ಪ್ರಾಚೀನ ಕಲೆಗಳಲ್ಲಿ ಒಂದಾದ ‘ರಂಗೋಲಿ’
ರಂಗವಲ್ಲಿ ಎಂಬ ಸಂಸ್ಕೃತ ಪದದಿಂದ ಬಂದಿದೆ .ಮನೆಯ ಮುಂದಿನ ರಂಗೋಲಿ ಮನೆಯ ಕಳೆಯನ್ನು ಹೆಚ್ಚಿಸುತ್ತದೆ.ಹೆಣ್ಣು ಮಕ್ಕಳ ಅಚ್ಚುಮೆಚ್ಚಿನ ಈ ಕಲೆಯ ಹಿಂದಿನ ವೈಜ್ಞಾನಿಕ ವಿಚಾರ ಇಲ್ಲಿದೆ.
ಸೂರ್ಯೋದಯದ ಸುಮಾರು ೨-೩ ತಾಸುಗಳ ಅವಧಿಯಲ್ಲಿ ರಂಗೋಲಿ ಹಾಕುವುದು ನಮ್ಮ ಸಂಪ್ರದಾಯ .ಈ ಅವಧಿಯಲ್ಲಿ ಸೂರ್ಯನ ಕಿರಣಗಳಿಂದ ಏತೇಚ್ಛವಾಗಿ ವಿಟಮಿನ್ -ಡಿ ಜೀವಸತ್ವ ನಮ್ಮ ದೇಹಕ್ಕೆ ದೊರೆಯುತ್ತದೆ.( ಇದು ನಮ್ಮ ಮೂಳೆಗಳಿಗೆ ಅತ್ಯವಶ್ಯಕ).
ರಂಗೋಲಿ ಪುಡಿಯಲ್ಲಿರುವ ರಾಸಾಯನಿಕ ಘಟಕಗಳು ಸೂರ್ಯನ ಕಿರಣಗಳನ್ನು ಹೀರಿಕೊಂಡು ಆರೋಗ್ಯಕರ ವಾತಾವರಣವನ್ನು ಸೃಷ್ಟಿಸುತ್ತದೆ.
ರಂಗೋಲಿ ಹಾಕುವಾಗ ನಮ್ಮ ಕೈ,ಕಾಲುಗಳಿಗೆ ವ್ಯಾಯಾಮ ಸಹ ದೊರೆಯುತ್ತದೆ.
ಹಸ್ತಮುದ್ರಿಕ ಹಾಗೂ ಯೋಗ ವಿಜ್ಞಾನದ ಪ್ರಕಾರ ರಂಗೋಲಿ ಹಾಕುವಾಗ ನಮ್ಮ ತೂರುಬೆರಳುಗಳಿಗೆ ಹೆಬ್ಬೆರಳಿನಿಂದ ಒತ್ತಡ ಸಿಗುವುದರಿಂದ ದೇಹದಲ್ಲಿ ಸಕಾರಾತ್ಮಕ ಶಕ್ತಿ ಬಿಡುಗಡೆಯಾಗುತ್ತದೆ.
ಮನೆಯ ಮುಂದೆ ರಂಗೋಲಿ ಇದ್ದರೆ ಅದು ಅತಿಥಿಗಳಿಗೆ ಆಹ್ವಾನವಿದ್ದಂತೆ.ಇದರಿಂದ ಆಕರ್ಷಿತರಾದ ಅತಿಥಿಗಳು ಸಂತೋಷದಿಂದ ಮನೆಯೊಳಗೆ ಪ್ರವೇಶಿಸುತ್ತಾರೆ.
ಕೆಲವು ಕ್ಲಿಷ್ಟಕರ ರಂಗೋಲಿ ಹಾಕುವುದರಿಂದ ಮನಸ್ಸಿನ ಏಕಾಗ್ರತೆ ಹೆಚ್ಚುತ್ತತೆ.ಹೆಣ್ಣುಮಕ್ಕಳ ಜಾಣ್ಮೆ ,ಆಸಕ್ತಿಯನ್ನು ಎತ್ತಿತೋರುತ್ತದೆ.
ನರವಿಜ್ಞಾನದ(neuroscience) ಪ್ರಕಾರ ಬಣ್ಣಗಳು ಹಾಗೂ ವಿವಿಧ ರೇಖೆಗಳಿಂದ ಮೂಡಿರುವ ಚಿತ್ರಗಳು ಬಹುಬೇಗ ನಮ್ಮ ಮೆದುಳಿಗೆ ತಲುಪುತ್ತವೆ ಹಾಗೂ ಮೆದುಳಿನಕೋಶಗಳನ್ನು ಉತ್ತೇಜಿಸುತ್ತವೆ.(stimulate brain cells).
ಹಿಂದಿನ ಕಾಲದ ಆಚರಣೆಯ ಪ್ರಕಾರ ಮನೆಯ ಮುಂದೆ ರಂಗೋಲಿ ಇದ್ದರೆ ಮನೆಯಲ್ಲಿ ಎಲ್ಲವೂ
ಶುಭಪ್ರದವಾಗಿದೆ ಎಂದರ್ಥ.
ಈ ಎಲ್ಲಾ ಕಾರಣಗಳಿಂದ ಈ ಪದ್ದತಿಗೆ ಮಾನ್ಯತೆ ನೀಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ.