ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಆರತಿಯನ್ನು ತೆಗೆದುಕೊಳ್ಳುವಾಗ ನಾವು ಆರತಿ ತಟ್ಟೆಗೆ ಹಣವನ್ನೇಕೆ ಹಾಕಬೇಕು

ಆರತಿಯನ್ನು ತೆಗೆದುಕೊಳ್ಳುವಾಗ ನಾವು ಆರತಿ ತಟ್ಟೆಗೆ ಹಣವನ್ನೇಕೆ ಹಾಕಬೇಕು..?

ನಾವು ದೇವಸ್ಥಾನಕ್ಕೆ ಹೋದಾಗ, ಪೂಜೆಯಲ್ಲಿ ಪಾಲ್ಗೊಂಡಾಗ ಆರತಿಯನ್ನು ತೆಗೆದುಕೊಳ್ಳುವ ರೂಢಿಯನ್ನು ಹೊಂದಿರುತ್ತೇವೆ. ಆರತಿಯನ್ನು ತೆಗೆದುಕೊಳ್ಳುವಾಗ ನಾವು ಆರತಿ ತಟ್ಟೆಗೆ ಹಣವನ್ನು ಹಾಕಿ ಆರತಿಯನ್ನು ತೆಗೆದುಕೊಳ್ಳುತ್ತೇವೆ. ಆದರೆ, ಆರತಿ ತಟ್ಟೆಗೆ ನಾವು ಹಣವನ್ನೇಕೆ ಹಾಕಬೇಕೆಂಬುದು ನಿಮಗೆ ತಿಳಿದಿದೆಯೇ..? ಆರತಿ ತೆಗೆದುಕೊಳ್ಳುವಾಗ ಹಣ ನೀಡುವುದರ ಹಿಂದಿದೆ ಈ 3 ಪ್ರಮುಖ ಕಾರಣಗಳು..!

ಹಿಂದೂ ಧರ್ಮದಲ್ಲಿ ದೇವರ ಆರಾಧನೆಗ ಸಾಕಷ್ಟು ಮಹತ್ವವನ್ನು ನೀಡಲಾಗುತ್ತದೆ. ದೇವರ ಪೂಜೆಯಲ್ಲಿ ನಾವು ಅನೇಕ ನಿಯಮಗಳನ್ನು ಪಾಲಿಸುತ್ತೇವೆ. ಅವುಗಳಲ್ಲಿ ಆರತಿ ಮಾಡುವ ಪದ್ಧತಿಯು ಒಂದು. ಮನೆಯಲ್ಲಾಗಲಿ ಅಥವಾ ದೇವಸ್ಥಾನದಲ್ಲಾಗಲಿ ದೇವರ ವಿಗ್ರಹವನ್ನು ಪ್ರತಿಷ್ಠಾಪಿಸಿದ ನಂತರ ಅದಕ್ಕೆ ಕಡ್ಡಾಯವಾಗಿ ಆರತಿಯನ್ನು ಮಾಡಲಾಗುತ್ತದೆ.
ಸಾಮಾನ್ಯವಾಗಿ, ದೇವರಿಗೆ ಆರತಿಯನ್ನು ಮಾಡಿದ ನಂತರ ಆ ಆರತಿಯನ್ನು ಪೂಜೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ನೀಡುವುದನ್ನು ನೀವು ಗಮನಿಸಿರಬಹುದು. ಇಲ್ಲಿ ನಾವು ಆರತಿ ತಟ್ಟೆಗೆ ನಾಣ್ಯಗಳನ್ನಾಗಿರಬಹುದು ಅಥವಾ ನೋಟುಗಳನ್ನಾಗಿರಬಹುದು ಹಾಕುವುದನ್ನು ನೋಡಿರುತ್ತೇವೆ. ಆರತಿಯನ್ನು ಖಾಲಿ ಕೈಯಲ್ಲಿ ತೆಗೆದುಕೊಳ್ಳಬಾರದು ಎಂದು ನಮ್ಮ ಹಿರಿಯರು ಆಗಾಗ್ಗೆ ಹೇಳುತ್ತಾರೆ. ಆರತಿಯನ್ನು ತೆಗೆದುಕೊಂಡ ನಂತರ ಆರತಿ ತಟ್ಟೆಯಲ್ಲಿ ಸ್ವಲ್ಪ ಹಣವನ್ನು ಇಡಬೇಕು. ನೀವು ಕೂಡ ದೇವಸ್ಥಾನಕ್ಕೆ ಹೋದಾಗ ಅಥವಾ ಆರತಿಯನ್ನು ತೆಗೆದುಕೊಂಡಾಗ ಈ ರೀತಿ ಮಾಡಿರಬಹುದು. ಇದಕ್ಕೆ ಮುಖ್ಯ ಕಾರಣವೇನು..? ಅಂದರೆ, ಆರತಿಯನ್ನು ತೆಗೆದುಕೊಂಡ ನಂತರ ಆರತಿ ತಟ್ಟೆಯಲ್ಲಿ ನಾವು ಹಣವನ್ನೇಕೆ ಇಡಬೇಕು..? ಇದಕ್ಕೆ ಇಂದಲ್ಲ, ಬರೋಬ್ಬರಿ 3 ಪ್ರಮುಖ ಕಾರಣಗಳಿವೆ.

