೆ ಆಗ ಸೈನಿಕರು ಸರಪಾಲಿಯಿಂದ ಆತನನ್ನು ಎಳೆದು ಎಳೆದು ಹಿಂದಕ್ಕೆ ತರುತ್ತಾರೆ, ಹೀಗೆ ಬೇಡರ ಬರಮ ವೀರಗತಿ ಪಡೆಯುತ್ತಾನೆ, ನಂತರ ಆತನಿಂದಲೇ ತಾಯೀ ಮಾರಿಕಾಂಬೆ ಶಿರಸಿಗೆ ಆಗಮಿಸಿದ್ದಳು ಎಂದು ಗೌರವ ರೂಪಕವಾಗಿ ಒಂದು ವರ್ಷ ಮಾರಿ ಜಾತ್ರೆ ಮತ್ತೊಂದು ವರ್ಷ ಬೇಡರ ಬರಮನ ಬೆಡರವೇಶದ ಉತ್ಸವ ಪ್ರಾರಂಭ ಮಾಡಲಾಯಿತು ಎಂದು ಹೇಳಲಾಗುತ್ತದೆ ಹೀಗೆ ಶಿರಸಿಯಲ್ಲಿ ಬೇಡರವೇಷದ ಸಂಪ್ರದಾಯ ಶುದ್ಧತೆಯಿಂದ, ಭಯ, ಭಕ್ತಿಯಿಂದ ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ, ಈ ರೀತಿಯಾಗಿ ಬೇಡರ ವೇಷ ಹಿಂದೆ ಈ ಎರಡು ಸಂಗತಿಗಳು, ಇತಿಹಾಸ ಇರುದನ್ನು ಗಮನಿಸಬಹುದು, ಇತಿಹಾಸ ತಜ್ಞರಿಂದ ಬೇಡರವೇಷ ಕಲೆ ಇತಿಹಾಸ ಬಗ್ಗೆ ಇನ್ನಷ್ಟು ಸಂಶೋಧನೆ ಆಗಲಿ ಇನ್ನಷು ನಿಖರ ಮಾಹಿತಿ ನಮಗೆಲ್ಲ ದೊರೆಯಲಿ ಎಂದು ಆಶಿಸುತ್ತೇವೆ.

  ಶ್ರೀಶೈಲ ಕ್ಷೇತ್ರ

Leave a Reply

Your email address will not be published. Required fields are marked *

Translate »