🕉 ಶ್ರೀ ಗುರುಭ್ಯೋ ನಮಃ 🕉
ಹಿಂದಿನ ಕಾಲದ ಶಿಕ್ಷಕರು ವಿದ್ಯಾರ್ಥಿಗಳಿಗೆ ಕೊಡುತ್ತಿದ್ದ ಶಿಕ್ಷೆಗೆ ಅರ್ಥ
ಏನು ಅಂತ ತಿಳಿದುಕೊಳ್ಳೋಣ :
೧) ಮೊಣಕಾಲು ಮೇಲೆ ನಿಲ್ಲಿಸಿದರೆ
“ವಿನಯವನ್ನು ರೂಢಿಸಿಕೋ” ಎಂದರ್ಥ.
೨) “ಬಾಯಿಯ ಮೇಲೆ ಬೆರಳಿಟ್ಟುಕೋ ಎಂದರೆ ಸ್ವ-ಪ್ರಶಂಸೆ ಮಾಡಿಕೊಳ್ಳಬೇಡ “ ಎಂದು.
೩) ಕಿವಿ ಹಿಡಿದು ನಿಲ್ಲೆಂದರೆ “ಒಳ್ಳೆಯ ವಿಷಯಗಳನ್ನು ಶ್ರದ್ಧೆಯಿಂದ ಕೇಳು” ಅಂತ.
೪) ಬೆಂಚಿನ ಮೇಲೆ ನಿಲ್ಲು ಅಂದರೆ “ಎಲ್ಲರಿಗಿಂತ ಓದಿನಲ್ಲಿ ಮುಂದೆ ಇರು” ಅಂತರ್ಥ.
೫) ಕೈಯೆತ್ತಿ ನಿಲ್ಲು ಅಂದರೆ
“ನಿನ್ನ ಗುರಿ ಉನ್ನತವಾಗಿ ನಿಶ್ಚಲವಾಗಿರಲಿ” ಎಂದು.
೬) ಗೋಡೆಗೆ ಮುಖಮಾಡಿ ನಿಲ್ಲು ಎಂದರೆ “ಆತ್ಮಾವಲೋಕನ ಮಾಡಿಕೋ” ಅಂತ.
೭) ತರಗತಿಯ (ಕ್ಲಾಸಿಂದ) ಹೊರಗೆ ನಿಲ್ಲಿಸಿದರೆ “ಪರಿಸರದ ಜ್ಞಾನ ಪಡೆದುಕೋ” ಎಂದು.
೮) ಕರಿಹಲಗೆ (ಬ್ಲ್ಯಾಕ್ ಬೋರ್ಡು) ಒರೆಸು ಎಂದರೆ
“ಯಾವಾಗಲೂ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಇರು” ಎಂದರ್ಥ.
೯) ಒಂದೇ ವಿಷಯವನ್ನು ಹಲವು ಬಾರಿ ಬರೆಯಲು ಹೇಳಿದರೆ “ಗೆಲುವು ಸಿಗುವವರೆಗೂ ಪ್ರಯತ್ನಿಸುತ್ತಿರು. ಸೋಲೊಪ್ಪಿಕೊಳ್ಳಬೇಡ” ಎಂದು.
ಎಷ್ಟು ಚೆನ್ನಾಗಿದೆಯಲ್ವಾ ಶಿಕ್ಷೆಯೆಂಬ ನವರತ್ನಗಳು.
ಗೂಢಾರ್ಥವ ಜೋಡಿಸಿ ಬದುಕ ತಿದ್ದುವ ಗುರುಗಳಿಗೆ ನಮೋನಮಃ