  ದೀಪಾವಳಿಗೆ ಲಕ್ಷ್ಮೀ ಪೂಜೆ ಮಾಡುವ ವಿಧಾನ

1. ಮೊದಲ ಕಾರಣ:
ಶ್ರೀಮದ್‌ ಭಗವದ್ಗೀತೆಯಲ್ಲಿ ಒಂದು ಶ್ಲೋಕದ ಮೂಲಕ ಅದನ್ನು ವಿವರಿಸಲಾಗಿದೆ.
ದಾತವ್ಯಮಿತಿ ಯದ್ಧಾನಂ ದೀಯತೇನುಪಕಾರಿಣೇ|
ದೇಶೇ ಕಾಲೇ ಚ ಪಾತ್ರೇ ಚ ತದ್ಧಾನಂ ಸಾತ್ವಿಕಂ ಸ್ಮೃತಂ||

  • ಅರ್ಥ:
    ದಾನ ಮಾಡುವುದು ಕರ್ತವ್ಯ. ದಾನಕ್ಕೆ ಯೋಗ್ಯವಾದ ಸಮಯವನ್ನು ಮತ್ತು ವ್ಯಕ್ತಿಯನ್ನು ನೋಡಿಕೊಂಡು ದಾನ ಮಾಡಬೇಕು. ದಾನ ಮಾಡಿದ ನಂತರ ಯಾರಿಂದಲೂ ಪರಸ್ಪರ ಪ್ರತಿಫಲವನ್ನು ನಿರೀಕ್ಷಿಸಬಾರದು. ಅದೇ ದಾನವನ್ನು ಸಾತ್ವಿಕ ದಾನವೆಂದು ಪರಿಗಣಿಸಲಾಗುತ್ತದೆ.
    ಹಿಂದೂ ಧರ್ಮದಲ್ಲಿ ದಾನ ಮಾಡುವ ಪದ್ಧತಿ ಅಥವಾ ಸಂಪ್ರದಾಯವು ಶತಮಾನಗಳಿಂದಲೂ ಇದೆ. ಯಾವಾಗಲೂ ದಾನವನ್ನು ನಾವು ದಾನ ಪಡೆದುಕೊಳ್ಳಲು ಯೋಗ್ಯರಾದವರಿಗೆ ಮಾತ್ರ ಮಾಡಬೇಕು. ದೇವಸ್ಥಾನದಲ್ಲಿ ಅರ್ಚಕರು ತಮ್ಮ ಸಂಪೂರ್ಣ ಸಮಯವನ್ನು ದೇವರ ಆರಾಧನೆಯಲ್ಲಿ, ಮಂತ್ರಗಳ ಪಠಣೆಯಲ್ಲಿ, ದೇವರ ಸೇವೆಯಲ್ಲಿ, ಭಕ್ತಿಯಲ್ಲಿ ಕಳೆಯುತ್ತಾರೆ. ಅರ್ಚಕರು ನಮಗಾಗಿ ಪೂಜೆಯನ್ನು ಮಾಡುತ್ತಾರೆ. ಈ ಕಾರಣಕ್ಕಾಗಿ ನಾವು ದೇವಸ್ಥಾನಕ್ಕೆ ಹೋದಾಗ ಆರತಿ ತಟ್ಟೆಗೆ ಹಣವನ್ನು ಹಾಕಬೇಕೆನ್ನುವುದು ಮೊದಲ ಕಾರಣವಾಗಿದೆ.
  ಪೂರ್ವಜರ ಮಾತಿದು ಮರಿಬ್ಯಾಡ

2. ಎರಡನೇ ಕಾರಣ:
ಆರತಿ ತಟ್ಟೆಯಲ್ಲಿ ಹಣವನ್ನು ಹಾಕುವುದರ ಹಿಂದಿನ ಎರಡನೇ ಕಾರಣವೆಂದರೆ, ದೇವಸ್ಥಾನದಲ್ಲಿ ದೇವರಿಗೆ ಪೂಜೆ ಮಾಡುವ ಅರ್ಚಕರು ಪೂಜೆಯನ್ನು ಬಿಟ್ಟು ಇನ್ನಾವುದೇ ಕೆಲಸವನ್ನು ಮಾಡುವುದಿಲ್ಲ. ಅವರಿಗೆ ಬೇರಾವುದೇ ಆದಾಯ ಮೂಲಗಳು ಇರುವುದಿಲ್ಲ. ದೇವಸ್ಥಾನದಿಂದ ಅಥವಾ ಭಕ್ತರಿಂದ ಸಿಗುವ ದೇಣಿಗೆಯೇ ಅವರಿಗೆ ಮತ್ತು ಅವರ ಕುಟುಂಬಕ್ಕೆ ಜೀವನಾಧಾರವಾಗಿರುತ್ತದೆ. ಈ ಕಾರಣಕ್ಕಾಗಿ ಪ್ರಾಚೀನ ಕಾಲದಿಂದಲೂ ಆರತಿ ತಟ್ಟೆಯಲ್ಲಿ ಹಣ ಇಡುವ ಪದ್ಧತಿಯನ್ನು ರೂಢಿಸಿಕೊಂಡು ಬಂದರು ಎನ್ನಲಾಗುತ್ತದೆ.

3. ಮೂರನೇ ಕಾರಣ:
ಈ ಮೇಲಿನ ಎರಡೂ ಕಾರಣವನ್ನು ಹೊರತು ಪಡಿಸಿ, ಆರತಿ ತಟ್ಟೆಯಲ್ಲಿ ಹಣವನ್ನು ಇಡುವುದಕ್ಕೆ ಇನ್ನೂ ಒಂದು ಕಾರಣವಿದೆ. ಈ ಕಾರಣಕ್ಕೆ ಸಂಬಂಧಿಸಿದಂತೆ, ಆರತಿ ತಟ್ಟೆಯಲ್ಲಿ ಹಣ ಇಡುವ ಸಂಪ್ರದಾಯವನ್ನು ತಾಯಿ ಹಸುವಿನ ಸೇವೆಗಾಗಿ ಮಾಡಲಾಗಿದೆ ಎನ್ನುವ ಪ್ರತೀತಿಯೂ ಇದೆ. ಇದರ ಪ್ರಕಾರ, ಆರತಿ ತಟ್ಟೆಯಲ್ಲಿ ಸಂಗ್ರಹಿಸಿದ ಹಣವನ್ನು ಗೋಮಾತೆಯ ಸೇವೆಗೆ ಬಳಸಲಾಗುತ್ತದೆ. ಹಿಂದೆ ಅನೇಕ ದೇವಾಲಯಗಳಲ್ಲಿ ಗೋಶಾಲೆಯನ್ನು ನಡೆಸುವುದು, ಗೋವುಗಳಿಗೆ ಸೇವೆ ನೀಡಲಾಗುತ್ತಿತ್ತು. ಈ ಕಾರಣಕ್ಕಾಗಿ ಆರತಿ ತಟ್ಟೆಗೆ ಹಣವನ್ನು ಹಾಕುವ ಮೂಲಕ ಗೋ ಸೇವೆಗೆ ಸಹಾಯ ಮಾಡುತ್ತಿದ್ದರು.
ಇಂದಿಗೂ ಕೂಡ ಆರತಿ ತಟ್ಟೆಗೆ ನಾವು ಹಣವನ್ನು ಹಾಕುತ್ತೇವೆ. ಆದರೆ, ಕೆಲವರು ಇದರ ಹಿಂದಿನ ಕಾರಣವನ್ನು ತಿಳಿದು ಆರತಿ ತಟ್ಟೆಗೆ ಹಣವನ್ನು ಹಾಕಿದರೆ, ಇನ್ನು ಕೆಲವರು ಇದರ ಹಿಂದಿನ ಕಾರಣವನ್ನು ತಿಳಿಯದೆ ಆರತಿ ತಟ್ಟೆಗೆ ಹಣವನ್ನು ಹಾಕುತ್ತಿದ್ದರು.

Leave a Reply

Your email address will not be published. Required fields are marked *

Translate »